ಬಿಗಿ ಉಡುಪು ಧರಿಸಿದ್ದಾರೆಂಬ ಕಾರಣಕ್ಕೆ ಯುವತಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನ್!
Team Udayavani, Aug 9, 2021, 11:21 AM IST
ಕಾಬೂಲ್: ಬಿಗಿ ಉಡುಪು ಧರಿಸಿದ್ದಾರೆ ಮತ್ತು ಪುರುಷ ಸಂಬಂಧಿ ಜೊತೆಗಿಲ್ಲದ ಕಾರಣಕ್ಕೆ ಯುವತಿಯೊಬ್ಬರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಕೊಂದು ಹಾಕಿದ ಘಟನೆ ಅಫ್ಘಾನಿಸ್ಥಾನದ ಉತ್ತರ ಬಲ್ಖ್ ಪ್ರಾಂತ್ಯದಲ್ಲಿ ನಡೆದಿದೆ.
ತಾಲಿಬಾನ್ ನಿಯಂತ್ರಣದಲ್ಲಿರುವ ಸಮರ್ ಖಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಫ್ಘಾನಿಸ್ಥಾನದ ರೇಡಿಯೊ ಆಜಾದಿ ವರದಿ ಮಾಡಿದೆ.
ಕೊಲೆಯಾದ ಯುವತಿಯನ್ನು 21 ವರ್ಷದ ನಜನಿನ್ ಎಂದು ಗುರುತಿಸಲಾಗಿದೆ. ಈಕೆ ಮನೆಯಿಂದ ಮಜರ್ ಎ ಶರೀಫ್ ಪಟ್ಟಣಕ್ಕೆ ಹೋಗಲೆಂದು ವಾಹನ ಹತ್ತುತ್ತಿದ್ದಾಗ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ವೇಳೆ ಆಕೆ ಬುರ್ಖಾ ಧರಿಸಿದ್ದಳು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ!
ಆದರೆ ತಾವು ಈ ದಾಳಿ ನಡೆಸಿಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ. ತಾಲಿಬಾನ್ ನಿಯಂತ್ರಣಕ್ಕೆ ಪಡೆದ ಬಳಿಕ ಅಫ್ಘಾನಿಸ್ಥಾನದಲ್ಲಿ ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ.