ಅಮೆರಿಕದಿಂದ 52 ಅಕ್ರಮ ಪಾಕ್‌ ವಲಸಿಗರು ಪಾಕಿಸ್ಥಾನಕ್ಕೆ ಗಡೀಪಾರು; ಮಾಧ್ಯಮ

Team Udayavani, May 16, 2019, 5:11 PM IST

ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ

ಇಸ್ಲಾಮಾಬಾದ್‌ : ಅಮೆರಿಕದಿಂದ ಗಡೀಪಾರಾಗಿರುವ 52 ಮಂದಿ ಅಕ್ರಮ ಪಾಕ್‌ ವಲಸಿಗರು ಇಂದು ಗುರುವಾರ ವಿಶೇಷ ವಿಮಾನದಲ್ಲಿ ಬಿಗಿ ಭದ್ರತೆಯೊಂದಿಗೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವುದಾಗಿ ಎಂದು ಪಾಕ್‌ ಮಾದ್ಯಮಗಳು ವರದಿ ಮಾಡಿವೆ.

ವಲಸೆ ನಿಯಮ ಉಲ್ಲಂಘನೆ, ಕ್ರಿಮಿನಲ್‌ ವರ್ತನೆ ಮತ್ತು ಇತರ ಗಂಭೀರ ಆರೋಪಗಳ ಮೇಲೆ ಪಾಕ್‌ ಪ್ರಜೆಗಳನ್ನು ಅಮೆರಿಕದ ವಲಸೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಕಾನೂನು ಪ್ರಕಾರ ಶಿಕ್ಷಿಸಿದೆ ಎಂದು ಕಳೆದ ಮಂಗಳವಾರ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಅವರು ವಿದೇಶ ವ್ಯವಹಾರಗಳ ಮೇಲಿನ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯೀ ಸಮಿತಿಗೆ ತಿಳಿಸಿದ್ದರು.

ಗಡೀಪಾರಾಗಿರುವ 53 ಪಾಕಿಸ್ಥಾನೀಯರಲ್ಲಿ 52 ಮಂದಿ ಬುಧವಾರ ಬಂದಿಳಿದಿದ್ದಾರೆ; ಒಬ್ಟಾತ ಅಮೆರಿಕ ವಿಮಾನ ನಿಲ್ದಾಣದಲ್ಲೇ ಅಸ್ವಸ್ಥನಾಗಿರುವುದರಿಂದ ಆತನನ್ನು ಮರಳಿಸಲಾಗಿಲ್ಲ ಎಂದು ಡಾನ್‌ ದೈನಿಕ ವರದಿ ಮಾಡಿದೆ.


ಈ ವಿಭಾಗದಿಂದ ಇನ್ನಷ್ಟು

  • ದುಬೈ: ಮಕ್ಕಳಲ್ಲಿನ ವೈಜ್ಞಾನಿಕ ಆವಿಷ್ಕಾರ ಗುಣವನ್ನು ಪ್ರೇರೇಪಿಸಲು ಗೂಗಲ್‌ ಸಂಸ್ಥೆ ನಡೆಸುತ್ತಿರುವ ಗೂಗಲ್‌ ಸೈನ್ಸ್‌ ಫೇರ್‌ ಎಂಬ ಜಾಗತಿಕ ಆವಿಷ್ಕಾರಗಳ ಸ್ಪರ್ಧೆ...

  • ಅಗರ್ತಲಾ: ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಪಶ್ಚಿಮ ರಾಜ್ಯಗಳಲ್ಲಿ ನೆಲೆಯೂರಲು ಯತ್ನಿಸಿತ್ತು ಎಂದು ಗೃಹ ಸಚಿವಾಲಯದ...

  • ಲಂಡನ್‌: ಡಿಯಾಜಿಯೋ ಕಂಪೆನಿ ಜೊತೆಗಿನ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಇಂಗ್ಲೆಂಡ್‌ ಹೈಕೋರ್ಟ್‌ ತೀರ್ಪು ನೀಡಿದ ಪರಿಣಾಮ 90 ಕೋಟಿ ರೂ. ನಷ್ಟವನ್ನು...

  • ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ...

  • ವಾಷಿಂಗ್ಟನ್‌: ಮುಂದಿನ ತಿಂಗಳು ಜಪಾನ್‌ನಲ್ಲಿ ಜಿ-20 ಶೃಂಗ ನಡೆಯಲಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಭೇಟಿ ನಡೆಯಲಿದೆ. ಇಲ್ಲಿ...

ಹೊಸ ಸೇರ್ಪಡೆ