ಇರಾನ್ ಬೆಂಬಲಿತ ಸಿರಿಯಾ ಉಗ್ರರ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ
ಸಾವು, ನೋವಿನ ಬಗ್ಗೆ ಅಮೆರಿಕ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ವರದಿ ತಿಳಿಸಿದೆ.
Team Udayavani, Feb 26, 2021, 11:16 AM IST
ವಾಷಿಂಗ್ಟನ್: ಇತ್ತೀಚೆಗೆ ಇರಾಕ್ ನಲ್ಲಿನ ಅಮೆರಿಕದ ಸೇನಾ ನೆಲೆ ಮೇಲೆ ರಾಕೆಟ್ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಸೇನೆ ಇರಾನ್ ಬೆಂಬಲಿತ ಸಿರಿಯಾ ಉಗ್ರರ ನೆಲೆಗಳ ಮೇಲೆ ಗುರುವಾರ(ಫೆ.25) ವೈಮಾನಿಕ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜಾಗತಿಕ ಮಾರುಕಟ್ಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ
ದಾಳಿ ಕುರಿತು ರಾಯಟರ್ಸ್ ವರದಿ ಮಾಡಿದ್ದು, ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದಾಗಿ ಹೇಳಿರುವ ಅಮೆರಿಕ, ಕೇವಲ ಸಿರಿಯಾದ ಮೇಲೆ ಮಾತ್ರ ದಾಳಿ ನಡೆಸಬೇಕೆ ವಿನಃ, ಇರಾಕ್ ಮೇಲೆ ಬೇಡ ಎಂದು ಬೈಡೆನ್ ನಿರ್ದೇಶನ ನೀಡಿರುವುದಾಗಿ ವರದಿ ವಿವರಿಸಿದೆ.
ಸದ್ಯ ದಾಳಿ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ಇರಾಕ್ ಸರ್ಕಾರಕ್ಕೆ ಉಸಿರೆಳೆದುಕೊಳ್ಳಲು ಅವಕಾಶ ನೀಡುವ ಮೂಲಕ ಯಾವುದೇ ದಾಳಿಗೆ ಮುಂದಾಗಿಲ್ಲ ಎಂದು ಅಮೆರಿಕ ತಿಳಿಸಿದೆ. ಅಧ್ಯಕ್ಷ ಜೋ ಬೈಡೆನ್ ಅವರ ನಿರ್ದೇಶನದ ಮೇರೆಗೆ ಪೂರ್ವ ಸಿರಿಯಾದಲ್ಲಿರುವ ಇರಾನ್ ಬೆಂಬಲಿತ ಉಗ್ರರ ನೆಲೆ ಮೇಲೆ ಗುರುವಾರ ಸಂಜೆ ವೈಮಾನಿಕ ದಾಳಿ ನಡೆಸಲಾಗಿತ್ತು ಎಂದು ಪೆಂಟಾಗಾನ್ ವಕ್ತಾರ ಜಾನ್ ಕಿರ್ಬೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟಾಬ್ ಹಿಜ್ಬುಲ್ಲಾ(ಕೆಎಚ್) ಮತ್ತು ಕಟಾಬ್ ಸಯ್ಯಿದ್ ಅಲ್ ಶುಹಾದಾ(ಕೆಎಸ್ ಎಸ್) ಸೇರಿದಂತೆ ಹಲವು ಇರಾನ್ ಬೆಂಬಲಿತ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಲಾಗಿದೆ. ಆದರೆ ದಾಳಿಯಲ್ಲಿ ಸಂಭವಿಸಿದ ಸಾವು, ನೋವಿನ ಬಗ್ಗೆ ಅಮೆರಿಕ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್ಗಿವನ್ ಹಡಗಿಗೆ 6755 ಕೋಟಿ ರೂ.ದಂಡ!
ಶೇ.60 ಯುರೇನಿಯಂ ಹೆಚ್ಚಳಕ್ಕೆ ಇರಾನ್ ಶಪಥ : ಇಸ್ರೇಲ್ಗೆ ಮತ್ತೂಂದು ಎಚ್ಚರಿಕೆ ರವಾನೆ
ಟಿಕ್ಟಾಕ್ ಸಂಸ್ಥಾಪಕ ಯಿಮಿಂಗ್ ಈಗ ವಿಶ್ವದ ಶ್ರೀಮಂತರಲ್ಲೊಬ್ಬರು!
ಐಸಿಸ್, ಅಲ್ಖೈದಾ ಸೇರಿ 11 ಸಂಘಟನೆಗಳಿಗೆ ಲಂಕಾ ನಿಷೇಧ
ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಸಸ್ತನಿಗಳ ಮಾರಾಟ ನಿಷೇಧಕ್ಕೆ WHO ಆದೇಶ
MUST WATCH
ಹೊಸ ಸೇರ್ಪಡೆ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು