ಸೆಪ್ಟಂಬರ್ಗೆ ಲಸಿಕೆ ಉತ್ಪಾದನೆ ಶುರು: ಅಸ್ಟ್ರಾಜೆನೆಕಾ ಘೋಷಣೆ
Team Udayavani, Jun 8, 2020, 10:03 AM IST
ಸಾಂದರ್ಭಿಕ ಚಿತ್ರ
ಲಂಡನ್: ಆಕ್ಸ್ಫರ್ಡ್ ವಿವಿ ಸಹಭಾಗಿತ್ವದಲ್ಲಿ ಕೋವಿಡ್ ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬ್ರಿಟಿಷ್ ಫಾರ್ಮಾ ಕಂಪೆನಿ ಅಸ್ಟ್ರಾಜೆನೆಕಾ, ಸೆಪ್ಟಂಬರ್ ತಿಂಗಳಲ್ಲಿ ಎರಡು ಬಿಲಿಯನ್ ಡೋಸ್ಗಳಷ್ಟು ಲಸಿಕೆಯನ್ನು ಹೊರತರಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದೆ. ಈ ಬಗ್ಗೆ ವಿವರಣೆ ನೀಡಿದ ಅಸ್ಟ್ರಾಜೆನೆಕಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಸ್ಕಲ್ ಸೊರಿಯೊಟ್, ನಾವೀಗ ಲಸಿಕೆ (ಎಝಡ್ಡಿ 1222) ತಯಾರಿಕೆ ಪ್ರಾರಂಭಿಸಿದ್ದೇವೆ. ಆಗಸ್ಟ್ ಅಂತ್ಯದ ವೇಳೆಗೆ ಇದರ ಫಲಿತಾಂಶ ಕುರಿತಾಗಿ ಮತ್ತಷ್ಟು ಮಾಹಿತಿ ಲಭಿಸಲಿದೆ. ಹೀಗಾಗಿ, ಸೆಪ್ಟಂಬರ್ ವೇಳೆಗೆ ನಮ್ಮ ಲಸಿಕೆ ಪರಿಣಾಮಕಾರಿಯೋ, ಅಲ್ಲವೋ ಎಂಬುದು ಗೊತ್ತಾಗುತ್ತದೆ ಎಂದರು. ಇದೇ ವೇಳೆ, ಅಮೆರಿಕ ಈಗಾಗಲೇ ಎರಡು ಮಿಲಿಯನ್ ಡೋಸ್ಗಳಷ್ಟು ಕೋವಿಡ್ ವೈರಸ್ ಲಸಿಕೆ ಉತ್ಪಾದಿಸಿದೆ. ಕೋವಿಡ್ ಗೆ ಇದು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ವಿಜ್ಞಾನಿಗಳು ತಿಳಿಸಿದರೆ ಈ ದಿಸೆಯಲ್ಲಿ ಮುಂದುವರಿಯುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ