
ಈಶಾನ್ಯ ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ
Team Udayavani, Mar 25, 2023, 6:35 AM IST

ವಾಷಿಂಗ್ಟನ್: ಈಶಾನ್ಯ ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಕೆಲಸಗಾರರ ಮೇಲೆ ದಾಳಿ ನಡೆದು ಒಬ್ಬ ವ್ಯಕ್ತಿ ಅಸುನೀಗಿರುವಂತೆಯೇ ಅಮೆರಿಕ ಇರಾನ್ ಪಡೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ನಾಲ್ವರು ಅಸುನೀಗಿದ್ದಾರೆ.
ಇರಾನ್ ರೆವೆಲ್ಯೂಷನರಿ ಗಾರ್ಡ್ ಹಾಗೂ ಅದರ ಜತೆಗೆ ಸಂಪರ್ಕ ಹೊಂದಿರುವ ಸಿರಿಯಾದ ಕೆಲವು ತೀವ್ರಗಾಮಿ ಗುಂಪುಗಳು ಸೇರಿ, ಅಮೆರಿಕ ಗುತ್ತಿಗೆದಾರರ ಸೌಲಭ್ಯದ ಮೇಲೆ ಗುರುವಾರ ಡ್ರೋನ್ ದಾಳಿ ನಡೆಸಿದ್ದವು.
ಘಟನೆಯಲ್ಲಿ ಅಮೆರಿಕದ ಓರ್ವ ಗುತ್ತಿಗೆದಾರ ಮೃತಪಟ್ಟಿದ್ದ. ದಾಳಿ ನಡೆಸಿದ ಡ್ರೋನ್ ಇರಾನ್‌ನದ್ದು ಎಂದು ಅಮೆರಿಕ ಗುಪ್ತಚರ ಸಂಸ್ಥೆಗಳು ದೃಢಪಡಿಸಿದ್ದವು.
ಟಾಪ್ ನ್ಯೂಸ್
