ಅಮೆರಿಕದಲ್ಲಿ ಶಿರ್ವ ಮೂಲದ ಯುವಕನನ್ನು ಗುಂಡಿಟ್ಟು ಕೊಂದ ಆರೋಪಿ ಪೊಲೀಸರಿಗೆ ಶರಣು

Team Udayavani, Dec 2, 2019, 4:48 PM IST

Abhishek Sudesh Bhat

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡ್ ಡಿನೋ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಅಭಿಷೇಕ್ ಸುದೇಶ್ ಭಟ್ ಅವರನ್ನು ಕಳೆದ ವಾರ ಗುಂಡಿಟ್ಟು ಹತ್ಯೆಗೈದಿದ್ದ ಆರೋಪಿ ಅಮೆರಿಕದ ಪೊಲೀಸರ ಮುಂದೆ ಶರಣಾಗಿರುವುದಾಗಿ ವರದಿ ತಿಳಿಸಿದೆ.

ಆರೋಪಿಯನ್ನು ಅಮೆರಿಕದ ಪ್ರಜೆ ಎರಿಕ್ ಟರ್ನರ್ (42ವರ್ಷ) ಎಂದು ಗುರುತಿಸಲಾಗಿದೆ. ಆರೋಪಿ ಶನಿವಾರ ಶರಣಾಗಿರುವುದಾಗಿ ಸ್ಯಾನ್ ಬೆರ್ನಾರ್ಡ್ ಡಿನೋ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್ (25ವರ್ಷ) ಮೈಸೂರಿನ ವಿದ್ಯಾವಿಕಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ, ಬಳಿಕ ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದರು.

ಅಭಿಷೇಕ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಗುರುವಾರ ಹೋಟೆಲ್ ರೂಂನಿಂದ ಟರ್ನರ್ ನನ್ನು ಖಾಲಿ ಮಾಡಿಸುವ ವೇಳೆ ವಾಗ್ವಾದ ನಡೆದಿತ್ತು. ನಂತರ ಹೋಟೆಲ್ ಹೊರಗೆ ಅಭಿಷೇಕ್ ನನ್ನು ಟರ್ನರ್ ಗುಂಡಿಟ್ಟು ಹತ್ಯೆಗೈದಿದ್ದ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ