ವಿಶ್ವ ಯುದ್ಧದ ಭೀತಿ; ರಷ್ಯಾ ಗಡಿಯಲ್ಲಿ ಅಮೆರಿಕದ 12 ಸಾವಿರ ಸೈನಿಕರು

ನ್ಯಾಟೋ ರಾಷ್ಟ್ರಗಳ ಮೇಲೆ ಹಾರಾಡಿದ ರಷ್ಯಾ ಡ್ರೋನ್‌

Team Udayavani, Mar 13, 2022, 7:00 AM IST

ವಿಶ್ವ ಯುದ್ಧದ ಭೀತಿ; ರಷ್ಯಾ ಗಡಿಯಲ್ಲಿ ಅಮೆರಿಕದ 12 ಸಾವಿರ ಸೈನಿಕರು

ಕೀವ್‌/ಮಾಸ್ಕೋ: ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧವು ಸದ್ಯದಲ್ಲೇ “ಮೂರನೇ ವಿಶ್ವ ಯುದ್ಧ’ವಾಗಿ ಮಾರ್ಪಾಡಾಗಲಿದೆಯೇ ಎಂಬ ಪ್ರಶ್ನೆ ಹೆಚ್ಚು ದಟ್ಟವಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಏಕಾಏಕಿ ತನ್ನ 12 ಸಾವಿರ ಸೈನಿಕರನ್ನು ರಷ್ಯಾದ ಗಡಿ ಯುದ್ದಕ್ಕೂ ನಿಯೋಜಿಸಿದ್ದಾರೆ. ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ದೇಶಗಳಲ್ಲಿ ಅಮೆರಿಕದ ಸೇನೆಗಳಿವೆ. ಜತೆಗೆ, ಉಕ್ರೇನ್‌ನಲ್ಲಿ ಆರಂಭಿಸಿರುವ ಯುದ್ಧವು ಪುತಿನ್‌ಗೆ ಯಾವ ಕಾರಣಕ್ಕೂ ಜಯ ತಂದುಕೊಡುವುದಿಲ್ಲ ಎಂದೂ ಬೈಡೆನ್‌ ಗುಡುಗಿದ್ದಾರೆ.

ಸೇನೆ ಜಮಾಯಿಸುವ ಮೂಲಕ ಅಮೆರಿಕವು ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಸಜ್ಜಾಗಿರುವ ಸುಳಿವು ನೀಡಿದೆ. ಅಮೆರಿಕವು ರಷ್ಯಾ ವಿರುದ್ಧ ದಾಳಿ ಆರಂಭಿಸಿದರೆ 3ನೇ ವಿಶ್ವ ಯುದ್ಧ ಆರಂಭ ವಾಯಿತೆಂದೇ ಅರ್ಥ.

3ನೇ ವಿಶ್ವಯುದ್ಧ ಅಲ್ಲ
ರಷ್ಯಾ ಗಡಿಯಲ್ಲಿ ಸೇನೆ ನಿಯೋಜಿಸಿರುವ ವಿಚಾರ ವನ್ನು ಶನಿವಾರ ಘೋಷಿ ಸಿರುವ ಬೈಡೆನ್‌, “ನಾವು ಉಕ್ರೇನ್‌ ನಲ್ಲಿ ಮೂರನೇ ವಿಶ್ವ ಯುದ್ಧ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿ ದ್ದಾರೆ. ಆದರೆ, ನ್ಯಾಟೋದ ಪ್ರತಿ ಇಂಚನ್ನೂ ರಕ್ಷಿಸಲು ನಾವು ಬದ್ಧರಾಗಿ ದ್ದೇವೆ ಎಂಬ ಸಂದೇಶವನ್ನು ರಷ್ಯಾಕ್ಕೆ ರವಾನಿಸುತ್ತಿದ್ದೇವೆ ಎಂದಿದ್ದಾರೆ.

ರಷ್ಯಾ ನಿರ್ಮಿತ ಡ್ರೋನ್‌ ಪತನ
ರಷ್ಯಾ ನಿರ್ಮಿತ ಸೇನಾ ಡ್ರೋನೊಂದು ನ್ಯಾಟೋ ಸದಸ್ಯ ರಾಷ್ಟ್ರ ವಾದ ಕ್ರೋಶಿಯಾದಲ್ಲಿ ಪತನವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಕ್ರೋಶಿಯಾ, “ಇಷ್ಟೆಲ್ಲ ಆದರೂ ನ್ಯಾಟೋ ಯಾಕೆ ಸುಮ್ಮನಿದೆ’ ಎಂದು ಪ್ರಶ್ನಿಸಿದೆ. ಕ್ರೋಶಿಯಾ ತಲುಪುವ ಮುನ್ನ ಡ್ರೋನ್‌ ರೊಮೇನಿಯಾ ಮತ್ತು ಹಂಗೇರಿಯ ಆಗಸದಲ್ಲಿ 40 ನಿಮಿಷ ಹಾಗೂ ಕ್ರೋಶಿಯಾದಲ್ಲಿ 7 ನಿಮಿಷ ಹಾರಾಡಿತ್ತು.

ಹಲವು ನಗರಗಳಿಗೆ ವ್ಯಾಪಿಸಿದ ದಾಳಿ
ಈ ಹಿಂದೆ ಸಿರಿಯಾ ಹಾಗೂ ಚೆಚೆನ್ಯಾದಲ್ಲಿ ಬಳಸಿದ ಕಾರ್ಯತಂತ್ರವನ್ನೇ ಉಕ್ರೇನ್‌ನಲ್ಲೂ ರಷ್ಯಾ ಬಳಸುತ್ತಿದೆ. ನಿರಂತರ ವೈಮಾನಿಕ ಹಾಗೂ ಶೆಲ್‌ ದಾಳಿ ಮೂಲಕ ಮೊದಲಿಗೆ ಸಶಸ್ತ್ರ ಪ್ರತಿರೋಧವನ್ನು ಕಿವುಚಿ ಹಾಕುವುದು ಪುಟಿನ್‌ ಕಾರ್ಯತಂತ್ರವಾಗಿದೆ. ಅದರಂತೆ, ಆರಂಭದಲ್ಲಿ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ದಾಳಿಯು ಈಗ ಹಲವು ನಗರಗಳಿಗೆ ವ್ಯಾಪಿಸಿದೆ. ಶನಿವಾರ ರಷ್ಯಾ ಪಡೆಗಳು ಮರಿಯುಪೋಲ್‌ನ ಐತಿಹಾಸಿಕ ಮಸೀದಿಯೊಂದರ ಮೇಲೆ ಶೆಲ್‌ ದಾಳಿ ನಡೆಸಿದೆ. ಈ ಮಸೀದಿಯಲ್ಲಿ 34 ಮಕ್ಕಳು ಸಹಿತ 80ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ದಾಳಿಯಿಂದಾಗಿ ಉಂಟಾದ ಸಾವು-ನೋವಿನ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಉಕ್ರೇನ್‌ ಹೇಳಿದೆ.

ಮರಿಯುಪೋಲ್‌ನಲ್ಲಿ ಸತತ ದಾಳಿ ನಡೆಸುವ ಮೂಲಕ ರಷ್ಯಾ ಪಡೆ ನಗರಕ್ಕೆ ಆಹಾರ, ನೀರು ಸರಬರಾಜು ಆಗದಂತೆ ಹಾಗೂ ನಾಗರಿಕರ ಸ್ಥಳಾಂತರವಾಗದಂತೆ ನೋಡಿಕೊಳ್ಳುತ್ತಿದೆ. ಮಿಕೋಲಾಯಿವ್‌ ಎಂಬಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಮೇಲೆ ರಷ್ಯಾ ಬಾಂಬ್‌ ಹಾಕಿದೆ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ರಾಜಧಾನಿ ಕೀವ್‌, ವಾಸ್ಕೀವ್‌, ಮರಿಯುಪೋಲ್‌, ಮೆಲಿಟೋಪೋಲ್‌ ಸಹಿತ ಹಲವು ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ.

ಇದನ್ನೂ ಓದಿ:ಯುಪಿಯಲ್ಲಿ ಹೀನಾಯ ಸೋಲು: ಮಾಧ್ಯಮಗಳ ಮುಂದೆ ಬರಲ್ಲ ಎಂದ ಮಾಯಾವತಿ

ಬಾಹ್ಯಾಕಾಶ ಕೇಂದ್ರ ಧ್ವಂಸ ಬೆದರಿಕೆ
ದಿಗ್ಬಂಧನದಿಂದ ನಲುಗಿರುವ ರಷ್ಯಾ ಅಂತಾರಾಷ್ಟ್ರೀಯ ಬಾಹ್ಯಾ ಕಾಶ ಕೇಂದ್ರ (ಐಎಸ್‌ಎಸ್‌)ವನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿ ಅಮೆರಿಕದ ನಾಸಾ ಮತ್ತು ಕೆನಡಾ, ಯುರೋಪ್‌ ಸಹಿತ ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಗೆ ಪತ್ರ ಬರೆ  ದಿದೆ. ನಿರ್ಬಂಧಗಳಿಂದಾಗಿ ಬಾಹ್ಯಾ ಕಾಶ ಕೇಂದ್ರದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಿರ್ಬಂಧ  ತೆರವುಗೊಳಿಸದಿದ್ದರೆ, ಬಾಹ್ಯಾಕಾಶ ಕೇಂದ್ರವನ್ನೇ ನಾಶ ಮಾಡ ಬೇಕಾಗು ತ್ತದೆ. 500 ಟನ್‌ ತೂಕದ ಐಎಸ್‌ಎಸ್‌ ಎಲ್ಲಾದರೂ ಪತನಗೊಳ್ಳಲಿದೆ ಎಂದು ರಷ್ಯಾ ಬೆದರಿಕೆ ಹಾಕಿದೆ. ಪ್ರಸ್ತುತ ಈ ಕೇಂದ್ರದಲ್ಲಿ ನಾಸಾದ ನಾಲ್ವರು, ರಷ್ಯಾದ ಇಬ್ಬರು ಮತ್ತು ಯುರೋಪ್‌ನ ಒಬ್ಬ ಗಗನಯಾತ್ರಿ ಇದ್ದಾರೆ.

ಮೇಯರ್‌ ಅಪಹರಣ
ಉಕ್ರೇನ್‌ನ ಮೆಲಿಟೋಪೋಲ್‌ ನಗರದ ಮೇಯರ್‌ ಒಬ್ಬರನ್ನು ರಷ್ಯಾ ಅಪಹರಣ ಮಾಡಿದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು ನಾಗರಿ ಕರು ಆಗ್ರಹಿಸಿದ್ದಾರೆ. “ಮೇಯರ್‌ ಅಪಹರಣವು ಹೊಸ ಭಯೋತ್ಪಾದನೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಕಿಡಿ ಕಾರಿದ್ದಾರೆ.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.