ಆತ ಯಾರು ಎಂಬುದು ನಮಗೆ ಚೆನ್ನಾಗಿ ಗೊತ್ತು: ಐಸಿಸ್ ನೂತನ ನಾಯಕನ ಬಗ್ಗೆ ಟ್ರಂಪ್

Team Udayavani, Nov 2, 2019, 11:25 AM IST

ವಾಷಿಂಗ್ಟನ್: ಐಸಿಸ್ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ ಅಮೆರಿಕದ ಸೇನಾಪಡೆಯ ಕಾರ್ಯಾಚರಣೆ ವೇಳೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದ ನಂತರ ಐಸಿಸ್ ಸಂಘಟನೆಗೆ ಆಯ್ಕೆಯಾದ ನೂತನ ನಾಯಕ ಯಾರು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರುಗೇಟು ನೀಡಿದ್ದಾರೆ.

ಐಸಿಸ್ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ ಹತ್ಯೆಯ ನಂತರ ಅಮೆರಿಕವನ್ನು ಸುಮ್ಮನೆ ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳುತ್ತೇವೆ ಎಂದು ನೂತನವಾಗಿ ಆಯ್ಕೆಯಾದ ಐಸಿಸ್ ಉಗ್ರ ನಾಯಕನ ಹೇಳಿಕೆಗೆ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಐಸಿಸ್ ಗೆ ಹೊಸ ನಾಯಕ ಬಂದಿದ್ದಾನೆ. ಆತ ಯಾರು ಎಂಬುದು ನಮಗೆ ಖಚಿತವಾಗಿ ತಿಳಿದಿದೆ ಎಂದು ಟ್ವೀಟ್ ಮಾಡಿರುವ ಟ್ರಂಪ್ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

ಅಲ್ ಬಾಗ್ದಾದಿ  ಸಾವನ್ನಪ್ಪಿದ್ದನ್ನು ಐಸಿಸ್ ಪ್ರಕಟಣೆಯಲ್ಲಿ ಖಚಿತಪಡಿಸಿದ ನಂತರ ಆತನ ಸ್ಥಾನಕ್ಕೆ ಅಬು ಇಬ್ರಾಹಿಂ ಅಲ್ ಹಾಶ್ಮಿ ಅಲ್ ಖುರೇಷಿಯನ್ನು ನೂತನ ನಾಯಕ ಎಂದು ಘೋಷಿಸಿತ್ತು. ಈ ಹಿಂದೆಯೂ ಅಲ್ ಬಾಗ್ದಾದಿ ಹತ್ಯೆಗೀಡಾಗಿದ್ದಾನೆ ಎಂಬ ವರದಿ ಬಂದಾಗಲೂ ಹಾಶ್ಮಿ ಹೆಸರು ಚಾಲ್ತಿಗೆ ಬಂದಿತ್ತು. ಇದನ್ನು ಹೊರತುಪಡಿಸಿ ಹಾಶ್ಮಿ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ