ದುಬೈ ಕೊಚ್ಚಿ ವಿಮಾನ ಸೇವೆ ನಾಳೆ ಪುನರಾರಂಭ

Team Udayavani, Aug 10, 2019, 9:41 PM IST

ದುಬೈ: ಕೇರಳದಲ್ಲಿ ಪ್ರವಾಹದ ಕಾರಣ ಸ್ಥಗಿತಗೊಂಡಿದ್ದ ಯುಎಇ ಕೊಚ್ಚಿ ವಿಮಾನಗಳ ಹಾರಾಟ ಸೇವೆ ರವಿವಾರ ಮಧ್ಯಾಹ್ನ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಭಾರೀ ಮಳೆ ಮತ್ತು ಗಾಳಿಯ ಹಿನ್ನಲೆಯಲ್ಲಿ ವಿಮಾನ ಸೇವೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಮಳೆ ಕೊಂಚ ಶಾಂತವಾಗಿದ್ದು ವಿಮಾನಗಳ ಹಾರಾಟ ಸಾಧ್ಯವಾಗಲಿದೆ.

ಎತಿಹಾಡ್ ಮತ್ತು ಇಂಡಿಯನ್ ಎಕ್ಸ್ ಪ್ರೆಸ್
ಕೊಚ್ಚಿಯಿಂದ ಅಬುದಾಬಿಗೆ ಹೊರಡುವ ಏರ್ ಇಂಡಿಯಾ ಎಕ್ಸ್ ಪ್ರೆಸ್(ಎಐಇ) ವಿಮಾನ IX 429 ಮೊದಲ ವಿಮಾನವಾಗಿ ಸೇವೆಯನ್ನು ಸಂಜೆ 5.20ಕ್ಕೆ ಆರಂಭಿಸಲಿದೆ. ಇನ್ನು ಅಬುದಾಬಿ ಕೊಚ್ಚಿ ವಿಮಾನ EY 282 1.55ಕ್ಕೆ ಅಬುದಾಬಿಯಿಂದ ಹೊರಡಲಿದ್ದು, ಸಂಜೆ 7.30ಕ್ಕೆ ಕೊಚ್ಚಿ ವಿಮಾನ ನಿಲ್ದಾಣ ತಲುಪಲಿದೆ. ಮತ್ತೂಂದು ಸೇವೆ EY 283 ಕೊಚ್ಚಿ ವಿಮಾನ ನಿಲ್ದಾಣದಿಂದ ರಾತ್ರಿ 9.25ಕ್ಕೆ ಹೊರಟು 11.25ಕ್ಕೆ ಅಬುದಾಬಿಗೆ ತಲುಪಲಿದೆ.

ಇನ್ನು ಏರ್ ಇಂಡಿಯನ್ ಎಕ್ಸ್ ಪ್ರೆಸ್ (IXE) ಐಗಿ 435 ತಿರುನಂತಪುರದಿಂದ ಮಧ್ಯಾಹ್ನ 1.30ಕ್ಕೆ ದುಬೈನತ್ತ ಪ್ರಯಾಣ ಬೆಳೆಸಲಿದ್ದು, ಇದರ ಟೇಕ್ ಅಫ್ ಗೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಕೊಚ್ಚಿಯಿಂದ ಶಾರ್ಜಾಗೆ ತೆರಳುವ ವಿಮಾನ ರಾತ್ರಿ 10.45ಕ್ಕೆ ಹೊರಡಲಿದೆ. ಈ ಎರಡು ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಯ ಬಗ್ಗೆ ಖಚಿತಪಡಿಸಿದ್ದು, ಇನ್ನುಳಿದ ವಿಮಾನ ಸೇವೆ ಸಂಸ್ಥೆಗಳು ಯಾವುದೇ ಮಾಹಿತಿ ನೀಡಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ