2050ಕ್ಕೆ ವಯೋ ಅನುಪಾತ‌ ಹೆಚ್ಚು?

Team Udayavani, Jun 23, 2019, 5:00 AM IST

ಸಾಂದರ್ಭಿಕ ಚಿತ್ರ

ಸ್ಯಾನ್‌ಫ್ರಾನ್ಸಿಸ್ಕೋ: ವಿಶ್ವದೆಲ್ಲೆಡೆ ಜನಸಂಖ್ಯಾ ಸ್ಫೋಟ ಹಾಗೂ ಅದರಿಂದ ಆಗುವ ಅನಾಹುತಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ, ವಿಶ್ವಖ್ಯಾತಿಯ ಟೆಸ್ಲಾ ಕಂಪೆನಿಯ ಮುಖ್ಯಸ್ಥ ಎಲಾನ್‌ ಮಸ್ಕ್ ಅವರು, ‘2050ರ ಹೊತ್ತಿಗೆ ವಿಶ್ವದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿ, ಯುವ ಜನರ ಸಂಖ್ಯೆ ಇಳಿಮುಖವಾಗುತ್ತದೆ. ಮನುಕುಲಕ್ಕೆ ಇದು ಎಚ್ಚರಿಕೆಯ ಕರೆಗಂಟೆ’ ಎಂದಿದ್ದಾರೆ.

ಮಸ್ಕ್ ಇಂಥದ್ದೊಂದು ಮಾತು ಹೇಳಲು ಕಾರಣ, ವರ್ಲ್ಡ್ ಆಫ್ ಎಂಜಿನಿಯರಿಂಗ್‌ ಎಂಬ ಸಂಸ್ಥೆಯ ಟ್ವೀಟ್. ಅದರಲ್ಲಿ, ‘1950ರಲ್ಲಿ ವಿಶ್ವದ ಜನಸಂಖ್ಯೆ 25,560,00,053ರಷ್ಟಿತ್ತು. ಆದರೆ, ಈಗ ಅದು 7,712,343,478ಕ್ಕೆ ಬಂದು ಮುಟ್ಟಿದೆ. 2050ಕ್ಕೆ ಅದು 9,346,399,468ಕ್ಕೆ ತಲುಪಲಿದೆ’ ಎಂದು ಹೇಳಲಾಗಿತ್ತು.

ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮಸ್ಕ್, ‘ಈಗ ಅಳವಡಿಸಿಕೊಳ್ಳಲಾಗಿರುವ ಜನಸಂಖ್ಯಾ ನಿಯಂತ್ರಣ ಕ್ರಮದಿಂದಾಗಿ 2050ರ ಹೊತ್ತಿಗೆ ವಿಶ್ವದಲ್ಲಿ ಜನಿಸುವವರ ಸಂಖ್ಯೆ ಇಳಿಕೆಯಾಗಲಿದೆ. ಆಗ ವೃದ್ಧರ ಸಂಖ್ಯೆ ಹೆಚ್ಚು ಹಾಗೂ ಯುವ ಜನರ ಸಂಖ್ಯೆ ಅತಿ ಕಡಿಮೆಯಾಗುತ್ತದೆ’ ಎಂದಿದ್ದಾರೆ. ಇದೇ ವಿಚಾರವನ್ನು ಮಸ್ಕ್ ಅವರು 2017ರಲ್ಲಿ, ಸಂದರ್ಶನದಲ್ಲೂ ಹೇಳಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ