ಪತ್ನಿ ಅಂಗಡಿಗೆ ಕಳುಹಿಸಿದ್ದರಿಂದ 1ಕೋಟಿ ರೂ.ಗೂ ಅಧಿಕ ಲಾಟರಿ ಗೆದ್ದು ಬಂದ ಪತಿ.!
Team Udayavani, Oct 2, 2022, 8:13 PM IST
ವಾಷಿಂಗ್ಟನ್: ಜೀವನದಲ್ಲಿ ಅದೃಷ್ಟ ಯಾವ ಕ್ಷಣದಲ್ಲಿ ಖುಲಾಯಿಸುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.ರಾತ್ರಿ ಕಳೆದು ಹಗಲು ಆಗುವ ಒಳಗೆ ಲಾಟರಿ ಹೊಡೆದು ಕೋಟ್ಯಧಿಪತಿ ಆಗುವುದನ್ನೂ ನೋಡಿದ್ದೇವೆ. ಇಲ್ಲೊಬ್ಬ ವ್ಯಕ್ತಿಯ ಕಥೆಯೂ ಹೀಗೆಯೇ ಆಗಿದೆ.
ಅಮೆರಿಕಾದ ಮಿಚಿಗನ್ ನಿವಾಸಿಯಾಗಿರುವ ಪ್ರೆಸ್ಟನ್ ಮಾಕಿ ಅಂದು ತಮ್ಮ ನಿತ್ಯದ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದರು. ಅದೇ ವೇಳೆ ಅವರ ಮೊಬೈಲ್ ಗೆ ಹೆಂಡತಿ ಬರುವಾಗ ಅಂಗಡಿಯಿಂದ ಕೆಲ ವಸ್ತುಗಳನ್ನು ತನ್ನಿ ಎಂದು ಮೆಸೇಜ್ ಮಾಡುತ್ತಾರೆ. ಸರಿಯೆಂದು ಶಾಪ್ ಗೆ ಹೋದ ಪ್ರೆಸ್ಟನ್ ಮಾಕಿ ಅವರ ಜೀವನವನ್ನೇ ಬದಲಾಯಿಸಿದ ಘಟನೆಯೊಂದು ನಡೆದಿದೆ.
ದೊಡ್ಡ ಶಾಪ್ ನಲ್ಲಿ ಪ್ರೆಸ್ಟನ್ ಮಾಕಿ 5 ಲಾಟರಿ ಟಿಕೆಟ್ ನ್ನು ಖರೀದಿಸುತ್ತಾರೆ. ಟಿಕೆಟ್ ಖರೀದಿಸಿ ಮನೆಗೆ ತೆರಳಿದ್ದ ಪ್ರೆಸ್ಟನ್ ಮಾಕಿ ಮರುದಿನ ಬೆಳಗ್ಗೆ ಲಾಟರಿ ಟಿಕೆಟ್ ನಂಬರ್ ನ್ನು ಮೊಬೈಲ್ ಆ್ಯಪ್ ನಲ್ಲಿ ಸ್ಕ್ಯಾನ್ ಮಾಡಿ ನೋಡುತ್ತಾರೆ. ನೋಡಿದಾಗ ಅವರ 05-12-16-17-29 ನಂಬರ್ ವುಳ್ಳ ಎಲ್ಲಾ ಲಾಟರಿಯಲ್ಲೂ ಅವರು ಜಾಕ್ ಪಾಟ್ ಬಹುಮಾನವನ್ನು ಗೆದ್ದಿರುತ್ತಾರೆ. ಅವರು ಬರೋಬ್ಬರಿ $190,736 (ಒಂದು ಕೋಟಿಯ ಐವತೈದು ಲಕ್ಷದ ಎಪ್ಪತ್ತವೊಂದು ಸಾವಿರದ ಮೂನ್ನೂರ ಎಂಬತ್ತೊಂದು ರೂ.) ಗೆದ್ದುಕೊಂಡಿದ್ದಾರೆ.
ನಾನು ಸಾಮಾನ್ಯವಾಗಿ $200,000 ಕ್ಕಿಂತ ಹೆಚ್ಚಿಲ್ಲದಿದ್ದರೆ ಲಾಟರಿಯನ್ನು ಖರೀದಿಸುವುದಿಲ್ಲ. ಈ ಲಾಟರಿಯ ಹಣ ದೊಡ್ಡ ಮೊತ್ತಕ್ಕೆ ಹತ್ತಿರವಾಗಿದ್ದರಿಂದ ಅದನ್ನು ಖರೀದಿಸಿದೆ ಎಂದರು.
ಬಂದಿರುವ ಹಣದಿಂದ ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತೇನೆ, ಇನ್ನು ಸ್ವಲ್ಪ ಹಣವನ್ನು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ ಪ್ರೆಸ್ಟನ್ ಮಾಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು