ಈ ರೋಗ ಬಂದರೆ 24 ಗಂಟೆಯೊಳಗೆ ಸಾವು ಖಚಿತ

Team Udayavani, Nov 14, 2019, 9:55 PM IST

ಪ್ಲೇಗ್‌ಗಳಲ್ಲಿ ಅತೀ ಅಪಾಯಕಾರಿ ಕಾಯಿಲೆಯಾದ ನ್ಯುಮೋನಿಕ್‌ ಪ್ಲೇಗ್‌ಗೆ ಚೀನದ ಇಬ್ಬರು ತುತ್ತಾಗಿದ್ದು, ಇದುವರೆಗೂ ಈ ಕಾಯಿಲೆಗೆ ಒಳಗಾದವರ ಪೈಕಿ ಯಾರು ಬದುಕುಳಿದಿಲ್ಲ ಎಂಬ ಆತಂಕಾರಿ ಅಂಶವನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ಭಯಾನಕ ಕಾಯಿಲೆಯ ಕುರಿತು ಮಾಹಿತಿ ಇಲ್ಲಿದ್ದು, ಹೇಗೆ ಮತ್ತು ಈ ರೋಗದ ಗುಣಲಕ್ಷಣಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಏನಿದು ನ್ಯುಮೋನಿಕ್‌ ಪ್ಲೇಗ್‌
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನ್ಯುಮೋನಿಕ್‌ ಪ್ಲೇಗ್‌ ಅತ್ಯಂತ ಗಂಭೀರ ಸ್ವರೂಪದ ರೋಗವಾಗಿದ್ದು, ಉಸಿರಾಟದ ಮೂಲಕ ಮನುಷ್ಯನಿಂದ ಮನುಷ್ಯನಿಗೆ ಹರಡುವ ಖಾಯಿಲೆಯಾಗಿದೆ.

700 ವರ್ಷಗಳ ಹಿಂದೆ ಯುರೋಪನ್ನು ಕಾಡಿದ್ದ ‘ಕಪ್ಪು ಸಾವು’
ಸುಮಾರು 700 ವರ್ಷಗಳ ಹಿಂದೆ ಯುರೋಪಿನ ಜನಸಂಖ್ಯೆಯ ಶೇ.60 ರಷ್ಟು ಜನರನ್ನು ಬಲಿ ತೆಗೆದುಕೊಂಡಿದ್ದ ಈ ಕಾಯಿಲೆಯನ್ನು ‘ಕಪ್ಪು ಸಾವು’ ಎಂದು ಕರೆಯಲಾಗುತ್ತದೆ. 1800 ರ ದಶಕದ ಉತ್ತರಾರ್ಧದಲ್ಲಿ, ಈ ರೋಗವು ಚೀನ, ಹಾಂಗ್‌ಕಾಂಗ್‌ ಮತ್ತು ಹತ್ತಿರದ ಬಂದರು ನಗರಗಳಲ್ಲಿ ಲಕ್ಷಾಂತರ ಜನರನ್ನು ಕೊಂದಿದೆ.

ಲಕ್ಷಣಗಳೇನು ?
ಜ್ವರ,ದೌರ್ಬಲ್ಯ ತಲೆನೋವು, ವಾಕರಿಕೆ, ಉಸಿರಾಟದ ತೊಂದರೆ,ಎದೆ ನೋವು, ಕೆಮ್ಮು, ರಕ್ತಸಿಕ್ತ ಅಥವಾ ನೀರಿನ ಕಫ‌ ಈ ಕಾಯಿಲೆಯ ಗುಣಲಕ್ಷಣಗಳಾಗಿವೆ.

3,200 ಕ್ಕೂ ಹೆಚ್ಚು ಪ್ರಕರಣಗಳು
2010 ಮತ್ತು 2015ರ ನಡುವೆ ವಿಶ್ವಾದ್ಯಂತ 3,200 ಕ್ಕೂ ಹೆಚ್ಚು ಪ್ಲೇಗ್‌ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 584 ಮಾರಣಾಂತಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

24 ಗಂಟೆಯಲ್ಲಿ ಸಾವು
ಚೀನದ ಮಂಗೋಲಿಯಾ ಪ್ರದೇಶದ ಇಬ್ಬರಲ್ಲಿ ಈ ರೋಗದ ಲಕ್ಷಣ ಕಾಣಿಸಿಕೊಂಡಿದ್ದು, ಓರ್ವನಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿನ ಮಾಧ್ಯಮಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಈ ಕಾಯಿಲೆ ಬಂದ 24 ಗಂಟೆಯೊಳಗೆ ರೋಗಿ ಸಾಯುತ್ತಾನೆ ಎಂದು ಹೇಳಲಾಗುತ್ತಿದೆ.

200 ಮಂದಿ ಸಾವನ್ನಪಿದ್ದಾರೆ

ಇದುವರೆಗೆ ಈ ಕಾಯಿಲೆ ಬಂದ 24 ಗಂಟೆಯೊಳಗೆ 200 ಮಂದಿ ಸಾವನ್ನಪಿದ್ದು, ಈ ಹಿಂದೆ ನಡೆದ ಸಂಶೋಧನೆಯೊಂದರ ವರದಿ ಪ್ರಕಾರ ಈ ಕಾಯಿಲೆಗೆ ತುತ್ತಾದವರು ಯಾರು ಬದುಕುಳಿದಿಲ್ಲ ಎಂದು ಹೇಳಲಾಗಿದೆ.

ಧೃಡಪಡಿಸಿದ ಅಧಿಕಾರಿಗಳು
ಅಲ್ಲಿನ ಸ್ಥಳೀಯ ಆರೋಗ್ಯ ಅಧಿಕಾರಿಗಳು ಮಂಗಳವಾರ ಈ ಕಾಯಿಲೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ಪತ್ತೆ ಆಗಿರುವ ಅಂಶವನ್ನು ದೃಡಪಡಿಸಿದ್ದು, ನಿಯಂತ್ರಣ ಕ್ರಮಗಳು ಜಾರಿಯಲ್ಲಿವೆ ಎಂದು ಹೇಳಿದ್ದಾರೆ.

ಸದ್ಯ ಚೀನದಲ್ಲಿ ಈ ರೋಗಕ್ಕೆ ತುತ್ತಾದವರ ರೋಗಿಗಳ ಕುರಿತು ಹೆಚ್ಚುವರಿ ಮಾಹಿತಿ ಮತ್ತು ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿಕೊಂಡಿರುವ ಅಲ್ಲಿನ ಮಾಧ್ಯಮಗಳು ಜನರಿಗೆ ಎಚ್ಚರ ವಹಿಸುವಂತೆ ಆದೇಶ ನೀಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ