ಹಜ್ ಯಾತ್ರೆ ರದ್ದು ಸಂಭವ ; ಸಿದ್ಧತೆಗೆ ಸಮಯದ ಅಭಾವ
ಸಮಯ ಮೀರಿದೆ ಎಂದ ಸೌದಿ ಸರ್ಕಾರ
Team Udayavani, Jun 18, 2020, 6:30 AM IST
ರಿಯಾದ್: ಇಸ್ಲಾಂ ಧರ್ಮೀಯರ ಪವಿತ್ರ ಧಾರ್ಮಿಕ ಪ್ರವಾಸವೆನಿಸಿರುವ ಹಜ್ ಯಾತ್ರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರದ್ದಾಗುವ ಸಾಧ್ಯತೆಯಿದೆ.
ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಉಂಟಾಗಿದ್ದ ಕಾರಣಕ್ಕಾಗಿ, ಹಜ್ ಯಾತ್ರೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವ ಸಮಯ ಮೀರಿದೆ ಎಂದು ಈ ಸೌದಿ ಅರೇಬಿಯಾ ಸರಕಾರ ತಿಳಿಸಿದೆ.
ಲಾಕ್‌ಡೌನ್ ನಿಯಮಗಳು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ, ಜುಲೈ ಅಂತ್ಯಕ್ಕೆ ಸಾಮಾನ್ಯವಾಗಿ ಜರುಗುವ ಯಾತ್ರೆಗೆ ಅವಕಾಶ ಕಲ್ಪಿಸುವ ಬಗ್ಗೆ ಮುಸ್ಲಿಂ ರಾಷ್ಟ್ರಗಳು ಸೌದಿಯ ಮೇಲೆ ಒತ್ತಡ ಹೇರಲಾರಂಭಿಸಿವೆ.
ಇದಕ್ಕೆ ಉತ್ತರಿಸಿರುವ ಸೌದಿಯ ಅಧಿಕಾರಿಯೊಬ್ಬರು, “ಯಾತ್ರೆ ವೇಳೆ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಬಂಧನೆಗಳನ್ನು ಪಾಲಿಸುವುದು ಕಷ್ಟವಾಗಲಿದೆ. ಹಾಗಾಗಿ, ಯಾತ್ರೆ ನಡೆಸಬೇಕೇ, ಬೇಡವೇ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಹಜ್ ಯಾತ್ರೆಯ ಸಿದ್ಧತೆಗಳನ್ನು ಮುಂದೂಡುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ತಿಳಿಸಿದ್ದ ಕಾರಣ ಕಳೆದ ಬಾರಿಯಷ್ಟು ಯಾತ್ರಿಕರು ಈ ಬಾರಿಯ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಲ್ಲ. ಇಂಡೋನೇಷ್ಯಾ, ಮಲೇಷ್ಯಾ, ಸೆನೆಗಲ್, ಸಿಂಗಾಪುರಗಳು ಹಜ್ ಯಾತ್ರೆಯಿಂದ ಹಿಂದಕ್ಕೆ ಸರಿಯುವುದಾಗಿ ಪ್ರಕಟಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡ ಕಾಂಬೋಡಿಯಾ ಪ್ರಧಾನಿ : ಅಸಲಿ ಕಾರಣ ಇಲ್ಲಿದೆ
ಸಂಸತ್ ಚುನಾವಣೆ : ಸ್ಕಾಟ್ಮಾರಿಸನ್ ನೇತೃತ್ವದ ಆಸ್ಟ್ರೇಲಿಯನ್ ಲಿಬರಲ್ ಪಾರ್ಟಿಗೆ ಸೋಲು
ದಕ್ಷಿಣ ಕೊರಿಯಾ ಸೇನಾ ಕವಾಯತು ವಿಸ್ತರಣೆ
ಇಂಗ್ಲೆಂಡಿನ ದಂಡಿ ವಿ.ವಿ.ಗೆ ಅಶ್ವತ್ಥನಾರಾಯಣ ಭೇಟಿ : ಜೀವವಿಜ್ಞಾನ ಅಧ್ಯಯನಕ್ಕೆ ಆಸಕ್ತಿ
ಹಣ ಪಾವತಿಗೆ ನಗು ಸಾಕು! ಮಾಸ್ಟರ್ಕಾರ್ಡ್ನಿಂದ ಹೊಸ ಮಾಸ್ಟರ್ ಪ್ಲ್ಯಾನ್