ದುಬೈಯಲ್ಲಿ ಡಿ.1ರಿಂದ 3ರ ವರೆಗೆ ಪಾರ್ಕಿಂಗ್ ಉಚಿತ
Team Udayavani, Nov 28, 2019, 9:29 PM IST
ದುಬೈ: ದುಬೈಯಲ್ಲಿ ಡಿಸೆಂಬರ್ 1ರಿಂದ 3ರ ವರೆಗೆ ಉಚಿತ ಪಾರ್ಕಿಂಗ್ ಲಭ್ಯವಾಗಲಿದೆ. ಡಿಸೆಂಬರ್ 1ರಿಂದ 3ರ ವರೆಗೆ ಯುಎಇ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಅಂದು ಇಡೀ ರಾಷ್ಟ್ರದಲ್ಲಿ ರಜಾದಿನ ಇರಲಿದೆ. ಈ ವರ್ಷ 48ನೇ ಯುಎಇ ರಾಷ್ಟ್ರೀಯ ದಿನವಾಗಿದೆ. ಈ ದಿನ ವಾಹನವನ್ನು ನಿಗದಿ ಪಡಿಸಲಾದ ಪಾರ್ಕಿಂಗ್ ಟ್ರ್ಯಾಂಕ್ನಲ್ಲಿ ನಿಲ್ಲಿಸಿದರೆ ಹಣ ಪಾವತಿಸಬೇಕಾಗಿಲ್ಲ.
ಆದರೆ ನವೆಂಬರ್ ಕಡೆಯ ದಿನ 30ರಂದು ವಾಹನ ಪಾರ್ಕ್ ಮಾಡಿದರೆ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ದುಬೈ ರಸ್ತೆ ಮತ್ತು ಸಾರಿಗೆ ಇಲಾಖೆ ತಿಳಿಸಿದೆ.
ಏನೆಲ್ಲಾ ಬಂದ್ ಇರಲಿದೆ?
ಕಸ್ಟಮರ್ಸ್ ಹ್ಯಾಮಿನೆಸ್ ಸೆಂಟರ್ಗಳು, ಪಾವತಿ ಪಾರ್ಕಿಂಗ್ ಜಾಗಗಳು, ದುಬೈ ಮೆಟ್ರೋ ಸೇವೆ, ಪಬ್ಲಿಕ್ ಬಸ್ ಸೇವೆ (ದುಬೈ ಬಸ್), ಮೆಟ್ರೋ ಸಂಪರ್ಕಿಸುವ ಇತರ ಬಸ್ ಸೇವೆಗಳು, ವಾಟರ್ ಬಸ್ಗಳು ಸೇರಿದಂತೆ ಎಲ್ಲಾ ಕಚೇರಿಗಳು ಅಂದು ಬಂದ್ ಇರಲಿದೆ. ನವೆಂಬರ್ 30ರ ಮಧ್ಯರಾತ್ರಿ 11.59ರಿಂದ ಈ ಎಲ್ಲಾ ಸೇವೆಗಳು ಬಂದ್ ಇರಲಿದ್ದು, ಡಿಸೆಂಬರ್ 3ರ ಮಧ್ಯರಾತ್ರಿ 11.59ರ ವರೆಗೆ ಜಾರಿಯಲ್ಲಿರಲಿದೆ. ಅಂದು ನಗರಗಳ ಇತರ ಶಾಪಿಂಗ್ ಮಾಲ್ಗಳು, ಅಂಗಡಿ ಮುಂಗಟ್ಟುಗಳು ತೆರೆದಿರಲಿದ್ದು ಕುಟುಂಬದ ಸಮೇತ ಶಾಪಿಂಗ್ ಮಾಡುವವರು ಯಾವುದೇ ಪಾರ್ಕಿಂಗ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?