ಚೀನದಲ್ಲಿ ಉದ್ದಿಮೆ ನಡೆಸಲೆತ್ನಿಸಿದ್ದ ಟ್ರಂಪ್‌

ಸರ್ಕಾರಿ ಸಹಭಾಗಿತ್ವ ಪಡಕೊಳ್ಳಲು ದಶಕಗಳಿಂದ ಯತ್ನ

Team Udayavani, Oct 22, 2020, 5:41 AM IST

ಚೀನದಲ್ಲಿ ಉದ್ದಿಮೆ ನಡೆಸಲೆತ್ನಿಸಿದ್ದ ಟ್ರಂಪ್‌

ವಾಷಿಂಗ್ಟನ್‌: ಜಗತ್ತಿಗೆ ಕೋವಿಡ್ ಹರಡಲು ಚೀನ ಕಾರಣವೆಂದು ಪ್ರತಿಪಾದಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನದಲ್ಲಿ ಉದ್ದಿಮೆ ನಡೆಸಲು ಪ್ರಯತ್ನ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲಿನ ಸರ್ಕಾರದ ಉದ್ದಿಮೆ ಗಳಲ್ಲಿ ಸಹಭಾಗಿತ್ವ ಪಡೆದುಕೊಂಡು ಉದ್ದಿಮೆ ನಡೆಸುವ ಬಗ್ಗೆ ದಶಕಗಳಿಂದ ಪ್ರಯತ್ನ ನಡೆಸುತ್ತಿದ್ದರು ಎಂದು “ದ ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ. ಇದರ ಜತೆಗೆ ಚೀನ, ಐರ್ಲೆಂಡ್‌ ಮತ್ತು ಬ್ರಿಟನ್‌ಗಳಲ್ಲಿ ಟ್ರಂಪ್‌ ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಚೀನದಲ್ಲಿ ಟ್ರಂಪ್‌ ಹೊಂದಿರುವ ಖಾತೆಯನ್ನು ಟ್ರಂಪ್‌ ಇಂಟರ್‌ನ್ಯಾಷನಲ್‌ ಹೊಟೇಲ್ಸ್‌ ಮ್ಯಾನೇಜ್‌ಮೆಂಟ್‌ ಎಲ್‌ಎಲ್‌ಸಿ ನಿರ್ವಹಿಸುತ್ತಿದೆ. ಅದು 2013- 2015ರ ಅವಧಿಯಲ್ಲಿ ಚೀನ ಸರ್ಕಾರಕ್ಕೆ 1,88, 561 ಅಮೆರಿಕನ್‌ ಡಾಲರ್‌ ತೆರಿಗೆ ಪಾವತಿ ಮಾಡಿದೆ.

ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್‌ ಸಂಸ್ಥೆಯಲ್ಲಿ ವಕೀಲರಾಗಿರುವ ಅಲನ್‌ ಗಾರ್ಟನ್‌ ಉದ್ದಿಮೆ ನಡೆಸುವ ನಿಟ್ಟಿನಲ್ಲಿ ಚೀನದಲ್ಲಿ ಬ್ಯಾಂಕ್‌ ಖಾತೆ ತೆರೆಯಲಾಗಿದೆ. ಸ್ಥಳೀಯ ಸಂಸ್ಥೆಗಳ ಜತೆಗೆ ವಹಿವಾಟು ನಡೆಸಲು ಇದರಿಂದ ಅನುಕೂಲವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 2015ರ ಬಳಿಕ ಟ್ರಂಪ್‌ ಸಂಸ್ಥೆಯಿಂದ ಯಾವುದೇ ರೀತಿ ವಹಿವಾಟು ನಡೆಸಲಾಗಿಲ್ಲ.

ಭಾರಿ ಅಂತರದಿಂದ ಜಯ: ಮತ್ತೂಂದೆಡೆ ನ.3ರ ಚುನಾವಣೆಗೆ ಅಮೆರಿಕದಲ್ಲಿ ಪ್ರಚಾರ ಬಿರುಸಾಗಿದೆ. ಕ್ಯಾಲಿಫೋರ್ನಿಯಾದ ಈರಿ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ “2016ರ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲವು ಸಾಧಿಸುವೆ. ಈ ಮೂಲಕ ಪ್ರತಿಸ್ಪರ್ಧಿ ಜೋ ಬೈಡೆನ್‌ ಅವರಿಗೆ ಹೀನಾ ಯ ಸೋಲು ಉಣಿಸುವೆ’ ಎಂದು ಘೋಷಿಸಿದ್ದಾರೆ.

56ನೇ ವರ್ಷಕ್ಕೆ ಕಾಲಿಟ್ಟ ಕಮಲಾ: ಡೆಮಾಕ್ರಾಟಿಕ್‌ ಪಕ್ಷದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮಂಗಳವಾರ 56ನೇ ವರ್ಷಕ್ಕೆ ಕಾಲಿರಿಸಿ ದ್ದಾರೆ. ಮುಂದಿನ ವರ್ಷ ಶ್ವೇತ ಭವನದಲ್ಲಿ ಹುಟ್ಟು ಹಬ್ಬ ಆಚರಿಸುವಂತಾಗಲಿ ಎಂದು ಬೆಂಬಲಿಗರು ಹಾರೈಸಿದ್ದಾರೆ.

ಟಾಪ್ ನ್ಯೂಸ್

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಮೂಳೂರು: ಬೈಕ್ ಗೆ ಲಾರಿ ಢಿಕ್ಕಿ; ಸವಾರ ಗಂಭೀರ

ಮೂಳೂರು: ಬೈಕ್ ಗೆ ಲಾರಿ ಢಿಕ್ಕಿ; ಸವಾರ ಗಂಭೀರ

containment ZOne

ರಾಜ್ಯದಲ್ಲಿ ಇಂದು 50 ಸಾವಿರ ಕೋವಿಡ್ ಕೇಸ್ : 165 ಹೊಸ ಒಮಿಕ್ರಾನ್; 19 ಸಾವು

1-sssad

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-erewrew

ಪ್ರಿಯಾಂಕಾ- ನಿಕ್ ಬಾಡಿಗೆ ತಾಯ್ತನದ ವಿರುದ್ಧ ತಸ್ಲೀಮಾ ನಸ್ರೀನ್ ಟ್ವೀಟ್ ವಿವಾದ:ಭಾರಿ ಚರ್ಚೆ

ಮತಯಂತ್ರಗಳ ಜಪ್ತಿಗೆ ಮುಂದಾಗಿದ್ದ ಡೊನಾಲ್ಡ್‌ ಟ್ರಂಪ್‌!

ಮತಯಂತ್ರಗಳ ಜಪ್ತಿಗೆ ಮುಂದಾಗಿದ್ದ ಡೊನಾಲ್ಡ್‌ ಟ್ರಂಪ್‌!

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

chitradurga news

ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಅಷ್ಟಕಷ್ಟೆ

davanagere news

ಸಹಜ ಸ್ಥಿತಿಗೆ ಬಂದ ದೇವನಗರಿ-ಕೋಟೆನಾಡು

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ತುಳುನಾಡ ಕಲಾಕೃತಿಗಳನ್ನು ಸುರಕ್ಷಿತವಾಗಿಡುವುದೇ ಸವಾಲು

ತುಳುನಾಡ ಕಲಾಕೃತಿಗಳನ್ನು ಸುರಕ್ಷಿತವಾಗಿಡುವುದೇ ಸವಾಲು

ಸಂಚಾರ ನಿಯಮ ಉಲ್ಲಂಘನೆ ಸಾವಿರಾರು ನೋಟಿಸ್‌ ವಾಪಸ್‌ !

ಸಂಚಾರ ನಿಯಮ ಉಲ್ಲಂಘನೆ ಸಾವಿರಾರು ನೋಟಿಸ್‌ ವಾಪಸ್‌ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.