ಬಾಂಧವ್ಯ ವೃದ್ಧಿಗಾಗಿ ಮಾತುಕತೆ; ಪ್ರಮುಖ ನಾಯಕರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ


Team Udayavani, Nov 17, 2022, 7:20 AM IST

ಬಾಂಧವ್ಯ ವೃದ್ಧಿಗಾಗಿ ಮಾತುಕತೆ; ಪ್ರಮುಖ ನಾಯಕರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ

ಜಿ20 ರಾಷ್ಟ್ರಗಳ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖ ರಾಷ್ಟ್ರಗಳ ನಾಯಕರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಆಸ್ಟ್ರೇಲಿಯಾ,ಇಟಲಿಯ ಪ್ರಧಾನಮಂತ್ರಿ ಗಳು ಹಾಗೂ ಅಧ್ಯಕ್ಷರ ಜತೆಗೆ ಮಾತುಕತೆಗಳನ್ನು ನಡೆಸಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶಕ್ಕೆ ಹಲವು ರೀತಿಗಳಲ್ಲಿ ಅನುಕೂಲವೂ ಆಗಲಿದೆ.

ಭಾರತಕ್ಕೆ 3 ಸಾವಿರ ವೀಸಾ ಕೊಡುಗೆ
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯು.ಕೆ.ವತಿಯಿಂದ 18-30 ವರ್ಷ ವಯೋಮಿತಿ ಯವರಿಗೆ ಪ್ರತೀ 3 ಸಾವಿರ ವೀಸಾಗಳನ್ನು ನೀಡುವ ಬಗ್ಗೆ ರಿಷಿ ಸುನಕ್‌ ಘೋಷಣೆ ಮಾಡಿದ್ದಾರೆ.

ಇದರಿಂದಾಗಿ ಯು.ಕೆ.ಯಲ್ಲಿ ಶಿಕ್ಷಣ ಪೂರ್ತಿ ಗೊಳಿಸಿ 2 ವರ್ಷಗಳ ವರೆಗೆ ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ಸಿಗಲಿದೆ. ವ್ಯಾಪಾರ, ವಾಣಿಜ್ಯ, ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಹೊಂದಿರುವ ಸಹಕಾರವನ್ನು ಮತ್ತಷ್ಟು ವೃದ್ಧಿಸಲು ಉಭಯ ನಾಯಕರು ನಿರ್ಧರಿಸಿದ್ದಾರೆ. ರಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆಯನ್ನು ಭಾರತ ಬಯಸುತ್ತಿದೆ. ಈ ನಿಟ್ಟಿನಲ್ಲಿ ಯು.ಕೆ. ಯ ನೆರವು ಅಗತ್ಯವಾಗಿದೆ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. 2030ರ ಒಳಗಾಗಿ ಬಾಂಧವ್ಯ ಸುಧಾರಣೆಯ ನಿಟ್ಟಿನಲ್ಲಿ ಇರುವ ಮಾರ್ಗಸೂಚಿ ಅನುಷ್ಠಾನಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಜರ್ಮನಿ ಜತೆಗೆ ಆರ್ಥಿಕ, ರಕ್ಷಣೆ ಸಹಕಾರ
ಜರ್ಮನಿಯ ಚಾನ್ಸಲರ್‌ ಒಲಾಫ್ ಶೋಲ್ಜ್ ಜತೆಗಿನ ಮಾತುಕತೆ ವೇಳೆ ಆರ್ಥಿಕ ಮತ್ತು ರಕ್ಷಣ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಪ್ರಧಾನಿ ಮೋದಿಯವರು ಶೋಲ್ಜ್ ಜತೆಗಿನ ಮಾತುಕತೆ ತೃಪ್ತಿದಾಯಕವಾಗಿತ್ತು ಎಂದು ಟ್ವೀಟ್‌ ಮಾಡಿದ್ದಾರೆ.

ವ್ಯಾಪಾರ, ರಕ್ಷಣ ಸಹಕಾರ, ವಿತ್ತೀಯ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ನಿರ್ಧರಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಮೋದಿ ಮತ್ತು ಶೋಲ್ಜ್ ನಡುವೆ ಹಾಲಿ ವರ್ಷದಲ್ಲಿ ಮೂರನೇ ಭೇಟಿಯಾಗಿದೆ. ಮೇ 2ರಂದು ಬರ್ಲಿನ್‌ನಲ್ಲಿ ಮೊದಲ ಬಾರಿಗೆ ಇಬ್ಬರ ನಡುವೆ ಮಾತುಕತೆಗಳು ನಡೆದಿತ್ತು.

ಜಗತ್ತಿನ ಅಭ್ಯುದಯಕ್ಕಾಗಿ ಬಾಂಧವ್ಯ
ಜಗತ್ತಿನ ಅಭ್ಯುದಯಕ್ಕಾಗಿ ಭಾರತ ಮತ್ತು ಫ್ರಾನ್ಸ್‌ ನಡುವೆ ಉತ್ತಮ ರೀತಿಯ ಬಾಂಧವ್ಯ ಹೊಂದಿರಬೇಕು ಎಂದು ನರೇಂದ್ರ ಮೋದಿ ಮತ್ತು ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಪ್ರತಿಪಾದಿಸಿದ್ದಾರೆ.

ಪ್ರಧಾನಿ ಮೋದಿ ಗೌರವಾರ್ಥ ಫ್ರಾನ್ಸ್‌ನ ಅಧ್ಯಕ್ಷರು ಭೋಜನಕೂಟವವನ್ನೂ ಏರ್ಪಡಿಸಿದ್ದರು. ರಕ್ಷಣೆ, ಇಂಧನ, ವ್ಯಾಪಾರ ಮತ್ತು ಆಹಾರ ಭದ್ರತಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್‌ ಸಹಕಾರ ವೃದ್ಧಿಗೊಳಿಸಲು ಒಪ್ಪಿಕೊಂಡಿದ್ದಾರೆ. ಆಹಾರ ಮತ್ತು ಇಂಧನ ಪೂರೈಕೆ ಬಿಕ್ಕಟ್ಟು ತಗ್ಗಿಸುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನೂ ಪರಿಶೀಲಿಸಿದ್ದಾರೆ.

ವ್ಯೂಹಾತ್ಮಕ ಬಾಂಧವ್ಯಕ್ಕೆ ನಿರ್ಧಾರ
ಭಾರತದ ಜತೆಗೆ ವ್ಯೂಹಾತ್ಮಕ ಬಾಂಧವ್ಯ ಹೊಂದಲು ಬಯಸುವುದಾಗಿ ಆಸ್ಟ್ರೇಲಿ ಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಹೇಳಿ ದ್ದಾರೆ. ಬಾಲಿಯಲ್ಲಿ ಪ್ರಧಾನಿ ಮೋದಿ ಯವರನ್ನು ಭೇಟಿಯಾದ ವೇಳೆ ಅವರು ಈ ಅಂಶ ವ್ಯಕ್ತಪಡಿಸಿದ್ದಾರೆ.

ಭೇಟಿಯ ಬಳಿಕ ಟ್ವೀಟ್‌ ಮಾಡಿದ ಪ್ರಧಾನಿಯವರು ಎರಡೂ ದೇಶಗಳ ನಡುವೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಆಸೀಸ್‌ ಪ್ರಧಾನಿ ಜತೆಗೆ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಫ‌ಲ ನೀಡಲಿದೆ ಎಂದು ಬರೆದುಕೊಂಡಿದ್ದಾರೆ.

ಮೋದಿ ಮಾತಿಗೆ ಮನ್ನಣೆ
ಜಿ20 ರಾಷ್ಟ್ರಗಳ ಸಮ್ಮೇಳ ನದ ಮುಕ್ತಾಯದಲ್ಲಿ ಅಂಗೀಕಾರಗೊಂಡಿರುವ ನಿರ್ಣಯದಲ್ಲಿ ಪ್ರಧಾನಿ ಮೋದಿ ಅವರು ಸೆಪ್ಟಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರಿಗೆ ಹೇಳಿದ್ದ ಕಿವಿಮಾತು “ಈಗ ಯುದ್ಧದ ಕಾಲ ಅಲ್ಲ’ ಎಂಬ ಅಂಶವನ್ನು ಪ್ರಧಾನವಾಗಿ ಸೇರ್ಪಡೆ ಮಾಡಲಾಗಿದೆ. ಅದನ್ನು ಅಂಗೀಕರಿಸುವ ನಿಟ್ಟಿನಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸದಸ್ಯ ರಾಷ್ಟ್ರಗಳ ನಾಯಕರ ಜತೆಗೆ ಬಿರುಸಿನ ಸಮಾಲೋ ಚನೆ ನಡೆಸಿದ್ದರು. ಉಕ್ರೇನ್‌ ಬಿಕ್ಕಟ್ಟು ಮುಕ್ತಾಯಕ್ಕೆ ಶಾಂತಿಯುತ ಮಾರ್ಗವೇ ಸೂಕ್ತ ಎಂಬ ಅಂಶವನ್ನು ನಿರ್ಣಯದಲ್ಲಿ ಪ್ರಧಾನವಾಗಿ ಉಲ್ಲೇಖೀಸಲಾಗಿದೆ.

ಟಾಪ್ ನ್ಯೂಸ್

1-awsasa

ಇದು ಸಾಮೂಹಿಕ ವೈಫಲ್ಯ: ಸರಣಿ ಸೋಲಿನ ಬಳಿಕ ರೋಹಿತ್ ಶರ್ಮಾ

1-ased

ಅಮೆರಿಕದಲ್ಲೂ ಖಲಿಸ್ತಾನಿ ಪರ ಧ್ವನಿ ; ಭಾರತೀಯ ಹೈಕಮಿಷನ್ ಗೆ ಬಿಗಿ ಭದ್ರತೆ

1-cc

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

tdy-17

ಸಣ್ಣಕಥೆಗಳು: ರೂಪ-ವಿರೂಪ

1-weqwwqewe

ಕ್ಸಿಗೆ ಪುಟಿನ್ ವಿದಾಯ ಹೇಳುತ್ತಿದ್ದಂತೆ ರಷ್ಯಾದಿಂದ ಉಕ್ರೇನ್ ನಗರಗಳ ಮೇಲೆ ದಾಳಿ

1-sdsad

ಮುಗ್ದ ಭಾವದ ಮೂಲಕ ಪದ್ಮಶ್ರೀ ಸ್ವೀಕರಿಸಿದ ಹಿರ್ಬಾಯಿ ಇಬ್ರಾಹಿಂ ಲೋಬಿ; ವಿಡಿಯೋ

PM Modi

ಕೋವಿಡ್ ಉಲ್ಬಣ; ಮಾಸ್ಕ್ ಧರಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ased

ಅಮೆರಿಕದಲ್ಲೂ ಖಲಿಸ್ತಾನಿ ಪರ ಧ್ವನಿ ; ಭಾರತೀಯ ಹೈಕಮಿಷನ್ ಗೆ ಬಿಗಿ ಭದ್ರತೆ

1-weqwwqewe

ಕ್ಸಿಗೆ ಪುಟಿನ್ ವಿದಾಯ ಹೇಳುತ್ತಿದ್ದಂತೆ ರಷ್ಯಾದಿಂದ ಉಕ್ರೇನ್ ನಗರಗಳ ಮೇಲೆ ದಾಳಿ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

imf

ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್‌ ಡಾಲರ್‌ ನೆರವು

ಯುಎಸ್‌ ಹಣಕಾಸು ಆಯೋಗಕ್ಕೆ ಭಾರತೀಯಳು ನಾಮನಿರ್ದೇಶನ

ಯುಎಸ್‌ ಹಣಕಾಸು ಆಯೋಗಕ್ಕೆ ಭಾರತೀಯಳು ನಾಮನಿರ್ದೇಶನ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-awsasa

ಇದು ಸಾಮೂಹಿಕ ವೈಫಲ್ಯ: ಸರಣಿ ಸೋಲಿನ ಬಳಿಕ ರೋಹಿತ್ ಶರ್ಮಾ

1-ased

ಅಮೆರಿಕದಲ್ಲೂ ಖಲಿಸ್ತಾನಿ ಪರ ಧ್ವನಿ ; ಭಾರತೀಯ ಹೈಕಮಿಷನ್ ಗೆ ಬಿಗಿ ಭದ್ರತೆ

1-cc

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

tdy-17

ಸಣ್ಣಕಥೆಗಳು: ರೂಪ-ವಿರೂಪ

1-weqwwqewe

ಕ್ಸಿಗೆ ಪುಟಿನ್ ವಿದಾಯ ಹೇಳುತ್ತಿದ್ದಂತೆ ರಷ್ಯಾದಿಂದ ಉಕ್ರೇನ್ ನಗರಗಳ ಮೇಲೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.