49 ಸಾವಿರ ರೂ. ಚಿತ್ರ 25 ಕೋಟಿ ರೂಪಾಯಿಗೆ ಮಾರಾಟವಾಯಿತು!
Team Udayavani, Jan 30, 2023, 6:29 PM IST
ಬೆಲ್ಜಿಯಂ: ಬೆಲ್ಜಿಯಂನ 17ನೇ ಶತಮಾನದ ಖ್ಯಾತ ಕಲಾವಿದ ಆಂಥೋನಿ ವ್ಯಾನ್ ಡಿಕ್ ಬರೆದ ವೃದ್ಧನೊಬ್ಬನ ನಗ್ನಚಿತ್ರವೊಂದು 25.25 ಕೋಟಿ ರೂ.ಗೆ (3.1 ಮಿಲಿಯನ್ ಡಾಲರ್) ಮಾರಾಟವಾಗಿದೆ.
ಅದರಲ್ಲೇನು ವಿಶೇಷವೆಂದು ಕೇಳುತ್ತೀರಾದರೆ… ಈ ಚಿತ್ರ ನ್ಯೂಯಾರ್ಕ್‌ನ ಒಂದು ಹೊಲದ ಶೆಡ್‌ನಲ್ಲಿ ಗೋಡೆಗೆ ನೇತು ಹಾಕಲ್ಪಟ್ಟಿತ್ತು. ಅದರ ಮೇಲೆ ಹಕ್ಕಿಗಳ ಹಿಕ್ಕೆ ಬಿದ್ದು ಐತಿಹಾಸಿಕ ಚಿತ್ರ ಮೌಲ್ಯವನ್ನೇ ಕಳೆದುಕೊಂಡಿತ್ತು. ಇದನ್ನು ಆಲ್ಬರ್ಟ್ ಬಿ ರಾಬರ್ಟ್ಸ್ ಎಂಬ ವ್ಯಕ್ತಿ ನೋಡಿ ಕೇವಲ 600 ಡಾಲರ್‌ಗಳಿಗೆ (49 ಸಾವಿರ ರೂ.) ಕೊಂಡಿದ್ದರು. ನಂತರ ಇದರ ಬಗ್ಗೆ ಒಂದು ಲೇಖನ ಪ್ರಕಟವಾಯಿತು. ಅದನ್ನು ಸೊಥೆಬಿ ಸಂಸ್ಥೆ ಇತ್ತೀಚೆಗೆ ಹರಾಜು ಹಾಕಿದಾಗ, ದಿಢೀರ್ ಬೆಲೆಯೇರಿ 25 ಕೋಟಿ ರೂ.ಗೆ ಖರೀದಿಸಲ್ಪಟ್ಟಿತು!
ಇದನ್ನೂ ಓದಿ: ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಬಂದಿಳಿದದ್ದು ಮಾತ್ರ ದುಬೈಯಲ್ಲೇ…