ಫೇಸ್‌ಬುಕ್ ಜುಕರ್‌ಬರ್ಗ್ ರಾಜಕೀಯ ಪ್ರವೇಶ?
Team Udayavani, Jan 5, 2017, 3:45 AM IST
ವಾಷಿಂಗ್ಟನ್: ವಿಶ್ವದ ಜನಪ್ರಿಯ ಆನ್‌ಲೈನ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ? 2017ರಲ್ಲಿ ತಾವು ಸಾಗಲಿರುವ ಹಾದಿಯ ಕುರಿತು ಅವರು ನೀಡಿರುವ ಚಿತ್ರಣ ಇಂಥದ್ದೊಂದು ಚರ್ಚೆಗೆ ಕಾರಣವಾಗಿದೆ. 2016ರಲ್ಲಿ ಮ್ಯಾಂಡರೀನ್ ಭಾಷೆ ಕಲಿತೆ, 25 ಪುಸ್ತಕಗಳನ್ನು ಓದಿದೆ, ಸಣ್ಣ ಮನೆಯೊಂದನ್ನು ಕಟ್ಟಿಕೊಂಡಿದ್ದೇನೆ. ಆದರೆ 2017ರಲ್ಲಿ ಅಮೆರಿಕದ ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸುವ ಆಸೆ ನನ್ನದು. ಈ ಸಂವಾದದ ವೇಳೆ ಜನ ಹೇಗೆ ಬದುಕುತ್ತಿದ್ದಾರೆ, ಹೇಗೆ ಕೆಲಸ ಮಾಡುತ್ತಿದ್ದಾರೆ, ಭವಿಷ್ಯದ ಬಗ್ಗೆ ಅವರ ಕಲ್ಪನೆಗಳು ಏನಿದೆ ಎಂಬುದನ್ನೆಲ್ಲಾ ತಿಳಿಯುವ ಆಸೆ ನನ್ನದು ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಇದು ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಇದ್ದರೂ ಇರಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು