ವಕೀಲರಿಗೆ ವಾಗ್ಧಂಡನೆ ಬಿಸಿ : ಅಮೆರಿಕದ ಎನ್‌.ಎಸ್‌.ಸಿ. ಅಧಿಕಾರಿಗಳಿಗೆ ಬಂದ ಸಂಕಷ್ಟ

Team Udayavani, Nov 2, 2019, 8:00 AM IST

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ಧಂಡನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನ (ಎನ್‌ಎಸ್‌ಸಿ) ಇಬ್ಬರು ಹಿರಿಯ ವಕೀಲರಿಗೆ ಪ್ರಕರಣದ ತನಿಖಾಧಿಕಾರಿಗಳಿಂದ ನೋಟಿಸ್‌ ಜಾರಿಗೊಳಿಸಲಾಗಿದೆ. ಎನ್‌.ಎಸ್‌.ಸಿ.ಯ ಮುಖ್ಯಸ್ಥ ಜಾನ್‌ ಐಸೆನ್‌ಬರ್ಗ್‌ ಹಾಗೂ ಹಿರಿಯ ಸಹ ಸಲಹೆಗಾರ ಮೈಕಲ್‌ ಎಲ್ಲೀಸ್‌ ಅವರಿಗೆ ತಮ್ಮ ವಿರುದ್ಧ ಆರೋಪಗಳನ್ನು ನಿರಾಕರಿಸುವ ಸಂಬಂಧಿಸಿದಂತೆ ಪುರಾವೆಗಳನ್ನು ಸಾಬೀತುಪಡಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ರಹಸ್ಯ ಮುಚ್ಚಿಟ್ಟರೇ?
ರಿಪಬ್ಲಿಕನ್‌ ನಾಯಕ ಜೊ ಬೈಡನ್‌ ವಿರುದ್ಧ ಗೂಢಚರ್ಯೆ ನಡೆಸುವಂತೆ ಉಕ್ರೇನ್‌ ಅಧ್ಯಕ್ಷರಿಗೆ ಧಮಕಿ ಹಾಕಿದ್ದರು ಟ್ರಂಪ್‌ ಎಂದು ಆರೋಪಿಸಲಾಗಿತ್ತು.ಫೋನ್‌ ಕರೆಯ ಬಗ್ಗೆ ವೈಟ್‌ಹೌಸ್‌ ಸಿಬಂದಿಯು ಎನ್‌ಎಸ್‌ಸಿಯ ಗಮನಕ್ಕೆ ತಂದಾಗ, ಅದರ ಅಧ್ಯಕ್ಷ ಜಾನ್‌ ಐಸೆನ್‌ಬರ್ಗ್‌ ಹಾಗೂ ಹಿರಿಯ ಸಹ ಸಲಹೆಗಾರ ಮೈಕಲ್‌ ಎಲ್ಲೀಸ್‌, ಈ ವಿಚಾರ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಟ್ರಂಪ್‌ರವರ ಪರೋಕ್ಷ ಬೆಂಬಲಕ್ಕೆ ನಿಂತರೆಂಬ ಆರೋಪವಿದೆ.

ಇದೇ ವೇಳೆ ಟ್ರಂಪ್‌ ವಿರುದ್ಧದ ವಾಗ್ಧಂಡನೆ ಪ್ರಕ್ರಿಯೆಗೆ ಅಮೆರಿಕ ಸಂಸತ್ತಿನಲ್ಲಿ ಒಪ್ಪಿಗೆ ಸಿಕ್ಕಿದೆ. ವಾಗ್ಧಂಡನೆ ಪ್ರಕ್ರಿಯೆಯ ರೂಪುರೇಷೆಗಳ ಬಗ್ಗೆ ಅಲ್ಲಿನ ಸಂಸತ್ತಿನ ಕೆಳಮನೆಯಲ್ಲಿ ಶುಕ್ರವಾರ ಮಂಡಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ