CONNECT WITH US  

ಜಾತಕಫ‌ಲ

  ಅನನ್ಯ ಗೋಪಾಲಪ್ಪ, ಜಮಖಂಡಿ
  ಕನಸಿನಲ್ಲಿ ಒಂದೇ ಸಮ ಹಾವುಗಳು ಗೋಚರಿಸುತ್ತಿರುತ್ತವೆ. ಹಣದ ಸಮಸ್ಯೆ ಇಲ್ಲ. ಆದರೆ ದೂರದ ದೇಶದಲ್ಲಿರು ಮಗನ ಮದುವೆಯ ಸಂಬಂಧ ಬಿರುಕು ಮನೆಯವರ ಆರೋಗ್ಯ ನನಗೆ ಸದಾ ಇದ್ದೇ ಇರುವ ಒತ್ತಡಗಳಿಂದ ರೋಸಿದ್ದೇನೆ. ಬದುಕಿಗೆ ಅರ್ಥವಿದೆಯೆ ಎಂಬ ಭಾವನೆ ಪರಿಹಾರವಿದೆಯೇ?
  ಎದ್ದು ಕಾಣುವ ರಾಹು ದೋಷ ನಿಮ್ಮ ಕುಟುಂಬದ ಸದಸ್ಯರೆಲ್ಲರ ಸಮಸ್ಯೆ. ರಾಹು ಸಮಸ್ಯೆ ಅತ್ಯಂತ ಸೂಕ್ಷ್ಮವಾದುದು. ಈ ಸಮಸ್ಯೆಯನ್ನು ಹೇಳುತ್ತ ಹಲವು ಜ್ಯೋತಿಷಿಗಳು (ಎಲ್ಲರೂ ಎಂದು ಭಾವಿಸದಿರಿ) ಏನೇನೋ ಪರಿಹಾರ ಕಾರ್ಯಕ್ರಮ ತಿಳಿಸಿ ಎಲ್ಲವನ್ನೂ ಒಗಟಾಗಿಸುವ ವಿಚಾರವೂ ಹೌದು. ಆದರೆ ರಾಹು ದೋಷ ಜೀವನದ ಬಹು ದೊಡ್ಡ ಸಮಸ್ಯೆಯನ್ನ ಶಾಂತಿ ಹಾಗೂ ಸುಖದ ವಿಚಾರದಲ್ಲಿ ಪದರುಗಟ್ಟಿಸುತ್ತದೆ. ಭುಜಂಗ ಕವಚವನ್ನೂ ಎಲ್ಲ ಕುಟುಂಬ ಸದಸ್ಯರು ಓದಿ. ಅಗಲವಾದ ವೀಳ್ಯದೆಲೆಯಲ್ಲಿ ಅರಿಷಿಣ, ಭತ್ತ, ಅಡಿಕೆ ಇರಿಸಿ (ಮನೆಯ ಬಳಿ ಅರಳಿ ಮರ ಮತ್ತು ಸರ್ಪದ ಕಲ್ಲು ಇದ್ದರೆ) ಅರಳೀ ಮರದತ್ತ ಇಟ್ಟು ಏಳು ಸುತ್ತು ಹಾಕಿ, ನಮಿಸಿ ಬನ್ನಿ. ತಕ್ಷಕ ರೂಪದ ಬೆಳ್ಳಿ ನಾಗಕ್ಕೆ ಪ್ರತಿ ಪಂಚಮಿಯಂದು ಹಾಲೆರೆಯಿರಿ. ಚಂದ್ರ ಪೀಡಾ ನಿವಾರಣಾ ಸ್ತೋತ್ರ 21 ಬಾರಿ ಓದಿ. ಇದಕ್ಕೆ ಕೇವಲ 5 ನಿಮಿಷ ಸಾಕು.

  ವರ್ಧಮಾನ ಜಿ. ಹುಬ್ಬಳ್ಳಿ
 ನನ್ನದು ವಿಚಿತ್ರ ಸಮಸ್ಯೆ. ಸಾಕಷ್ಟು ದುಡಿಯುತ್ತೇನೆ. ನೆಮ್ಮದಿ ಇದೆ ಎಂಬುದು ಹೌದಾದರೂ ನಾವು ಒಂದು ದೂರದ ಊರಿಗೆ ಬಿಸಿನೆಸ್‌ ಸಂಬಂಧ ಹೋಗಿ ಬಂದ ಮೇಲೆ ಆರೋಗ್ಯದ ಸಮಸ್ಯೆ ತಲೆದೋರಿದೆ. ಪತ್ನಿಗೆ, ನನಗೆ ಉದರ ಬೇನೆ. ಮಲ ವಿಸರ್ಜನೆಯಲ್ಲಿ ಕಿರಿಕಿರಿ. ನಾವು ಹೆಸರು ಹೇಳುವಂತಿಲ್ಲ. ಆ ಊರಲ್ಲಿ ನಾವು ಭೇಟಿಯಾದವರಲ್ಲಿ ಒಬ್ಬರು ( ಈ ವ್ಯಕ್ತಿಗೆ ಕುಖ್ಯಾತಿ ಇದೆ ಎಂಬುದು ನಂತರ ತಿಳಿಯಿತು) ಊಟದಲ್ಲಿ ಮದ್ದು ಹಾಕಿದ್ದಾರೆ. ಪರಿಹಾರ ಇದೆಯೇ?
   ನಿಮ್ಮಿಬ್ಬರ ಜಾತಕದಲ್ಲೂ ಈಗ ಸಾಡೇಸಾತಿ ಶನಿಕಾಟವಿದೆ. ಉದರದ ಭಾಗವನ್ನು ನಿಮ್ಮ ಜಾತಕದಲ್ಲಿ ಪ್ರತಿನಿಧಿಸುವ ಕುಜ ಶನೈಶ್ಚರನಿಗೆ ತಗುಲಿಕೊಂಡಿದ್ದು ಕುಜ ದಶಾ ಕೂಡ ನಡೆಯುತ್ತಿದೆ. ನಿಮ್ಮ ಮನೆಯವರಿಗೆ ಚಂದ್ರದಶಾದ ಕೊನೆಯ ದಿನಗಳು. ಮದ್ದಿನ ಅವಾಂತರ ತಳ್ಳಿ ಹಾಕುವಂತಿಲ್ಲ. ನುರಿತ ಉದರ ತಜ್ಞರನ್ನು (ಭಿನ್ನ ಭಿನ್ನ ವೈದ್ಯರ ಬಳಿ ಸಲಹೆ ಪಡೆಯಿರಿ) ಸಲಹೆ ಕೇಳಿ. ಲಗ್ನ ಭಾವದ (ನಿಮಗೆ ಬುಧ ನಿಮ್ಮ ಮನೆಯವರಿಗೆ ಗುರು ಗ್ರಹ) ಗಟ್ಟಿತನ ಉತ್ತವಾದುದರಿಂದ ವಾಸಿಯಾಗುತ್ತದೆ. ಇಬ್ಬರೂ ಕಾಲಭೈರವಾಷ್ಟಕ ಧನ್ವಂತರಿ ಅಷ್ಟೋತ್ತರ ಓದಿ. ಕ್ಷೇಮ.

 ರಮೇಶ ಪಾಟೀಲ, ಮಸ್ಕಿ
 ಲಾಗಾಯ್ತಿನಿಂದ ಕೃಷಿ ನಮ್ಮ ವೃತ್ತಿ. ಈಗೆರಡು ವರ್ಷಗಳಿಂದ ರತ್ನ ಮುತ್ತುಗಳ ವ್ಯಾಪಾರವನ್ನು ರೂಢಿಸಿಕೊಂಡಿದೆ. ಒಳ್ಳೆಯ ಲಾಭ, ಸಮಾಧಾನಗಳು ಕೂಡಿ ಬಂದವು. ಈಗ ಮೂರು  ತಿಂಗಳಿಂದ ಒಂದೇ ಸಮನೆ ಉಗುಳಿನಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದೆ. ಕೂಡಿ ಬರುವ ಮುತ್ತು ರತ್ನಗಳು, ಜಾತಕದ ಅರಿಷ್ಟ ದೋಷ ಈ ತೊಂದರೆಯನ್ನು ತರುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಸಮಸ್ಯೆ ಏನೆಂಬುದನ್ನು ಗ್ರಹಿಸಿ, ಪರಿಹಾರ ತಿಳಿಸುವಿರಾ?
   ಜಾತಕ ಪರಿಶೀಲನೆ ಮಾಡಿದ್ದೇನೆ. ನೀಚ ಚಂದ್ರನು ಶನಿ ಸಂಯೋಗದಿಂದ (ಸಾಡೇಸಾತಿ ದೋಷ) ಬಳಲುತ್ತಿದ್ದಾನೆ. ಶ್ವಾಸಕೋಶ ತಜ್ಞರಿಂದ ವಿಳಂಬ ಮಾಡದೆ ಸಲಹೆ ಪಡೆಯಿರಿ. ಹೆದರಬೇಡಿ. ಪ್ರತಿ ದಿನ ಚಂದ್ರಚೂಡ ಸಹಸ್ರ ನಾಮಾವಳಿ ಓದಿ. ಮುತ್ತು ರತ್ನಗಳ ವ್ಯಾಪಾರಕ್ಕೂ, ವ್ಯಾಧಿಗೂ ಸಂಬಂಧವಿಲ್ಲ. ಏನೋ ಹೇಳಿಬಿಡಬಹುದು ಎಂಬ ಭಯಬೇಡ. ಮರಣಾಧಿಪತಿ ಅಲ್ಪಾಯಸ್ಸು ಓದಗಿಸುವುದಿಲ್ಲ. ಇದು ಸ್ಪಷ್ಟ. ಕ್ಯಾನ್ಸರ್‌ ತಜ್ಞರನ್ನು ವಿಳಂಬ ಮಾಡದೆ ಭೇಟಿ ಮಾಡಿ. ಸೂಕ್ತ ಚಿಕಿತ್ಸೆಯಿಂದ ವ್ಯಾಧಿಕೊಂದು ಅಂತ್ಯ ಲಭಿಸುತ್ತದೆ. ದೇವರನ್ನು ನಂಬಿ. 


Trending videos

Back to Top