ಬ್ರೆಕ್ಸಿಟ್‌ ವಾಣಿಜ್ಯ ಒಪ್ಪಂದಕ್ಕೆ ಸಹಿ: ಬ್ರಿಟನ್ ಪ್ರಧಾನಿ ಜಾನ್ಸನ್ ಘೋಷಣೆ


Team Udayavani, Dec 25, 2020, 12:17 PM IST

ಬ್ರೆಕ್ಸಿಟ್‌ ವಾಣಿಜ್ಯ ಒಪ್ಪಂದಕ್ಕೆ ಸಹಿ: ಬ್ರಿಟನ್ ಪ್ರಧಾನಿ ಜಾನ್ಸನ್ ಘೋಷಣೆ

ಬ್ರುಸೆಲ್ಸ್‌/ಲಂಡನ್‌: ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ಕಗ್ಗಂಟಾಗಿ ಉಳಿದಿದ್ದ ಬ್ರೆಕ್ಸಿಟ್‌ ವಾಣಿಜ್ಯ ಒಪ್ಪಂದಕ್ಕೆ ಕೊನೆಗೂ ಸಹಮತ ವ್ಯಕ್ತವಾಗಿದೆ. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಈ ಬಗ್ಗೆ ಟ್ವೀಟ್‌ ಮಾಡಿ “ನಾವು ಬ್ರೆಕ್ಸಿಟ್‌ ವ್ಯಾಪಾರ ಒಪ್ಪಂದ ಸಾಧಿಸಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಜತೆಗೆ ಲಂಡನ್‌ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ನಮ್ಮ ದೇಶದ ಗಡಿಗಳನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಒಪ್ಪಂದ ಅಂತಿಮಗೊಳಿಸುವ ಬಗ್ಗೆ ಬಿರುಸಿನ ಮಾತುಕತೆಗಳು ನಡೆದಿದ್ದವು. ಆದರೆ ಅಂತಿಮವಾಗಿ ಸಹಮತಕ್ಕೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಸ್ವತಂತ್ರ ರಾಷ್ಟ್ರದ ನೆಲೆಯಲ್ಲಿ ನಮ್ಮ ವ್ಯಾಪಾರ- ಉದ್ದಿಮೆ ವಲಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಜಾನ್ಸನ್‌ ಹೇಳಿದ್ದಾರೆ.

ಬ್ರುಸೆಲ್ಸ್‌ನಲ್ಲಿ ಮಾತನಾಡಿದ ಐರೋಪ್ಯ ಒಕ್ಕೂಟ ವಾಣಿಜ್ಯ ಆಯುಕ್ತ ಉಸುಲಾ ವಂಡೆರ್‌ ಲೆಯಾನ್‌ ಕೂಡ ಪ್ರತಿಕ್ರಿಯೆ ನೀಡಿ, “ಅಂತಿಮವಾಗಿ ನಾವು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ’ ಎಂದಿದ್ದಾರೆ. ಡಿ.31ರ ಒಳಗಾಗಿ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಗಡುವು ವಿಧಿಸಲಾಗಿತ್ತು.

2016ರಲ್ಲಿ ನಡೆದಿದ್ದ ಅಭೂತಪೂರ್ವ ಮತದಾನದಲ್ಲಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಬಗ್ಗೆ ಒಮ್ಮತದ ಜನಾಭಿಪ್ರಾಯ ವ್ಯಕ್ತವಾಗಿತ್ತು. ಆದರೆ ವ್ಯಾಪಾರ ಒಪ್ಪಂದದ ಬಗ್ಗೆ ಯಾವುದೇ ಸಹಮತ ವ್ಯಕ್ತವಾಗಿರಲಿಲ್ಲ. ಒಪ್ಪಂದದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್‌ನ ಅರ್ಥ ವ್ಯವಸ್ಥೆಗೆ ಇದರಿಂದ ತಕ್ಷಣದ ಲಾಭ ಸಿಗಲಾರದು. ಏಕೆಂದರೆ ಕೊರೊನಾ ಸೋಂಕಿನಿಂದ ಅರ್ಥ ವ್ಯವಸ್ಥೆಗೆ ಭಾರಿ ಹಿನ್ನಡೆ ಉಂಟಾಗಿದೆ ಎಂದಿದ್ದಾರೆ.

ಇದೇ ವೇಳೆ ಹೊಸ ಒಪ್ಪಂದದಿಂದಾಗಿ ಬ್ರಿಟನ್‌ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಜತೆಗೆ ವ್ಯಾಪಾರ ವಹಿವಾಟು ನಡೆಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಬೇಕಾಗಿದೆ

ಟಾಪ್ ನ್ಯೂಸ್

1-fdsfsdf

ಮೊಮ್ಮಗಳ ನಿಧನ : ಜಿ.ಟಿ. ದೇವೇಗೌಡರಿಗೆ ಪ್ರಧಾನಿ ಮೋದಿ ಸಾಂತ್ವನ ಪತ್ರ

1-d-fsfsf

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ: ರೈತರ ಆಕ್ರೋಶ

27

ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ

21nirani

ದಲಿತ ಯುವಕನ ಹತ್ಯೆ: ಆರೋಪಿಗಳಿಗೆ ಕಠಿಣ ಕಾನೂನು ಕ್ರಮ: ಸಚಿವ ನಿರಾಣಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

ಢಾಕಾ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 10 ವಿಕೆಟ್‌ ಜಯಭೇರಿ

20death

ಕುಣಿಗಲ್‌: ಪ್ರತ್ಯೇಕ ಪ್ರಕರಣ ಇಬ್ಬರು ನೇಣುಬಿಗಿದು ಆತ್ಮಹತ್ಯೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಲಾಭ ಗಳಿಸಿದ ಷೇರು ಯಾವುದು…

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಮೇ.27ರಂದು ಲಾಭ ಗಳಿಸಿದ ಷೇರು ಯಾವುದು…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12 ಲಕ್ಷ ರೂ. ಖರ್ಚುಮಾಡಿ ನಾಯಿಯಾದ ವ್ಯಕ್ತಿ!

12 ಲಕ್ಷ ರೂ. ಖರ್ಚು ಮಾಡಿ ನಾಯಿಯಾದ ವ್ಯಕ್ತಿ!

ಅಮೆರಿಕ ಟೆಕ್ಸಾಸ್‌ ಶಾಲೆ ದುರಂತ : ನನಸಾಗಲೇ ಇಲ್ಲ ಮಕ್ಕಳ ಕನಸುಗಳು

ಅಮೆರಿಕ ಟೆಕ್ಸಾಸ್‌ ಶಾಲೆ ದುರಂತ : ನನಸಾಗಲೇ ಇಲ್ಲ ಮಕ್ಕಳ ಕನಸುಗಳು

ಕಠ್ಮಂಡು: ವಿಶ್ವದ ಅತಿ ಕಡಿಮೆ ಎತ್ತರದ ತರುಣನೀತ

ಕಠ್ಮಂಡು: ವಿಶ್ವದ ಅತಿ ಕಡಿಮೆ ಎತ್ತರದ ತರುಣನೀತ

ಅಬುಧಾಬಿಯಲ್ಲಿ ಸಿಲಿಂಡರ್‌ ಸ್ಫೋಟ: ಭಾರತೀಯ ಸಾವು

ಅಬುಧಾಬಿಯಲ್ಲಿ ಸಿಲಿಂಡರ್‌ ಸ್ಫೋಟ: ಭಾರತೀಯ ಸಾವು

ಅಂತಿಮ ಗಡುವು:ಅಪಾರ ಬೆಂಬಲಿಗರೊಂದಿಗೆ ಇಸ್ಲಾಮಾಬಾದ್ ಗೆ ಲಗ್ಗೆ ಇಟ್ಟ ಇಮ್ರಾನ್, ಸೇನೆ ನಿಯೋಜನೆ

ಅಂತಿಮ ಗಡುವು:ಅಪಾರ ಬೆಂಬಲಿಗರೊಂದಿಗೆ ಇಸ್ಲಾಮಾಬಾದ್ ಗೆ ಲಗ್ಗೆ ಇಟ್ಟ ಇಮ್ರಾನ್, ಸೇನೆ ನಿಯೋಜನೆ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

1-sfsfsdf

ಜೂನ್ 1-3 ; ಕೊರಟಗೆರೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಸುವರ್ಣ ಮಹೋತ್ಸವ

1-fdsfsdf

ಮೊಮ್ಮಗಳ ನಿಧನ : ಜಿ.ಟಿ. ದೇವೇಗೌಡರಿಗೆ ಪ್ರಧಾನಿ ಮೋದಿ ಸಾಂತ್ವನ ಪತ್ರ

1-d-fsfsf

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ: ರೈತರ ಆಕ್ರೋಶ

ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!

ತಿಂಗಳಾಡಿ: ಹೆಚ್ಚಾದ ಕಳ್ಳರ ಹಾವಳಿ; ಸೀಯಾಳ ಕದ್ದು ಕುಡಿದ ಕಳ್ಳರು..!

1-sdffsdf

ನದಿಗೆ ಬಿಯರ್ ಬಾಟಲಿ: ಗೋವಾದಲ್ಲಿ ಪ್ರವಾಸಿಗರ ವಾಹನ ಬೆನ್ನಟ್ಟಿ ದಂಡ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.