ಪ್ರಪಾತಕ್ಕುರುಳಿದ ಟೈಗರ್ ವುಡ್ಸ್ ಕಾರು: ಗಂಭೀರ ಗಾಯಗೊಂಡ ಪ್ರಸಿದ್ಧ ಗಾಲ್ಫರ್
Team Udayavani, Feb 24, 2021, 9:16 AM IST
ಕ್ಯಾಲಿಫೋರ್ನಿಯಾ: ವಿಶ್ವ ಪ್ರಸಿದ್ಧ ಗಾಲ್ಫರ್ ಟೈಗರ್ ವುಡ್ಸ್ ಅವರಿದ್ದ ಕಾರು ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಕ್ಯಾಲಿಫೊರ್ನಿಯಾದಲ್ಲಿ ಮಂಗಳವಾರ. ಅದೃಷ್ಟವಶಾತ್ ಟೈಗರ್ ವುಡ್ಸ್ ಪ್ರಾಣಾಪಯದಿಂದ ಪಾರಾಗಿದ್ದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೈಗರ್ ವುಡ್ಸ್ ಅವರ ಕಾಲಿಗೆ ಬಲವಾಗಿ ಗಾಯವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆದಿದೆ ಎಂದು ವೈದ್ಯರ ವರದಿ ತಿಳಿಸಿದೆ.
ಇದನ್ನೂ ಓದಿ:ಮೊಟೆರಾ ನೈಟ್ಸ್ : ಕ್ರಿಕೆಟ್ ‘ರಾಜಾಂಗಣ’ದಲ್ಲಿಂದು ಪಿಂಕ್ ಬಾಲ್ ಟೆಸ್ಟ್
ಅಪಘಾತದ ಭೀಕರತೆಗೆ ಟೈಗರ್ ವುಡ್ಸ್ ಅವರ ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ಲಾಸ್ ಏಂಜಲಿಸ್ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ. ಮಂಗಳವಾರ ಬೆಳಗ್ಗೆ 7.12ರ ಸುಮಾರಿಗೆ ಬ್ಲ್ಯಾಕ್‌ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್‌ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿರುವಾಗ ವುಡ್ಸ್ ಕಾರು ಅಪಘಾತಕ್ಕೀಡಾಗಿದೆ.
ಸಾವಿನ ದವಡೆಯಲ್ಲಿದ್ದ ಟೈಗರ್ ವುಡ್ಸ್ ಅವರನ್ನು ಪಾರು ಮಾಡಲಾಗಿದೆ. ಗಾಯಗೊಂಡಿದ್ದ ಅವರನ್ನು ಅ್ಯಂಬುಲೆನ್ಸ್ ಮೂಲಕ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
45 ವರ್ಷದ ಗಾಲ್ಫರ್ ಟೈಗರ್ ವುಡ್ಸ್ 15 ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ವುಡ್ಸ್ ಈ ಹಿಂದೆ 2009ರಲ್ಲಿ ಭೀಕರ ಅಪಘಾತಕ್ಕೀಡಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು