ಗೂಗಲ್ ಬಗ್ಗೆ ಟ್ರಂಪ್ ಕಿಡಿ
Team Udayavani, Aug 29, 2018, 4:58 PM IST
ವಾಷಿಂಗ್ಟನ್: ಇಂಟರ್ನೆಟ್ ಸರ್ಚ್ ಎಂಜಿನ್ ಗೂಗಲ್ ತಮ್ಮ ವಿರುದ್ಧವಾಗಿರುವ ಮಾಹಿತಿಯನ್ನೇ ಸಿಗುವಂತೆ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಟ್ರಂಪ್ರ ಈ ಆರೋಪವು ಆನ್ಲೈನ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿ ದ್ದಂತೆ ಕ್ಷಣ ಮಾತ್ರದಲ್ಲಿಯೇ ಪ್ರತಿಕ್ರಿಯೆ ನೀಡಿದ ಗೂಗಲ್, ಟ್ರಂಪ್ ಆರೋಪವನ್ನು ತಿರಸ್ಕರಿಸಿದೆ. ಟ್ವೀಟ್ ಮಾಡಿದ್ದ ಟ್ರಂಪ್, “ನನ್ನ ವಿರುದ್ಧ ನಕಾರಾತ್ಮಕ ಸುದ್ದಿ-ಮಾಹಿತಿಗಳೇ ಸರ್ಚ್ನಲ್ಲಿ ಬರುತ್ತಿವೆ. ಇಂಥ ಸುದ್ದಿ, ಮಾಹಿತಿಗಳು ಶೇ.96ರಷ್ಟು ಎಡಪಂಥೀಯ ಧೋರಣೆ ಹೊಂದಿರುವ ಮಾಧ್ಯಮಗಳಿಂದ ಬರುತ್ತದೆ. ಅವುಗಳು ಸತ್ಯಕ್ಕಿಂತ ದೂರವಾಗಿರುತ್ತವೆ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೂಗಲ್ ವಕ್ತಾರರು, ಸರ್ಜ್ ಎಂಜಿನ್ ಅನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿಲ್ಲ.
ಯಾವುದೇ ರಾಜಕೀಯ ಸಿದ್ಧಾಂತದ ಪರ ಅಥವಾ ವಿರುದ್ಧ ವರ್ತಿಸುವುದಿಲ್ಲ. ಹೀಗಾಗಿ ಆರೋಪ ನಿರಾಧಾರ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ