ಟ್ರಂಪ್ ಟ್ವೀಟ್ ನಿಷ್ಕ್ರಿಯಗೊಳಿಸಿದ ಟ್ವಿಟರ್
Team Udayavani, Jul 20, 2020, 10:48 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ರೀ-ಟ್ವೀಟ್ ಮಾಡಿದ್ದ ಪ್ರಚಾರ ಶೈಲಿಯ ವೀಡಿಯೋವೊಂದನ್ನು ಟ್ವಿಟ್ಟರ್ ನಿಷ್ಕ್ರಿಯಗೊಳಿಸಿದೆ. ಲಿಂಕಿನ್ ಪಾರ್ಕ್ ಗುಂಪಿನ ಸಂಗೀತವನ್ನು ಒಳಗೊಂಡಿರುವ ಈ ವೀಡಿಯೋವನ್ನು ಶನಿವಾರ ತಡರಾತ್ರಿ ಟ್ರಂಪ್ ಅವರ ಟ್ವಿಟರ್ ಖಾತೆಯಿಂದ ತೆಗೆಯಲಾಗಿದೆ. ಕೃತಿಸ್ವಾಮ್ಯ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ಟ್ವಿಟರ್ ತಿಳಿಸಿದೆ. ಆದರೆ ಶ್ವೇತಭವನದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದ ಹೆಸರಾಂತ ರಾಕ್ ಮ್ಯೂಸಿಕ್ ಬ್ಯಾಂಡ್ ಆದ ಲಿಂಕಿನ್ ಪಾರ್ಕ್ ನಿಂದ ಹೊರಬಂದಿದ್ದ “ಇನ್ ದ ಎಂಡ್’ ಎಂಬ ಮ್ಯೂಸಿಕ್ ಆಲ್ಬಂನಲ್ಲಿನ ಸಂಗೀತದ ತುಣುಕೊಂದನ್ನು ಕದ್ದು ಟ್ರಂಪ್ ಅವರ ಪ್ರಚಾರ ತಂಡ ಟ್ರಂಪ್ ಅವರ ವೀಡಿಯೋವೊಂದಕ್ಕೆ ಬಳಸಿಕೊಂಡಿತ್ತು. ಈ ಬಗ್ಗೆ ಅನೇಕ ಆಕ್ಷೇಪಗಳು, ದೂರುಗಳು ಬಂದಿದ್ದರಿಂದ ಆ ವೀಡಿಯೋವನ್ನು ಟ್ವಿಟರ್ ಸಂಸ್ಥೆ ತೆಗೆದುಹಾಕಿದೆ.
“ಬಿಡೆನ್ ಅಧ್ಯಕ್ಷರಾದರೆ ಭಾರತಕ್ಕೆ ಯುಎನ್ಎಸ್ಸಿ ಸದಸ್ಯತ್ವ’
ಇದೇ ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಆಯ್ಕೆಯಾದರೆ, ವಿಶ್ವಸಂಸ್ಥೆಯಂತಹ ಜಾಗತಿಕ ಸಂಘಟನೆಗಳನ್ನು ಪುನರ್ ರೂಪಿಸಲು ಶ್ರಮಿಸಲಿದ್ದಾರೆ. ಅಲ್ಲದೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ದೊರಕಿಸಲು ನೆರವಾಗಲಿದ್ದಾರೆ ಎಂದು ಈ ಹಿಂದೆ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ರಿಚರ್ಡ್ ವರ್ಮಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ