ಭಾರತೀಯ ಫ‌ುಟ್ಬಾಲ್‌ ಬೆಂಬಲಿಗರನ್ನು ಪಂಜರದಲ್ಲಿ ಕೂಡಿಟ್ಟ UAE ವ್ಯಕ್ತಿ


Team Udayavani, Jan 12, 2019, 5:51 AM IST

uae-viral-700.jpg

ದುಬೈ : ಯಎಇ ಜತೆಗಿನ ಭಾರತದ ನಿರ್ಣಾಯಕ ಫ‌ುಟ್ಬಾಲ್‌ ಪಂದ್ಯಕ್ಕೆ ಮೊದಲು ಯುಎಇ ವ್ಯಕ್ತಿಯೋರ್ವ  ಭಾರತೀಯ ಬೆಂಬಲಿಗರನ್ನು ಪಂಜರವೊಂದರಲ್ಲಿ ಕೂಡಿ ಹಾಕಿದ ಘಟನೆಯ ವಿಡಿಯೋ ವೈರಲ್‌ ಆಗಿದೆ. ಘಟನೆಗೆ ಸಂಬಂಧಿಸಿ ಯುಎಇ ಅಧಿಕಾರಿಗಳು ಅನೇಕ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ವರದಿಗಳು ತಿಳಿಸಿವೆ. 

ಅಬುಧಾಬಿಯಲ್ಲಿ ನಡೆದಿರುವ ಎಎಫ್ಸಿ ಏಶ್ಯನ್‌ ಕಪ್‌ ನ ನಿರ್ಣಾಯಕ ಪಂದ್ಯದಲ್ಲಿ ಯುಎಇ ತಂಡ ಭಾರತ ತಂಡವನ್ನು 2-0 ಅಂತರದಲ್ಲಿ ಸೋಲಿಸಿದೆ. 

ವಿಡಿಯೋದಲ್ಲಿ ಕಂಡು ಬರುವಂತೆ ಕೈಯಲ್ಲಿ ಕೋಲು ಹಿಡಿದು ಝಳಪಿಸುತ್ತಿದ್ದ ಯುಎಇ ವ್ಯಕ್ತಿಯು  ಪಕ್ಷಿ-ಪಂಜರದಲ್ಲಿ ಕೂಡಿ ಹಾಕಲ್ಪಟ್ಟ ಅನೇಕ ಏಶ್ಯನ್‌ ಮೂಲದ ಕಾರ್ಮಿಕರನ್ನು “ನೀವೇಕೆ ಯುಎಇ ಮತ್ತು ಭಾರತ ತಂಡವನ್ನು ತಾರತಮ್ಯದಿಂದ ಬೆಂಬಲಿಸುತ್ತಿದ್ದೀರಿ’ ಎಂದು ಗದರಿಸುತ್ತಿರುವುದು ಕೇಳಿ ಬರುತ್ತದೆ. ಖಲೀಜ್‌ ಟೈಮ್ಸ್‌ ಈ ವಿಷಯವನ್ನು ವರದಿ ಮಾಡಿದೆ. 

ಪಂಜರದಲ್ಲಿ ಕೂಡಿ ಹಾಕಲ್ಪಟ್ಟವರು ಭಾರತ ತಂಡವನ್ನು ಬೆಂಬಲಿಸುವವರೆಂದು ಗೊತ್ತಾದಾಗ ಆ ಯುಎಇ ವ್ಯಕ್ತಿಯು “ನೀವು ಯುಎಇಯಲ್ಲಿದ್ದುಕೊಂಡು ಬೇರೆ ತಂಡವನ್ನು ಬೆಂಬಲಿಸುವುದು ಸರಿಯಲ್ಲ; ನೀವು ಯುಎಇ ಯಲ್ಲಿರುವಾಗ ಯುಎಇ ತಂಡವನ್ನೇ  ಬೆಂಬಲಿಸಬೇಕು’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. 

ಯುಎಇಯಲ್ಲಿ  ವಿವಿಧ ಬಗೆಯ ಕಾನೂನುಗಳ ಉಲ್ಲಂಘನೆ ಮಾಡುವವರಿಗೆ ಕನಿಷ್ಠ ಆರು ತಿಂಗಳಿಂದ ಗರಿಷ್ಠ 10 ವರ್ಷಗಳ ಜೈಲು ಮತ್ತು 50,000 ದಿಂದ 20 ಲಕ್ಷ ಧಿರಮ್‌ ವರೆಗಿನ ದಂಡ (ಅಮೆರಿಕನ್‌ ಡಾಲರ್‌ 13,611 ರಿಂದ 5.44 ಲಕ್ಷ ವರೆಗೆ) ದಂಡ ವಿಧಿಸಲ್ಪಡುತ್ತದೆ. 

ಹಾಗಿದ್ದರೂ ಈ ವಿಡಿಯೋ ಮಾಡಿದ ಮತ್ತು ಅದನ್ನು ಸಾಮಾಜಿಕ ಮಾಧ್ಯಮಕ್ಕೆ ಹಾಕಿ ವೈರಲ್‌ ಆಗುವಂತೆ ಮಾಡಿದ ವ್ಯಕ್ತಿಯು ಯೂಟ್ಯೂಬ್‌ ನಲ್ಲಿ ಇನ್ನೊಂದು ವಿಡಿಯೋ ಹಾಕಿ “ನಾನು ಕೇವಲ ಜೋಕ್‌ ರೂಪದ ಒಂದು ಸ್ಕಿಟ್‌ ಮಾಡಿದ್ದೆ. ವಿಡಿಯೋದಲ್ಲಿ ಕಂಡುಬಂದಿರುವ ಜನರೆಲ್ಲ ನನ್ನ ಕಾರ್ಮಿಕರು, ನಾನು ಅವರನ್ನು 22 ವರ್ಷಗಳಿಂದ ಬಲ್ಲೆ; ನಾನು ಅವರನ್ನು ಹೊಡೆದದ್ದೂ ಇಲ್ಲ ಬಡಿದದ್ದೂ ಇಲ್ಲ. ಕೇವಲ ತಮಾಷೆಗಾಗಿ ಮತ್ತು ಇದು ಸಹಿಷ್ಣುತೆಯ ವರ್ಷವಾಗಿರುವ ಕಾರಣಕ್ಕೆ  ಆ ವಿಡಿಯೋ ಮಾಡಿದ್ದೆ’ ಎಂದು ಹೇಳಿದ್ದಾರೆ.  ಹಾಗಿದ್ದರೂ ಆತನನ್ನು ಮತ್ತು ಇತರ ಕೆಲವರನ್ನು  ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.