ಗಲ್ಫ್ ಸಂಘರ್ಷಕ್ಕೆ ಹೊಸ ತಿರುವು

ಇರಾನ್‌ನ ಡ್ರೋನ್‌ ಹೊಡೆದುರುಳಿಸಿದ ಅಮೆರಿಕ

Team Udayavani, Jul 20, 2019, 5:05 AM IST

ವಾಷಿಂಗ್ಟನ್‌: ಇರಾನ್‌ ಮತ್ತು ಅಮೆರಿಕದ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿರುವ ಸಂಘರ್ಷ ಈಗ ಮತ್ತೂಂದು ತಿರುವು ಪಡೆದುಕೊಂಡಿದೆ. ಅಮೆರಿಕದ ನೌಕಾಪಡೆಯ ಹಡಗೊಂದು ಇರಾನ್‌ನ ಡ್ರೋನ್‌ ಅನ್ನು ಹೊಡೆದುರುಳಿಸಿದ್ದು, ಎರಡೂ ದೇಶಗಳ ಮಧ್ಯದ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಯುಎಸ್‌ಎಸ್‌ ಬಾಕ್ಸರ್‌ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆಸುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡ್ರೋನ್‌ ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯದ ವಕ್ತಾರ ಜೋನಾಥನ್‌ ಹಾಫ್ಮನ್‌ ಹೇಳಿದ್ದಾರೆ.

ಆದರೆ ನಮ್ಮ ಯಾವುದೇ ಡ್ರೋನ್‌ಗೆ ಹಾನಿಯಾಗಿಲ್ಲ ಎಂದು ಇರಾನ್‌ ಹೇಳಿಕೊಂಡಿದೆ. ಅಮೆರಿಕ ಹೇಳಿಕೆ ಆಧಾರವಿಲ್ಲದ್ದು. ಅಮೆರಿಕವು ತನ್ನದೇ ಡ್ರೋನ್‌ ಅನ್ನು ತಪ್ಪಾಗಿ ಹೊಡೆದುರುಳಿಸಿರಬಹುದು ಎಂದು ಇರಾನ್‌ ಸೇನಾಪಡೆಯ ಬ್ರಿಗೇಡಿಯರ್‌ ಜನರಲ್ ಅಬೋಲ್ಫ‌ಜ್ಲ್ ಶೆಕಾರ್ಚಿ ಹೇಳಿದ್ದಾರೆ.

ಈ ಹಿಂದೆ ಅಮೆರಿಕದ ಡ್ರೋನ್‌ ಒಂದನ್ನು ಇರಾನ್‌ ಹೊಡೆದುರುಳಿಸಿತ್ತು. ಆಗ ಇರಾನ್‌ ವಿರುದ್ಧ ದಾಳಿ ನಡೆಸುವ ಎಚ್ಚರಿಕೆಯನ್ನೂ ನೀಡಿತ್ತಾದರೂ, ಕೆಲವೇ ದಿನಗಳಲ್ಲಿ ಈ ಸಂಘರ್ಷ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಇರಾನ್‌ ವಿರುದ್ಧ ಇನ್ನಷ್ಟು ಆರ್ಥಿಕ ನಿಷೇಧಗಳನ್ನು ಹೇರಲು ಅಮೆರಿಕ ಚಿಂತನೆ ನಡೆಸುತ್ತಿರುವ ಮಧ್ಯೆಯೇ ಈ ಪ್ರಕರಣ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ