ಇರಾಕ್ ರಾಜಧಾನಿ ಬಾಗ್ದಾದ್ ಹಸಿರು ವಲಯಕ್ಕೆ ಅಪ್ಪಳಿಸಿದ 2 ರಾಕೆಟ್: ಹೆಚ್ಚಾದ ಯುದ್ಧ ಭೀತಿ
Team Udayavani, Jan 9, 2020, 8:30 AM IST
ಬಾಗ್ದಾದ್ : ಯುಎಸ್ ಮಿಷನ್ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳು ಇರುವ ಉನ್ನತ-ಭದ್ರತಾ ಸ್ಥಳವಾದ ಇರಾಕ್ ರಾಜಧಾನಿಯ ಹಸಿರು ವಲಯಕ್ಕೆ ಬುಧವಾರ ರಾತ್ರಿ ಎರಡು ರಾಕೆಟ್ಗಳು ಬಂದು ಅಪ್ಪಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ 12ಕ್ಕೂ ಅಧಿಕ ಮಿಸೈಲ್ಸ್ ದಾಳಿ ನಡೆಸಿದ 24 ಗಂಟೆಯಲ್ಲಿ ಎರಡು ರಾಕೆಟ್ ಗಳು ಇರಾಕ್ ನ ರಾಜಧಾನಿ ಬಾಗ್ದಾದ್ ಬಂದು ಅಪ್ಪಳಿಸಿವೆ . ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಅವರಿಸಿರುವ ಯುದ್ಧ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಅಮೇರಿಕಾ ರಾಯಭಾರ ಕಚೇರಿ ಸೇರಿದಂತೆ, ಇತರ ಎರಡು ದೇಶಗಳ ರಾಯಭಾರೀ ಕಚೇರಿಯನ್ನೊಳಗೊಂಡ ಹಸಿರುವ ವಲಯಕ್ಕೆ ಈ ಕತ್ಯುಷಾ ರಾಕೆಟ್ ಗಳು ಬಿದ್ದಿವೆ ಎಂದು ಇರಾಕ್ ಮಿಲಿಟರಿ ಖಚಿತಪಡಿಸಿದೆ.
ಘಟನೆಯಲ್ಲಿ ಯಾವುದೇ ಸಾವಿನೋವಿನ ವರದಿಯಾಗಿಲ್ಲ. ಮಾತ್ರವಲ್ಲದೆ ಅಮೇರಿಕಾದ ಶ್ವೇತಭವನದಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು