ಅಮೆರಿಕಾದಲ್ಲಿ ತೆಲಂಗಾಣ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಬರ್ಬರ ಹತ್ಯೆ
Team Udayavani, Nov 18, 2018, 11:22 AM IST
ಹೈದರಾಬಾದ್: ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ಮುಂದುವರಿದಿದ್ದು, ನ್ಯೂಜೆರ್ಸಿಯ ವೆಂಟ್ನೊàರ್ ಎಂಬಲ್ಲಿ ನವೆಂಬರ್ 15 ರಂದು ತೆಲಂಗಾಣ ಮೂಲದ 61 ವರ್ಷ ಪ್ರಾಯದ ಸುನೀಲ್ ಎಡ್ಲಾ ಎನ್ನುವವರನ್ನು 16 ವರ್ಷದ ಬಾಲಕನೊಬ್ಬ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಹತ್ಯೆ ಆರೋಪಿಯಾಗಿರುವ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲಂಗಾಣದ ಮೇಧಕ್ ಜಿಲ್ಲೆಯವರಾದ ಸುನೀಲ್ ಎಡ್ಲಾ ಅಟ್ಲಾಂಟಿಕ್ ನಗರದಲ್ಲಿ ನೈಟ್ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ 8 ಗಂಟೆಯ ವೇಳೆಗೆ ಕೆಲಸಕ್ಕೆಂದು ಹೊರಡುತ್ತಿದ್ದ ವೇಳೆ ಮನೆಯ ಎದುರಿಗೆ ಬಂದ ಬಾಲಕ ಗುಂಡಿಕ್ಕಿ ಹತ್ಯೆಗೈದು ಕಾರಿನೊಂದಿಗೆ ಪರಾರಿಯಾಗಿದ್ದ.
ಸುನೀಲ್ ಅವರು 1987 ರಲ್ಲೇ ಅಮೆರಿಕಕ್ಕೆ ತೆರಳಿ ವೃತ್ತಿ ಮಾಡುತ್ತಿದ್ದರು. ಈ ತಿಂಗಳ ಕೊನೆಯಲ್ಲಿ ತಾಯಿಯ 95 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತಕ್ಕೆ ಬರುವವರಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸುನೀಲ್ ಅವರು ಅಟ್ಲಾಂಟಾದ ಚರ್ಚ್ನಲ್ಲಿ ಪಿಯಾನೋವನ್ನು ಬಾರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್