ನಿಮ್ಮ ಆಕಾರ ಬಲು ಸುಂದರ.. ಫ್ರೆಂಚ್‌ ಅಧ್ಯಕ್ಷರ ಪತ್ನಿಗೆ ಟ್ರಂಪ್‌!

Team Udayavani, Jul 14, 2017, 12:18 PM IST

ಪ್ಯಾರಿಸ್‌: ನಿಮ್ಮ ಅಂಗ ಸೌಷ್ಟವ ಬಲು ಸುಂದರವಾಗಿದೆ..ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫ್ರೆಂಚ್‌ ಅಧ್ಯಕ್ಷ  ಇಮಾನ್ವೆಲ್‌ ಮಾಕ್ರೋನ್‌ ಅವರ ಪತ್ನಿ ಬ್ರಿಗಿಟ್ಟೆ ಮಾಕ್ರೋನ್‌ ಅವರನ್ನು ಹೊಗಳಿದ ಪರಿ. ಹೌದು, ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಫ್ರಾನ್ಸ್‌ಗೆ ಭೇಟಿ ನೀಡಿದ ಟ್ರಂಪ್‌ ಅವರು ಪ್ರಥಮ ಮಹಿಳೆ 62 ರ ಹರೆಯದ ಬ್ರಿಗಿಟ್ಟೆ ಅವರನ್ನು ಪತ್ನಿ ಮಲಾನಿಯಾ ಎದುರೇ ಹಾಡಿ ಹೊಗಳಿದ್ದಾರೆ.

ಗುರವಾರ ಪ್ಯಾರಿಸ್‌ನಲ್ಲಿ ಸ್ವಾಗತ ಕೋರಿದ ಇಮಾನ್ವೆಲ್‌ ಬ್ರಿಗಿಟ್ಟೆ  ದಂಪತಿ ಮೊದಲು ಟ್ರಂಪ್‌ ದಂಪತಿಗಳಿಗೆ ಹಸ್ತಲಾಘವ ಮಾಡಿದರು ಬಳಿಕ ಸಂಪ್ರದಾಯದಂತೆ ಗಲ್ಲಕ್ಕೆ ಪರಸ್ಪರ ಮುತ್ತನ್ನು ನೀಡಿದರು. 

ಬ್ರಿಗೆಟ್ಟೆ ಅವರು ನಿವೃತ್ತ ಶಿಕ್ಷಕಿಯಾಗಿದ್ದು ಇದೀಗ 62 ರ ಹರೆಯದಲ್ಲಿದ್ದಾರೆ. ಅಚ್ಚರಿಯೆಂದರೆ ಪತಿ ಇಮಾನ್ವೆಲ್‌ಗೆ ಈಗಿನ್ನೂ 38 ರ ಹರೆಯ!. ತನಗೆ ವಿದ್ಯೆ ಹೇಳಿಕೊಟ್ಟ ಶಿಕ್ಷಕಿ 24 ವರ್ಷ ಹಿರಿಯಳಯನ್ನೇ ಪ್ರೀತಿಸಿ ವಿವಾಹವಾಗಿದ್ದರು. ಟ್ರಂಪ್‌ 71 ರ ಹರೆಯದಲ್ಲಿದ್ದು ಪತ್ನಿ ಮಲಾನಿಯಾಗೆ 47 ವರ್ಷ. ಇವರ ನಡುವಿನ ಅಂತರವೂ 24 ವರ್ಷ!!.

ಇದೀಗ ಟ್ರಂಪ್‌ ವರ್ಣಿಸಿರುವ ಸುದ್ದಿ  ವಿಶ್ವಾದ್ಯಂತ ವೈರಲ್‌ ಆಗಿದ್ದು ಹಲವರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಯೂ ಆರ್‌ ಇನ್‌ ಎ ಗುಡ್‌ ಶೇಪ್‌ ಎಂದಿರುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಸ್ತ್ರೀಯರ ಪರ ಹೋರಾಟಗಾರ ಅಲೆಕ್ಸ್‌ ಬರ್ಗ್‌ ಟ್ವೀಟ್‌ ಮಾಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶ್ವೇತ ಭವನ ನಿರಾಕರಿಸಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ