ಗಲ್ಫ್ ದೇಶಗಳಿಗೇ ಬಾಧಿಸೀತು ಯುದ್ಧ!

Team Udayavani, Jun 24, 2019, 5:11 AM IST

ದುಬಾೖ: ಗಲ್ಫ್ ವಲಯದಲ್ಲಿ ಯಾವುದೇ ಸಂಘರ್ಷ ಉಂಟಾದರೆ ಅದರ ಪರಿಣಾಮ ಅಮೆರಿಕದ ಸೇನೆಯ ಮೇಲೆ ಬೀರಬಹುದು ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಇರಾನ್‌ ವಿರುದ್ಧ ಇನ್ನಷ್ಟು ನಿಷೇಧ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಇರಾನ್‌ ಸೇನೆಯ ಕಮಾಂಡರ್‌ ಒಬ್ಬರು ಈ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಯುದ್ಧ ಸಂಭವಿಸಿದರೆ ಈ ವಲಯದ ಎಲ್ಲ ದೇಶಕ್ಕೂ ಇದು ಬಾಧಿಸಲಿದೆ. ಹೀಗಾಗಿ ಅಮೆರಿಕ ತನ್ನ ಸೇನೆಯನ್ನು ರಕ್ಷಿಸುವುದಕ್ಕಾಗಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮೇಜರ್‌ ಜನರಲ್‌ ಗುಲಾಂ ಅಲಿ ರಶಿದ್‌ ಹೇಳಿದ್ದಾರೆ.

ಈ ಮಧ್ಯೆ, ನಿಷೇಧ ಹೇರಿದರೂ ಇರಾನ್‌ನ ಆರ್ಥಿಕತೆಯನ್ನು ಚೇತರಿಸುವುದಕ್ಕಾಗಿ ಇರಾನ್‌ ಜೊತೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವು ದಾಗಿಯೂ ಟ್ರಂಪ್‌ ಶನಿವಾರವಷ್ಟೇ ಹೇಳಿದ್ದಾರೆ. ಆದರೆ ಟ್ರಂಪ್‌ ಹೇಳಿಕೆಗೆ ಇರಾನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ