ತೈಲ ಟ್ಯಾಂಕರ್‌ ಧ್ವಂಸ ಪ್ರಕರಣ ಅಮೆರಿಕ-ಇರಾನ್‌ ವಾಗ್ಯುದ್ಧ

Team Udayavani, Jun 15, 2019, 5:00 AM IST

ದುಬೈ: ಅಮೆರಿಕ ಮತ್ತು ಇರಾನ್‌ ನಡುವಿನ ರಾಜಕೀಯ ಬಿಕ್ಕಟ್ಟು ಉಲ್ಪಣಿಸಿದೆ. ಒಮನ್‌ ಸಾಗರದಲ್ಲಿ(ಒಮನ್‌ ಕೊಲ್ಲಿ ಹಾಗೂ ಪ್ಯಾಲೆಸ್ತೀನ್‌ ಕೊಲ್ಲಿಯ ನಡುವಿನ ಸ್ಥಳ) ಗುರುವಾರ ತಮ್ಮ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್‌ ದಾಳಿ ನಡೆಸಿ ಆ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದೆ ಎಂದು ಅಮೆರಿಕ ಆಪಾದಿಸಿದೆ.

ಆದರೆ, ಇರಾನ್‌ ಈ ಆರೋಪ ತಳ್ಳಿಹಾಕಿದ್ದು, ಅಮೆರಿಕ ಸಾಕ್ಷ್ಯಾಧಾರ ನೀಡಬೇಕೆಂದು ಆಗ್ರಹಿಸಿದೆ. ಆದರೆ, ತನ್ನ ಆರೋಪ ಮುಂದುವರಿಸಿರುವ ಅಮೆರಿಕ ಸರಕಾರ, ಇಂಥ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿ ಎಂದಿದ್ದು, ದಾಳಿಯ ನಂತರದ ಚಿತ್ರಗಳನ್ನು ಬಿಡುಗಡೆ ಮಾಡಿರುವ ಅಮೆರಿಕ ಸೇನೆ, ಇರಾನ್‌ನ ರೆವೆಲ್ಯೂಷನರಿ ಗಾರ್ಡ್‌ ಸಿಬ್ಬಂದಿಯು ಬೆಂಕಿ ಹೊತ್ತಿಕೊಂಡಿದ್ದ ಟ್ಯಾಂಕರ್‌ನಲ್ಲಿದ್ದ ಅಗ್ನಿ ಸ್ಪರ್ಶವಾಗದ ತೈಲ ಬ್ಯಾರೆಲ್ಗಳನ್ನು ಕೊಂಡೊಯ್ಯುತ್ತಿರುವುದಕ್ಕೆ ಇದು ಸಾಕ್ಷ್ಯ ಎಂದು ಹೇಳಿದೆ.

ಚೀನ ಸರಕಾರ ಇದಕ್ಕೆ ಪ್ರತಿಕ್ರಿಯಿಸಿದ್ದು, ಎರಡೂ ರಾಷ್ಟ್ರಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಶಮನಗೊಳಿಸಿಕೊಳ್ಳಬೇಕೆಂದು ಕರೆ ನೀಡಿದೆ.

ಸೌದಿ ಆಗ್ರಹ: ಅಮೆರಿಕದ ಟ್ಯಾಂಕರ್‌ಗಳ ಮೇಲೆ ನಡೆದಿರುವ ದಾಳಿಯು ಆತಂಕಕಾರಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಇದೊಂದು ಅಪಾಯಕಾರಿ ವಿದ್ಯಮಾನವೂ ಆಗಿದೆ ಎಂದು ಯುಎಇ ಹೇಳಿದೆ. ಇದೇ ವೇಳೆ, ಒಮನ್‌ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ತೈಲ ದರ ಏರಿಕೆಯಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ