ವಿವಾದಾತ್ಮಕ ಮೀಸೆ ಕತ್ತರಿಸಿಕೊಂಡ ಅಮೆರಿಕ ರಾಯಭಾರಿ ಹ್ಯಾರಿಸ್
Team Udayavani, Jul 28, 2020, 9:58 AM IST
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಹ್ಯಾರಿ ಹ್ಯಾರಿಸ್ ಅವರು ಕೊರಿಯಾದ ಸಾಂಪ್ರದಾಯಿಕ ಕ್ಷೌರಿಕನ ಅಂಗಡಿಯಲ್ಲಿ ತಮ್ಮ ಮೀಸೆಯನ್ನು ತೆಗೆಸಿಕೊಂಡಿದ್ದು, ಈ ಕುರಿತಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬೇಸಿಗೆಯ ಈ ದಿನಗಳಲ್ಲಿ ತಂಪಾಗಿರಲು ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಮುಖಕ್ಕೆ ಮಾಸ್ಕ್ ಧರಿಸಲು ಅನುಕೂಲವಾಗಲೆಂದು ಮೀಸೆಯನ್ನು ತೆಗೆಸಿದ್ದಾಗಿ ಅವರು ತಿಳಿಸಿದ್ದಾರೆ. ಅವರ ದಪ್ಪ ಮೀಸೆ ದಕ್ಷಿಣ ಕೊರಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ದ.ಕೊರಿಯಾದಲ್ಲಿ ಹೆಚ್ಚಿನ ಜನ ಮೀಸೆ ಬೆಳೆಸುವುದಿಲ್ಲ. ಅದು ಮುಖದ ಸೌಂದರ್ಯ, ಗಂಭೀರತೆ ಹಾಗೂ ಸ್ವಚ್ಛತೆಯನ್ನು ಹಾಳುಗೆಡವುತ್ತದೆ. ಒಂದೊಮ್ಮೆ ಹೊಂದಿದ್ದರೂ ಅದು ಚಿಕ್ಕದಾಗಿ ಇರಬೇಕು ಎಂಬುದು ಅವರ ನಂಬಿಕೆ. ಅವರ ಈ ನಂಬಿಕೆ ಆನುವಂಶೀಯವಾಗಿ ನಡೆದುಕೊಂಡು ಬಂದಿದೆ. ಹೀಗಾಗಿಯೇ ಬಹುತೇಕ ಕೊರಿಯನ್ನರು ಗಡ್ಡ ಹಾಗೂ ಮೀಸೆಯನ್ನು ಪ್ರತಿದಿನ ತೆಗೆಯುತ್ತಾರೆ. ಹೀಗಾಗಿ, ಹ್ಯಾರಿಸ್ರ ದಪ್ಪ ಮೀಸೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆ ಜನವರಿಯಲ್ಲಿ ಅವರು ಈ ಟೀಕೆಗೆ ಪ್ರತಿಕ್ರಿಯಿಸಿ, ಇದು ತಮ್ಮ ಸ್ವಂತ ವಿಷಯ ಎಂದು ಕಿಡಿ ಕಾರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ