ಹುಡುಗಿಯರಿಗೆ ಹೈಸ್ಕೂಲ್ ಕಲಿಯಲು ಅವಕಾಶ ನೀಡಿದ ತಾಲಿಬಾನ್; ಆದರೆ ಷರತ್ತು ಅನ್ವಯ
Team Udayavani, Mar 18, 2022, 11:47 AM IST
ಕಾಬೂಲ್: ಹೆಣ್ಣು ಮಕ್ಕಳಿಗೆ ಶಾಲೆಯಲ್ಲಿ ಕಲಿಯಲು ಅವಕಾಶ ನೀಡುವುದಾಗಿ ತಾಲಿಬಾನ್ ಹೇಳಿದೆ. ಮುಂದಿನ ವಾರದಿಂದ ಅಫ್ಘಾನಿಸ್ಥಾನದಲ್ಲಿ ಹೈಸ್ಕೂಲ್ ಆರಂಭವಾಗಲಿದ್ದು, ಹುಡುಗಿಯರಿಗೂ ಹೈಸ್ಕೂಲ್ ತೆರೆಯಲಿದೆ ಎಂದು ತಾಲಿಬಾನ್ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಸದಾ ವಿರೋಧವಿರುವ ತಾಲಿಬಾನ್ ಹೆಣ್ಣು ಮಕ್ಕಳ ಶಿಕ್ಷಣವನ್ನೂ ಈ ಹಿಂದೆ ವಿರೋಧ ಮಾಡಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಿಕ್ಷಣ ಇಲಾಖೆ ವಕ್ತಾರ ಅಜಿಜ್ ಅಹಮದ್ ರಯಾನ್, “ಎಲ್ಲಾ ಹುಡುಗರು ಮತ್ತು ಹುಡುಗಿಯರಿಗೆ ಎಲ್ಲಾ ಶಾಲೆಗಳು ತೆರೆಯಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಯುದ್ಧಾಪರಾಧಿ ಯಾರು?ತೀರ್ಮಾನ ಹೇಗೆ…ಯಾವುದು ವಾರ್‌ಕ್ರೈಂ
ಆದರೆ ಹುಡುಗಿಯರ ಶಿಕ್ಷಣ ವಿಚಾರದಲ್ಲಿ ಕೆಲವು ನಿರ್ಬಂಧಗಳಿವೆ. ಹುಡುಗಿಯರಿಗೆ ಪ್ರತ್ಯೇಕವಾಗಿ ಪಾಠ ಮಾಡಲಾಗುತ್ತದೆ. ಹುಡುಗಿಯರಿಗೆ ಮಹಿಳಾ ಶಿಕ್ಷಕಿಯರೇ ಪಾಠ ಮಾಡುತ್ತಾರೆ. ಮಹಿಳಾ ಶಿಕ್ಷಕಿಯರು ಕಡಿಮೆ ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ವಯಸ್ಸಾದ ಹಿರಿಯ ಪುರುಷ ಶಿಕ್ಷಕರು ಬಾಲಕಿಯರಿಗೆ ಪಾಠ ಮಾಡುತ್ತಾರೆ ಎಂದು ವಕ್ತಾರ ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರವನ್ನು ಉರುಳಿಸಿದ ತಾಲಿಬಾನ್ ತನ್ನ ಸರ್ಕಾರ ರಚನೆ ಮಾಡಿತ್ತು. ಹುಡುಗಿಯರು ಮತ್ತು ಮಹಿಳೆಯರಿಗೆ ಶಾಲೆಗಳು ಮತ್ತು ಕಾಲೇಜುಗಳಿಗೆ ಅವಕಾಶ ನೀಡುವುದು ಅಂತಾರಾಷ್ಟ್ರೀಯ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್ನಲ್ಲಿ ಪೋಸ್ಟ್, ಲೈಕ್ ರಿಪ್ಲೈ ಗೆ ಅವಕಾಶ
Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್ ಮೇಲೆ ಹಲವು ರಾಷ್ಟ್ರಗಳ ಒತ್ತಡ