ಟ್ರಂಪ್‌ ವಿರುದ್ಧ ಅತ್ಯಾಚಾರ ಆರೋಪ

Team Udayavani, Jun 23, 2019, 5:00 AM IST

ವಾಷಿಂಗ್ಟನ್‌: ಇಪ್ಪತ್ತು ವರ್ಷಗಳ ಹಿಂದೆ, ಟ್ರಂಪ್‌ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರೆಂದು ಹೇಳುವ ಮೂಲಕ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಇ. ಜೀನ್‌ ಕರೋಲ್ ಎಂಬ ಮಹಿಳಾ ಅಂಕಣಗಾರ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ. ದ ವಾಷಿಂಗ್ಟನ್‌ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಈ ಆರೋಪ ಮಾಡಿರುವ ಅವರು, ”1966ರಲ್ಲಿ ಮ್ಯಾನ್‌ಹಟನ್‌ ನಗರದ ಬಟ್ಟೆ ಅಂಗಡಿಯೊಂದರಲ್ಲಿ ತಾವು ಕೊಂಡಿದ್ದ ಹೊಸ ಬಟ್ಟೆಯ ಅಳತೆ ಪರೀಕ್ಷಿಸಲು ಟ್ರಯಲ್ ರೂಮಿಗೆ ಹೋಗಿದ್ದಾಗ ಅಲ್ಲಿಗೆ ಆಗಮಿಸಿದ್ದ ಟ್ರಂಪ್‌, ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು. ಆದರೂ, ತಾವು ಶಕ್ತಿ ಮೀರಿ ಟ್ರಂಪ್‌ ಅವರನ್ನು ದೂಡಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೆ” ಎಂದಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ