ಚೀನದ 28 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕ

Team Udayavani, Oct 10, 2019, 8:00 PM IST

ಬೀಜಿಂಗ್: ಅಮೆರಿಕ ಮತ್ತು ಚೀನದ ವ್ಯಾಪಾರ ಸಮರ ಈಗ ಮತ್ತೂಂದು ಹಂತಕ್ಕೆ ತಲುಪಿದ್ದು, ಚೀನದ 28 ಕಂಪೆನಿಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ. ಇದರಿಂದ ಚೀನ ತನ್ನ ಉತ್ಪನ್ನ ಹಾಗೂ ಸೇವೆಯ ಅಮೆರಿಕ ಪಾಲನ್ನು ಕಳೆದುಕೊಳ್ಳಲಿದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾದ 28 ಸಂಸ್ಥೆಗಳ ಪೈಕಿ 8 ತಂತ್ರಜ್ಞಾನ ಸಂಸ್ಥೆಗಳು ಇವೆ. ಇದರನ್ವಯ ಅಮೆರಿಕದ ಯಾವುದೇ ಸಂಸ್ಥೆ ಚೀನದ ಈ ಎಲ್ಲಾ ಸಂಸ್ಥೆಗಳು ಉತ್ಪಾದಿಸಿದ ವಸ್ತುವನ್ನು ಕೊಂಡುಕೊಳ್ಳಲು ಅವಕಾಶ ಇಲ್ಲವಾಗಿದೆ. ಅವರು ಸರಕಾರದ ಒಪ್ಪಿಗೆ ಪಡೆದೇ ಮುಂದುವರಿಯಬೇಕಾಗಿದೆ. ಅಮೆರಿಕದಲ್ಲಿ ಈಗಾಗಲೇ ಹುವಾಯಿ ಮೊಬೈಲ್ ನಿಷೇಧಿಸಲಾಗಿತ್ತು.

ಯಾವೆಲ್ಲ ತಾಂತ್ರಿಕ ಸಂಸ್ಥೆಗಳು:

ದುವಾ ಟೆಕ್ನಾಲಾಜೀಸ್, ಹೈಕ್ವಿಷನ್, iFLYTEK, ಮೆಗ್ವಿಲ್ ಟೆಕ್ನಾಲಜಿ, ಸೆನ್ಸ್ ಟೈಮ್, Xiamen Meiya Pico Information, ಹಿಟು ಟೆಕ್ನಾಲಜಿ, Yixin Science and Technology ಕಪ್ಪು ಪಟ್ಟಿಗೆ ಸೇರಿದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಾಗಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ