ಅಪರಿಚಿತ ವ್ಯಕ್ತಿ ಎಂದು ತಪ್ಪಾಗಿ ಭಾವಿಸಿ ಮಗಳಿಗೆ ಗುಂಡು ಹೊಡೆದ ತಾಯಿ!

Team Udayavani, Sep 5, 2019, 10:20 AM IST

ವಾಷಿಂಗ್ಟನ್: ಯಾರೋ ಅಪರಿಚಿತ ಆಗಂತುಕ ಮನೆಗೆ ಆಗಮಿಸಿದ್ದಾರೆ ಎಂದು ತಪ್ಪಾಗಿ ಗ್ರಹಿಸಿದ್ದ ಮಹಿಳೆಯೊಬ್ಬರು ಅಚ್ಚರಿಯ ಭೇಟಿ ನೀಡಿದ್ದ 18 ವರ್ಷದ ಮಗಳಿಗೆ ಗುಂಡು ಹೊಡೆದ ಘಟನೆ ಅಮೆರಿಕದಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಕಾಲೇಜು ವಿದ್ಯಾಭ್ಯಾಸ ಪಡೆಯುತ್ತಿದ್ದ 18 ವರ್ಷದ ಮಗಳು ಮಾಹಿತಿ ನೀಡದೆ ದಿಢೀರನೆ ಮನೆಗೆ ಬಂದಿದ್ದಳು. ಮನೆಯಲ್ಲಿ ಒಂಟಿಯಾಗಿ ವಾಸಿಸುವ ತಾಯಿಗೆ…ಹೊರಗಿನಿಂದ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿಸಿತ್ತು. ಯಾರೋ ಅಪರಿಚಿತ ವ್ಯಕ್ತಿ ಬಂದಿದ್ದಾನೆ ಎಂದು ತನ್ನ ಬಳಿ ಇದ್ದ ಲೈಸೆನ್ಸ್ ಹೊಂದಿರುವ .38 ಪಿಸ್ತೂಲ್ ನಿಂದ ಬಾಗಿಲು ತೆಗೆದಾಗ ದಿಢೀರನೆ ಒಳನುಗ್ಗಿದಾಕೆಗೆ ಗುಂಡು ಹೊಡೆದುಬಿಟ್ಟಿರುವುದಾಗಿ ವರದಿ ತಿಳಿಸಿದೆ.

ಗುಂಡು ಹೊಡೆದು ಬಳಿಕ ತಾಯಿಗೆ ಜ್ಞಾನೋದಯವಾಗಿದೆ..ಅಯ್ಯೋ ತನ್ನ ಮಗಳಿಗೆ ತಾನು ಗುಂಡು ಹೊಡೆದಿದ್ದೇನೆ ಎಂದು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಓಹಿಯೋ ಟಿವಿ ವರದಿ ಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ