ಅಮೆರಿಕ, ಚೀನ ನಡುವಿನ “ತೆರಿಗೆ ಸಮರ’ ಮುಂದಕ್ಕೆ

Team Udayavani, Dec 3, 2018, 12:30 PM IST

ಬ್ಯುನೋಸ್‌ ಏರ್ಸ್‌: ಜಗತ್ತಿನ ಎರಡು ದೈತ್ಯ ಆರ್ಥಿಕ ಶಕ್ತಿಗಳಾದ ಅಮೆರಿಕ, ಚೀನ ದೇಶಗಳ ನಡುವಿನ “ತೆರಿಗೆ ಸಮರ’ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಜಿ-20 ಶೃಂಗಸಭೆಗಾಗಿ ಬ್ಯುನೋಸ್‌ ಐರಿಸ್‌ಗೆ ಆಗಮಿ ಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಸಭೆಯ ಬಳಿಕ ಶುಕ್ರವಾರ ರಾತ್ರಿ ನಡೆಸಿದ ಮಾತುಕತೆ ತಕ್ಕಮಟ್ಟಿಗೆ ಫ‌ಲಪ್ರದ ವಾಗಿದ್ದು, ಅಮೆರಿಕ ಪ್ರವೇಶಿಸುವ ಚೀನದ ಉತ್ಪನ್ನ ಗಳಿಗೆ ಮೇಲಿನ ತೆರಿಗೆ ಹೆಚ್ಚಿಸುವ ನಿರ್ಧಾರವನ್ನು 90 ದಿನಗಳ ಕಾಲ ಮುಂದೂಡಲು ಟ್ರಂಪ್‌ ನಿರ್ಧರಿಸಿದ್ದಾರೆ.  

ಪ್ರತಿ ವರ್ಷ, ಅಮೆರಿಕ ಪ್ರವೇಶಿಸುವ ಚೀನದ ಉತ್ಪನ್ನಗಳಿಂದ ಅಂದಾಜು 14 ಲಕ್ಷ ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತದೆ. ಇದರ ಮೇಲೆ ಸದ್ಯಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಅದನ್ನು ಶೇ. 25ಕ್ಕೆ ಹೆಚ್ಚಿಸಲು ಟ್ರಂಪ್‌ ನಿರ್ಧರಿಸಿದ್ದರು. ಇದು ಜಾರಿ ಯಾದರೆ, ಚೀನಾ ಕೂಡ ತನ್ನ ನೆಲ ಪ್ರವೇಶಿಸುವ ಅಮೆರಿಕದ ಸಾಮಗ್ರಿಗಳಿಗೆ ದುಬಾರಿ ತೆರಿಗೆ ಹೇರಲು ನಿರ್ಧರಿಸಿತ್ತು. ಇದು ಜಾರಿಯಾಗಿದ್ದರೆ ಅದು ವಿಶ್ವದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ