ಉಗ್ರರಂತೆಯೇ ವರ್ತಿಸುತ್ತಿದೆ ರಷ್ಯಾ: ಝೆಲೆನ್‌ಸ್ಕಿ
Team Udayavani, Apr 6, 2022, 7:20 AM IST
ಕೀವ್/ಮಾಸ್ಕೋ: ಉಗ್ರರು ಮತ್ತು ರಷ್ಯಾಕ್ಕೆ ಹೋಲಿ ಕೆಯೇ ಇಲ್ಲ. ಅವರಂತೆಯೇ ಗುಣಗಳನ್ನು ಪ್ರದರ್ಶಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.
ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ವಚ್ಯುವಲ್ ಮೂಲಕ ಮಾತನಾಡಿದ ಅವರು, ಬುಚಾದಲ್ಲಿ 300 ಮಂದಿಯನ್ನು ರಷ್ಯಾದವರು ಕೊಂದಂತೆಯೇ ಇನ್ನೂ ಹಲವು ಘಟನೆಗಳು ನಡೆಯಲಿವೆ ಎಂದಿ ದ್ದಾರೆ. ವಿಶ್ವಸಂಸ್ಥೆ ಹೇಳುವ ಶಾಂತಿ ಈಗೆ ಲ್ಲಿದೆ? ರಷ್ಯಾ ಉಗ್ರ ಸಂಘಟನೆಯಂತೆ ವರ್ತಿಸುತ್ತಿದೆ ಎಂದರು.
ಇದೇ ವೇಳೆ, ಕಾಳಗ 41ನೇ ದಿನ ಪ್ರವೇಶಿಸಿದ್ದು, ಮರಿಯುಪೋಲ್‌ನ ಬಂದರೊಂದರ ಹತ್ತಿರದಲ್ಲಿದ್ದ ಹಡಗಿನ ಮೇಲೆ ರಷ್ಯಾ ಪಡೆ ಶೆಲ್ ದಾಳಿ ನಡೆಸಿದ್ದರಿಂದ ಅದು ಮುಳುಗಿದೆ.
ಮಕ್ಕಳ ದೇಹದ ಮೇಲೆ ಹೆಸರು, ಫೋನ್ ನಂಬರ್
ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ಎಷ್ಟೋ ಜನರು ಕುಟುಂಬದ ಸದಸ್ಯರನ್ನು ಈ ಯುದ್ಧದಿಂದಾಗಿ ಕಳೆದುಕೊಳ್ಳುತ್ತಿದ್ದಾರೆ. ಅದೇ ಹಿನ್ನೆಲೆ ಉಕ್ರೇನ್‌ನ ತಾಯಂದಿರು, ತಮ್ಮ ಪುಟಾಣಿ ಮಕ್ಕಳ ದೇಹದ ಮೇಲೆಯೇ ಅವರ ಮಾಹಿತಿ ಬರೆಯಲಾರಂಭಿಸಿದ್ದಾರೆ. ಅಂತದ್ದೊಂದು ಫೋಟೋ ಇದೀಗ ವೈರಲ್ ಆಗಿದೆ. ತಾಯಿಯೊಬ್ಬರು, ಮಗಳ ಬೆನ್ನಿನ ಮೇಲೆ ಅವಳ ಹೆಸರು, ಹುಟ್ಟಿದ ದಿನಾಂಕ ಮತ್ತು ಆ ಮಗುವಿನ ಕುಟುಂಬಸ್ಥರ ಫೋನ್ ನಂಬರ್‌ನ್ನು ಬರೆದಿದ್ದಾರೆ.
ಒಂದು ವೇಳೆ ಯುದ್ಧದಲ್ಲಿ ನಾನು ಸತ್ತರೆ ಅಥವಾ ನಮ್ಮವರ್ಯಾರಾದರೂ ಸತ್ತು, ನನ್ನ ಮಗಳು ಒಬ್ಬಂಟಿಯಾದರೆ ಈ ಮಾಹಿತಿ ಆಕೆಯ ಸಹಾಯಕ್ಕೆ ಬರಬಹುದು ಎಂದು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಉಕ್ರೇನ್‌ನ ಜನರು ಅದೆಷ್ಟು ಅಸಾಹಯಕ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ.