‘ಟರ್ಕಿ-ಸಿರಿಯಾ ಸಮರʼ ಲಾಭ ಯಾರಿಗೆ ; ಕುತೂಹಲ ಮೂಡಿಸಿದ ಅಮೆರಿಕ ನಡೆ

Team Udayavani, Oct 10, 2019, 10:50 PM IST

ಟರ್ಕಿ ಮತ್ತು ಸಿರಿಯಾ ನಡುವಿನ ಗಡಿ ಕಿತ್ತಾಟ ಮತ್ತೆ ಮುನ್ನಲೆಗೆ ಬಂದಿದೆ. ನೆರೆಯ ಸಿರಿಯಾದ ಉತ್ತರ ಭಾಗದ ಮೇಲೆ ಟರ್ಕಿ ಮಿಲಿಟರಿ ದಾಳಿ ಸಂಘಟಿಸಿದ್ದು, ಇದು ಭಯೋತ್ಪಾದನೆಯ ವಿರುದ್ಧದ ಸಮರ ಎಂದು ಹೇಳಿದೆ. ಟರ್ಕಿಯ ಮಿಲಿಟರಿ ತನ್ನ ವಾಯು ಪಡೆ ಸಹಕಾರದೊಂದಿಗೆ ಕುರ್ದಿ ಸಮುದಾಯದ ಜನರು ಹೆಚ್ಚು ವಾಸವಿರುವ ಪ್ರದೇಶದ ಮೇಲೆ ದಾಳಿ ನಡೆಸಿದೆ. ಆದರೆ ಭಯೋತ್ಪಾದನೆಯ ವಿರುದ್ಧ ಕುರ್ದಿಗಳು ಹೋರಾಟ ಮಾಡುತ್ತಿದ್ದು ಟರ್ಕಿಯಲ್ಲಿರುವ ಐಸಿಸ್‌ ಇವರ ಟಾರ್ಗೆಟ್‌ ಆಗಿದೆ.

ಯಾರಿದು ಕುರ್ದಿಗಳು
ಕುರ್ದ್ ಗಳು ಅಥವ ಕುರ್ದಿಸ್‌ ಮಧ್ಯಪ್ರಾಚ್ಯ ಭಾಗದಲ್ಲಿ ವಾಸಿಸುತ್ತಿರುವ ನಾಲ್ಕನೇ ಅತೀ ದೊಡ್ಡ ಸಮುದಾಯವಾಗಿದೆ. ಇವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಚದುರಿಕೊಂಡಿದ್ದಾರೆ. ಮುಖ್ಯವಾಗಿ ಟರ್ಕಿ, ಇರಾಕ್‌, ಸಿರಿಯಾ, ಇರಾನ್‌ ಮತ್ತು ಅರ್ಮೆನಿಯಾ ರಾಷ್ಟ್ರಗಳಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಸಮುದಾಯವಾಗಿದೆ. ಮೊದಲ ಜಾಗತಿಕ ಯುದ್ದದ ಸಂದರ್ಭ ಅಟೋಮಾನ್‌ ಸಾಮ್ರಾಜ್ಯದ ಪತನದ ಬಳಿಕ ಪ್ರತ್ಯೇಕ ರಾಷ್ಟ್ರಕ್ಕಾಗಿ ಅವರು ಬೇಡಿಕೆ ಇಟ್ಟುಕೊಂಡಿದ್ದರು. ಆದರೆ ಇವರ ಈ ಬೇಡಿಕೆ ಈಡೇರಿರಲಿಲ್ಲ.

ಟರ್ಕಿಗೆ ಏನು ಸಂಬಂಧ?
ಟರ್ಕಿ ಮತ್ತು ಕುರ್ದಿಗಳ ನಡುವೆ ಹಲವು ವರ್ಷಗಳ ಕಂದಕವಿದೆ. ಸಿರಿಯಾದಲ್ಲಿ ಬಹಳ ಶಕ್ತಿಶಾಲಿಯಾಗಿರುವ ಕುರ್ದಿಗಳು ಟರ್ಕಿ ಮೇಲೆ ಹಲವು ಬಾರಿ ಯುದ್ದವನ್ನು ಸಾರಿದ್ದಾರೆ. ಸಿರಿಯಾದ ಉತ್ತರ ಗಡಿಯಲ್ಲಿ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಟರ್ಕಿ ಮೇಲೆ ಸಿರಿಯಾದ ಕುರ್ದಿಗಳು ಯುದ್ಧ ಪ್ರಾರಂಭಿಸಿದ ಬಳಿಕ ಟರ್ಕಿ ಪ್ರತಿತಂತ್ರವನ್ನು ಹೆಣೆಯಲು ಆರಂಭಿಸಿತು.

ಇದು ನೇರವಾಗಿ ಟರ್ಕಿ ಮತ್ತು ಸಿರಿಯಾ ಮೇಲಿನ ಸಮರ ಅಲ್ಲವಾದರೂ, ಟರ್ಕಿ ಐಸಿಸ್‌ ಗೆ ಬೆಂಬಲ ನೀಡುತ್ತಿದ್ದು, ಸಿರಿಯಾದ ಈ ಕುರ್ದಿಗಳು ಐಸಿಸ್‌ ಮತ್ತು ಟರ್ಕಿಯ ವಿರುದ್ಧ ಸಮರ ಸಾರುತ್ತ ಬಂದಿದ್ದಾರೆ. ಈ ಒಂದು ಕಾರಣಕ್ಕೆ ಇದು ಸಿರಿಯಾ ಮತ್ತು ಟರ್ಕಿ ನಡುವಿನ ಸಮರವಾಗಿ ಕಾಣಲಾಗುತ್ತದೆ. ಟರ್ಕಿಯ ಹೋರಾಟಗಾರರು ಈಗಾಗಲೇ ಸಿರಿಯಾದ ಒಂದು ಗ್ರಾಮವನ್ನು ವಶಪಡಿಸಿಕೊಂಡಿದ್ದಾರೆ. ಈ ಗ್ರಾಮದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಜನರು ದಿಕ್ಕುಪಾಲಾಗಿ ಓಡಿದ್ದಾರೆ.


ಅಮೆರಿಕ ಬೆಂಬಲ ಯಾರಿಗೆ?

ಟರ್ಕಿ ಮತ್ತು ಸಿರಿಯಾ ವಿಷಯ ಬಂದಾಗ ಅಮೆರಿಕ ತಟಸ್ಥ ಧೋರಣೆಯನ್ನು ತಾಳುತ್ತದೆ. ಅಮೆರಿಕಕ್ಕೆ ಟರ್ಕಿ ಮತ್ತು ಸಿರಿಯಾ ನಡುವೆ ಏಕರೀತಿಯ ಸಂಬಂಧವಿದೆ. ಹಲವು ಬಾರಿ ಟರ್ಕಿ ಜತೆಗೆ ಗುರುತಿಸಿಕೊಂಡಿದ್ದು, ಕಷ್ಟಕಾಲದಲ್ಲಿ ಸಿರಿಯಾದ ಈ ಕುರ್ದಿಗಳ ಜತೆಗೂ ಜಂಟಿ ಹೋರಾಟ ಸಂಘಟಿಸಿದ ಉದಾಹರಣೆಗಳಿವೆ. ಟರ್ಕಿಗೆ ಅಮೆರಿಕದ ನ್ಯಾಟೋ ಪಡೆಗಳು ಹತ್ತಿರವಾಗಿದ್ದರೆ, ಟರ್ಕಿಯ ಐಸಿಸ್‌ ಉಗ್ರರನ್ನು ಸದೆಬಡಿಯಲು ಕುರ್ದಿಗಳಿಗೆ ಅಮೆರಿಕ ಬಹಳಷ್ಟು ಬಾರಿ ಸಹಕಾರ ನೀಡುತ್ತಾ ಬಂದಿದೆ.

ಸಿರಿಯಾ ಮೇಲೆ ಟರ್ಕಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕುರ್ದಿಗಳನ್ನು ಬೆಂಬಲಿಸಿ ಮಾತನಾಡಿದ್ದಾರೆ. ನಾವು ಈ ಹಿಂದೆ ಸಾಕಷ್ಟು ಬಾರಿ ಕುರ್ದಿಗಳಿಗೆ ಭಯೋತ್ಪಾದನೆ ವಿಷಯದಲ್ಲಿ ಹೋರಾಡಲು ನೆರವು ನೀಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರು ಎಲ್ಲೂ ಸಿರಿಯಾ ಮೇಲಿನ ದಾಳಿಯನ್ನು ಖಂಡಿಸಿಲ್ಲ. ಇದರ ಅರ್ಥ ಸಿರಿಯಾದ ಎಲ್ಲ ಘಟನೆಗಳನ್ನು ಅಮೆರಿಕ ಬೆಂಬಲಿಸುತ್ತದೆ ಎಂದಲ್ಲ. ಇದೇ ರೀತಿಯ ದ್ವಂದ್ವದಲ್ಲಿ ಅಮೆರಿಕ ಮತ್ತು ಜಗತ್ತಿನ ಇತರ ರಾಷ್ಟ್ರಗಳೂ ಇವೆ ಹಾಗಾಗಿ ಈ ಬೆಳವಣಿಗೆಗಳ ಕುರಿತಾಗಿ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ.

ಐಸಿಸ್‌ ಗೆ ಲಾಭವಾದೀತೆ?
ಟರ್ಕಿ ಮತ್ತು ಸಿರಿಯಾದ ಕುರ್ದಿಗಳ ನಡುವಿನ ಹೋರಾಟದಲ್ಲಿ ಐಸಿಸ್‌ ಲಾಭ ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಕುರ್ದಿಗಳು ಈ ಹಿಂದೆ ಹೋರಾಡುತ್ತಾ ಬಂದಿರುವ ಐಸಿಸ್‌ ಉಗ್ರ ಸಂಘಟನೆಗಳನ್ನು ಟರ್ಕಿ ಬೆಂಬಲಸುತ್ತಿದೆ. ಅಮೆರಿಕಕ್ಕೆ ಹೆದರಿ ಟರ್ಕಿ ಅವರನ್ನು ಬಂಧನದಲ್ಲಿರಿಸಿಕೊಂಡಿದ್ದು, ಕುರ್ದಿಗಳನ್ನು ಮಣಿಸಲು ಟರ್ಕಿ ಉಗ್ರರ ಅಸ್ತ್ರವನ್ನು ಬಿಡುವ ಸಾಧ್ಯತೆ ಇದೆ. ಇದರಿಂದ ಬಂಧನದಲ್ಲಿರುವ ಐಸಿಸ್‌ ಉಗ್ರರು ಬಿಡುಗಡೆಗೊಂಡರೆ ಇಡೀ ಜಗತ್ತಿಗೆ ಕಂಟಕವಾಗಬಹುದಾಗಿದೆ. ಆದರೆ ಉಗ್ರರನ್ನು ಬಿಡುವ ಟರ್ಕಿ ಮಾತಿಗೆ ಖಾರವಾಗಿ ಪ್ರತಿಕ್ರಿಸಿರುವ ಕುರ್ದಿಗಳ ಮುಖ್ಯಸ್ಥ ಅದು ಪ್ರಯೋಜನಕ್ಕೆ ಬಾರದು ಎಂದಿದ್ದಾರೆ.

ಒಂದುವೇಳೆ ಟರ್ಕಿ ಐಸಿಸ್‌ ಉಗ್ರರನ್ನು ಬಿಡುಗಡೆಗೊಳಿಸಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನು ಅರಿತಿರುವ ಅಮೆರಿಕ ಉಗ್ರರನ್ನು ಬಂಧಿಸಿಟ್ಟಿರುವ ಟರ್ಕಿಯ ಜೈಲನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ. ಐಸಿಸ್‌ ಉಗ್ರರು ಸಿರಿಯಾದಲ್ಲೂ ಬೀಡು ಬಿಟ್ಟಿರುವ ಸಾಧ್ಯತೆ ಇದ್ದು, ಟರ್ಕಿ ಐಸಿಸ್‌ ಅನ್ನು ಬೆಂಬಲಿಸಿದರೆ ಸಿರಿಯಾದಲ್ಲಿರುವ ಐಸಿಸ್‌ ಸಂಘಟನೆ ಟರ್ಕಿಗೆ ನೆರವಾಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಅಮೆರಿಕದ ಪಾತ್ರ ನಿರ್ಣಾಯಕವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ