ವಂಶವಾಹಿ ತಿದ್ದಿದ ಮಗು ಜನನ
Team Udayavani, Nov 27, 2018, 6:00 AM IST
ಬೀಜಿಂಗ್: ವಿಶ್ವದಲ್ಲೇ ಅತ್ಯಂತ ಮಹತ್ವದ ವೈದ್ಯಕೀಯ ಸಾಧನೆಯೊಂದನ್ನು ಚೀನಾದ ವಿಜ್ಞಾನಿಗಳು ಮಾಡಿದ್ದಾರೆ. ಏಕ ಕೋಶ ಭ್ರೂಣವಾಗಿದ್ದಾಗಲೇ ತಾಯಿಯ ಗರ್ಭಕೋಶದೊಳಗಿಂದಲೇ ಏಡ್ಸ್ ಸೋಂಕು ತಗುಲದಂತೆ ವಂಶವಾಹಿಗಳನ್ನು ತಿದ್ದಿದ ಅವಳಿ ಮಕ್ಕಳು ಚೀನಾದಲ್ಲಿ ಜನಿಸಿದ್ದಾರೆ. ಈ ಮಕ್ಕಳಿಗೆ ಲುಲು ಹಾಗೂ ನಾನಾ ಎಂದು ಹೆಸರಿಡಲಾಗಿದೆ. ಸಂಶೋಧಕ ಜಿಯಾಂ ಕುಯಿ ವಂಶವಾಹಿಯನ್ನು ತಿದ್ದುಪಡಿ ಮಾಡಿರುವ ಬಗ್ಗೆ ವಿವರಣೆ ನೀಡಿದ್ದು, ಇದು ವಿವಾದಿತ ಶಸ್ತ್ರಚಿಕಿತ್ಸೆ ಎಂದೂ ಅವರು ಹೇಳಿದ್ದಾರೆ.
ವಂಶವಾಹಿ ತಿದ್ದುಪಡಿ ಮಾಡುವ ತಂತ್ರಜ್ಞಾನ ಯಶಸ್ವಿಯಾದಲ್ಲಿ ಏಡ್ಸ್ ರೀತಿಯಲ್ಲೇ ಹಲವು ಆನುವಂಶೀಯ ರೋಗಗಳನ್ನು ತಡೆ ಗಟ್ಟಬಹುದಾಗಿದೆ. ಆದರೆ, ತಮ್ಮ ಮಕ್ಕಳು ತುಂಬಾ ಬುದ್ಧಿವಂತರಾಗಬೇಕು, ಇಂಥದ್ದೇ ಕೂದಲು ಶೈಲಿ ಇರಬೇಕು ಅಥವಾ ಕೂದಲು ಬಣ್ಣ ಇರಬೇಕು ಎಂದು ಪಾಲಕರು ಬಯಸಿದರೆ, ಅದಕ್ಕೆ ಸಂಬಂಧಿಸಿದಂತೆ ವಂಶವಾಹಿ ಯನ್ನು ತಿದ್ದುಪಡಿ ಮಾಡಿಸುವ ಪರಂಪರೆಯೂ ಶುರುವಾಗಬಹುದು ಎಂದು ವಿಜ್ಞಾನಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಜಿಯಾಂಕುಯಿ ನಡೆಸಿದ ಸಂಶೋ ಧನೆಯ ಬಗ್ಗೆಯೂ ಪಾಶ್ಚಾತ್ಯ ದೇಶಗಳ ವಿಜ್ಞಾನಿ ಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಂಶವಾಹಿ ತಿದ್ದುಪಡಿಗೆ ಹಲವು ಯತ್ನಗಳು ನಡೆದಿವೆಯಾದರೂ, ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ