ಅಮೆರಿಕಾದ ಮೇಲೆ ದಾಳಿ ಮಾಡಿದರೆ ಇರಾನ್ ನ 52 ಪ್ರದೇಶಗಳನ್ನು ನಾಮಾವಶೇಷ ಮಾಡುತ್ತೇವೆ: ಟ್ರಂಪ್
Team Udayavani, Jan 5, 2020, 8:06 AM IST
ವಾಷಿಂಗ್ಟನ್: ಇಸ್ಲಾಮಿಕ್ ಗಣರಾಜ್ಯ ಅಮೇರಿಕಾದ ಮೇಲೆ ದಾಳಿ ಮಾಡಲು ಮುಂದಾದರೇ ತುಂಬಾ ವೇಗವಾಗಿ ಮತ್ತು ಅತ್ಯಂತ ಭೀಕರವಾಗಿ ಪ್ರತಿಕಾರ ತೀರಿಸಿಕೊಳ್ಳುತ್ತೇವೆ. ಈಗಾಗಲೇ ಇರಾನ್ ನ 52 ಪ್ರದೇಶಗಳನ್ನು ಅಮೆರಿಕಾ ಸೇನೆ ಗುರಿಯಾಗಿರಿಸಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೋಲೆಮನಿಯನ್ನು ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿದ ಟ್ರಂಪ್, ಒಂದು ವೇಳೆ ಇರಾನ್ ಪ್ರತೀಕಾರಕ್ಕೆ ಮುಂದಾದರೇ ಅತ್ಯಂತ ಭೀಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. 1979 ರಿಂದಲೂ ಟೆಹ್ರಾನ್ ನ ಯು ಎಸ್ ರಾಯಭಾರ ಕಚೇರಿಯಲ್ಲಿ 52ಕ್ಕೂ ಹೆಚ್ಚು ಅಮೇರಿಕರನ್ನು ಒತ್ತೆಯಾಳಾಗಿರಸಲಾಗಿತ್ತು. ಆದ ಕಾರಣದಿಂದಲೇ ಮಿಲಿಟರಿ ಕಾರ್ಯಚರಣೆ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
ಅಮೇರಿಕಾ ದಾಳಿ ನಡೆಸಲು ಗುರಿಯಾಗಿರಿಸಿಕೊಂಡಿರುವ ಪ್ರದೇಶಗಳು ಇರಾನ್ ಮತ್ತು ಅಲ್ಲಿನ ಸಂಸ್ಕೃತಿಗೆ ಉನ್ನತ ಕೊಡುಗೆಯನ್ನು ನೀಡಿದೆ. ಒಂದು ವೇಳೆ ದಾಳಿ ನಡೆಸಿದರೆ ಆ ಪ್ರದೇಶಗಳು ಸಂಪೂರ್ಣ ನಾಮವಶೇಷವಾಗುತ್ತದೆ. ಆದುದರಿಂದ ಇರಾನ್ ಕಡೆಯಿಂದ ಅಮೆರಿಕಾ ಬೆದರಿಕೆಗಳನ್ನು ಬಯಸುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೋಲೆಮನಿ ಹತ್ಯೆಯಾದ ಬಳಿಕ ಇರಾನ್ ನಲ್ಲಿ ಪ್ರತಿಕಾರದ ಕೂಗು ಕೇಳಿಬಂದಿತ್ತು. ಅಮೆರಿಕಾ ವಿರುದ್ಧ ಸೇಡು ಎಂದು ಉದ್ಘೋಷ ಇರಾನ್ ನಾದ್ಯಂತ ಮೊಳಗಿತ್ತು. ಅದರ ಬೆನ್ನಲ್ಲೆ ಡೊನಾಲ್ಡ್ ಟ್ರಂಪ್ ಸರಣಿ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’