ಸುಂಕ ಬಿಕ್ಕಟ್ಟು ಶಮನಕ್ಕೆ ಚೀನ ಅಧ್ಯಕ್ಷ ಕ್ಸಿ ಭೇಟಿಯಾಗುವ ಟ್ರಂಪ್
Team Udayavani, Feb 1, 2019, 10:08 AM IST
ವಾಷಿಂಗ್ಟನ್ : ವಾಣಿಜ್ಯ ಸುಂಕ ಬಿಕ್ಕಟ್ಟನ್ನು ಬಗೆಹರಿಸುವ ನಿರ್ಣಾಯಕ ಸಭೆ ಯಾವುದೇ ಫಲಶ್ರುತಿ ಕಾಣದೆ ಮುರಿದು ಬಿದ್ದಿರುವ ಕಾರಣ ತಾನು ಶೀಘ್ರವೇ ಖುದ್ದಾಗಿ ಚೀನದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ -ಚೀನ ವಾಣಿಜ್ಯ ಸುಂಕ ಬಿಕ್ಕಟ್ಟು ನಿವಾರಣೆಯಾಗದ ಕಾರಣ ಜಾಗತಿಕ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಆದುದರಿಂದ ವಿಶ್ವದ ಅತೀ ದೊಡ್ಡ ಆರ್ಥಿಕ ಶಕ್ತಿಗಳಾಗಿರುವ ಅಮೆರಿಕ ಮತ್ತು ಚೀನ ದೊಡ್ಡ ಡೀಲ್ ಸಾಧಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸುವುದು ಅಗತ್ಯವಾಗಿದೆ ಎಂದು ಟ್ರಂಪ್ ಹೇಳಿದರು.
ಕಳೆದ ವರ್ಷ ಟ್ರಂಪ್ ಅವರು ಅಮೆರಿಕ ಆಮದಿಸಿಕೊಳ್ಳುವ 250 ಶತಕೋಟಿ ಡಾಲರ್ ಚೀನೀ ಉತ್ಪನ್ನಗಳ ಮೇಲೆ ಶೇ.25ರ ವರೆಗೆ ಸುಂಕ ಹೇರಿದ್ದರು. ಇದರ ಪರಿಣಾಮವಾಗಿ ಚೀನ ತಾನು ಆಮದಿಸಿಕೊಳ್ಳುವ 110 ಶತಕೋಟಿ ಅಮೆರಿಕನ್ ಉತ್ಪನ್ನಗಳ ಮೇಲೆ ಅಷ್ಟೇ ಪ್ರಮಾಣದ ಸುಂಕವನ್ನು ಹೇರಿತ್ತು.
ಈಚೆಗೆ ಆರ್ಜೆಂಟೀನಾದಲ್ಲಿ ನಡೆದ ಜಿ-20 ಸಮಾವೇಶದ ಪಾರ್ಶ್ವದಲ್ಲಿ ಟ್ರಂಪ್ ಮತ್ತು ಕ್ಸಿ ಅವರು ಜನವರಿ 1ರಿಂದ ತೊಡಗಿ 90 ದಿನಗಳ ವರೆಗೆ ಇನ್ನಷ್ಟು ಸುಂಕ ಹೇರದಿರಲು ಒಪ್ಪಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ