ತೈಲ ಬೆಲೆ ಏರಿಕೆಯ ಎಚ್ಚರಿಕೆ !
Team Udayavani, Oct 1, 2019, 5:00 AM IST
ದುಬಾೖ: ಇರಾನ್ ಅನ್ನು ತಡೆಯದಿದ್ದರೆ ತೈಲ ಬೆಲೆ ಊಹಿಸಲಾಗದಷ್ಟು ಏರಿಕೆಯಾಗಲಿದೆ ಎಂದು ಸೌದಿಅರೇಬಿ ಯಾದ ನಿಯೋಜಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಅಲ್ಲದೆ, ಇರಾನ್ ಅನ್ನು ತಡೆಯುವುದಕ್ಕೆ ಸೇನೆಯ ಬದಲಿಗೆ ರಾಜಕೀಯ ಪರಿಹಾರಕ್ಕೆ ಆದ್ಯತೆ ನೀಡುತ್ತೇವೆ ಎಂದೂ ಅವರು ಸಿಬಿಎಸ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇರಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ, ಈ ಘರ್ಷಣೆ ಇನ್ನಷ್ಟು ಹೆಚ್ಚುತ್ತದೆ. ತೈಲ ಪೂರೈಕೆಗೆ ಅಡ್ಡಿಯಾಗುತ್ತದೆ ಮತ್ತು ತೈಲ ಬೆಲೆ ನಮ್ಮ ಜೀವಮಾನದಲ್ಲಿ ನೋಡಿಲ್ಲದ ದರಕ್ಕೆ ಏರಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಇರಾನ್ ವಿರುದ್ಧ ಯುದ್ಧ ನಡೆಸಲು ನಾವು ಬಯಸಲಿಲ್ಲ. ಸೌದಿ, ಇರಾನ್ ಮಧ್ಯೆ ಯುದ್ಧ ನಡೆದರೆ ಜಾಗತಿಕ ಆರ್ಥಿಕತೆ ಕುಸಿಯುತ್ತದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ