ಥೆರೇಸಾ ಮೇ ರಾಜೀನಾಮೆ

ಜೂನ್‌ 7 ಕ್ಕೆ ಪಕ್ಷದ ಹುದ್ದೆಗೆ ರಾಜೀನಾಮೆ ನಿರ್ಧಾರ

Team Udayavani, May 25, 2019, 6:00 AM IST

ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದಕ್ಕೆ ಸಂಬಂಧಿಸಿದಂತೆ ಸ್ವಪಕ್ಷ ಮುಖಂಡರ ವಿಶ್ವಾಸ ಗಳಿಸುವಲ್ಲಿ ವಿಫ‌ಲವಾದ್ದರಿಂದ ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಥೆರೇಸಾ, ಜೂನ್‌ 7 ರಂದು ಕನ್ಸರ್ವೇಟಿವ್‌ ಪಕ್ಷದ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ನಂತರ ಜೂನ್‌ 10 ರಿಂದ ಹೊಸ ಪ್ರಧಾನಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ. ಹೊಸ ಪ್ರಧಾನಿ ಆಯ್ಕೆಯಾಗುವವರೆಗೂ ಥೆರೇಸಾ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ನಾನು ಎರಡನೇ ಮಹಿಳಾ ಪ್ರಧಾನಿಯಾಗಿದ್ದೆ. ಆದರೆ ಕೊನೆಯ ಮಹಿಳಾ ಪ್ರಧಾನಿಯಲ್ಲ. ನನ್ನನ್ನು ಪ್ರೀತಿಸುವ ದೇಶಕ್ಕಾಗಿ ನಾನು ಸೇವೆ ಸಲ್ಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ರಾಜೀನಾಮೆ ನಿರ್ಧಾರ ಕುರಿತಂತೆ ರಾಣಿ ಎರಡನೇ ಎಲಿಜಬೆತ್‌ಗೆ ಮಾಹಿತಿ ನೀಡಿರುವುದಾಗಿ ಅವರು ಹೇಳಿದ್ದಾರೆ. ಥೆರೇಸಾ ಮೇ ರಾಜೀನಾಮೆ ಸರಿಯಾದ ನಿರ್ಧಾರ ಎಂದು ವಿಪಕ್ಷ ಲೇಬರ್‌ ಪಾರ್ಟಿಯ ಮುಖ್ಯಸ್ಥ ಜೆರೆಮಿ ಕಾರ್ಬಿನ್‌ ಹೇಳಿದ್ದಾರೆ.

ಬ್ರೆಕ್ಸಿಟ್ ಒಪ್ಪಂದವನ್ನು ಅಂತಿಮಗೊಳಿಸಲು ಮಾರ್ಚ್‌ 29 ಕೊನೆಯ ದಿನವಾಗಿತ್ತಾದರೂ, ಬ್ರೆಕ್ಸಿಟ್ ಕುರಿತ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದುದರಿಂದ ಈ ಅವಧಿಯಲ್ಲಿ ಒಪ್ಪಂದ ಅಂತಿಮಗೊಳಿಸಲು ಬ್ರಿಟನ್‌ಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 31ರ ವರೆಗೆ ಕಾಲಾವಕಾಶ ಕೇಳಲಾಗಿದೆ. ಹೊಸ ಪ್ರಧಾನಿಯ ಮೊದಲ ಆದ್ಯತೆಯೇ ಬ್ರೆಕ್ಸಿಟ್ ಒಪ್ಪಂದವನ್ನು ಅಂತಿಮಗೊಳಿಸುವುದಾಗಿರುತ್ತದೆ.

•ಜೂ.10 ರಿಂದ ಬ್ರಿಟನ್‌ಗೆ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭ
•ಬ್ರೆಕ್ಸಿಟ್ ಒಪ್ಪಂದದಲ್ಲಿ ಪಕ್ಷ, ವಿಪಕ್ಷದ ಮುಖಂಡರ ಒಮ್ಮತ ಸಾಧ್ಯವಾಗದ ಕಾರಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಾಷಿಂಗ್ಟನ್‌: ಇಬ್ಬರು ಮಹಿಳಾ ಗಗನಯಾತ್ರಿಗಳು ಸ್ಪೇಸ್‌ ವಾಕ್‌ ಮಾಡುವ ಮೂಲಕ ದಾಖಲೆ ಮಾಡಿದ್ದಾರೆ. ಈ ಹಿಂದೆ ಪುರುಷ ಮತ್ತು ಮಹಿಳೆ ಜೋಡಿ ಸ್ಪೇಸ್‌ ವಾಕ್‌ ಮಾಡಿತ್ತಾದರೂ,...

  • ಕಾಬೂಲ್‌: ಶುಕ್ರವಾರದ ಪ್ರಾರ್ಥನೆ ವೇಳೆ ಪೂರ್ವ ಅಫ್ಘಾನಿಸ್ಥಾನದ ಮಸೀದಿಯೊಂದರ ಮೇಲೆ ಉಗ್ರರು ಬಾಂಬ್‌ ಸ್ಫೋಟಿಸಿದ್ದು, ಪರಿಣಾಮ 62 ಮಂದಿ ಮೃತಪಟ್ಟು, 36 ಮಂದಿ ಗಾಯಗೊಂಡಿದ್ದಾರೆ....

  • ಟೋಕಿಯೋ: ಜಪಾನ್‌ ರಾಜ ಮನೆತನದ ಭವಿಷ್ಯ ಈಗ 13 ವರ್ಷದ ಬಾಲಕ ಹಿಸಾಹಿಟೋ ಮೇಲೆ ನಿಂತಿದೆ. ರಾಜ ಮನೆತನದಲ್ಲಿ ಗಂಡು ಸಂತಾನ ವಿರಳವಾಗಿರುವ ಕಾರಣ, ಹಾಲಿ ದೊರೆಯ ಪದತ್ಯಾಗ...

  • ವಿಶ್ವವಿದ್ಯಾಲಯದಿಂದ ಅಮಾನತುಗೊಂಡ ವಿದ್ಯಾರ್ಥಿ ಗೆಳೆಯರೊಂದಿಗೆ ಕುಡಿದು ಮಾಡಿದ ಕೆಲಸವನ್ನು ಕೇಳಿದರೆ ನಿಜಕ್ಕೂ ನೀವು ಆಶ್ಚರ್ಯಚಕಿತರಾಗುತ್ತೀರಾ !. ಹೌದು...

  • ವಾಷಿಂಗ್ಟನ್: ಜಾಗತಿಕವಾಗಿ ಎಂಬಿಎ ಪದವಿಧರರಿಗೆ ಬೇಡಿಕೆ ಸದ್ಯದ ಮಟ್ಟಿಗೆ ಇಳಿಕೆಯಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 6.9 ಬೇಡಿಕೆ ಇಳಿಕೆಯಾಗಿದೆ. ಅಮೆರಿಕದ...

ಹೊಸ ಸೇರ್ಪಡೆ