CONNECT WITH US  

ರಾಹುಲ್‌ ಗಾಂಧಿಗಾಗಿ ಪ್ರತ್ಯೇಕ ಪ್ರವಾಸಿ ಭಾರತೀಯ ದಿವಸ್‌!

ಬೆಂಗಳೂರು: ಪ್ರಧಾನಿ ಮೋದಿ ಅವರನ್ನು ನೋಡಲು ರಾಜಧಾನಿಯಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್‌ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿದ್ದು ವರದಿಯಾಗಿದೆ. ಇದು ಕಾಂಗ್ರೆಸ್‌ ಹೈಕಮಾಂಡ್‌ ಕಿವಿಗೂ ಬಿದ್ದಿದ್ದು, ರಾಹುಲ್‌ ಗಾಂಧಿಯವರಿಗೂ ಇದೇ ರೀತಿ ಜನ ಮನ್ನಣೆ ಇದೆ ಎಂದು ತೋರಿಸಲು ಪ್ರತ್ಯೇಕ "ಪ್ರವಾಸಿ ಭಾರತೀಯ ದಿವಸ್‌' ಆಚರಿಸಲಿದ್ದಾರೆ. ಪ್ರಧಾನಿ ಆಗಮಿಸಿದ್ದು ಸರ್ಕಾರಿ ಕಾರ್ಯಕ್ರಮಕ್ಕಾದರೂ, ರಾಹುಲ್‌ ಅವರಿಗಾಗಿ ಪ್ರತ್ಯೇಕ ಖಾಸಗಿ ಕಾರ್ಯಕ್ರಮ ನಡೆಸಲಾಗುವುದು. ಇದೂ ಬೆಂಗಳೂರಲ್ಲೇ ನಡೆಯಲಿದ್ದು, ವಿವಿಧ ದೇಶದಲ್ಲಿರುವ ಅನಿವಾಸಿ
ಭಾರತೀಯರನ್ನು ಆಮಂತ್ರಿಸಲಾಗುವುದು. ರಾಹುಲ್‌ ಅವರನ್ನು ನೋಡಲೂ ನೂಕುನುಗ್ಗಲು ಇದೆ ಎಂಬುದನ್ನು
ತೋರಿಸಲು ಸಣ್ಣ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಪ್ಲಾನ್‌ ಮಾಡಲಾಗಿದೆ. ಆಗ ಸಹಜವಾಗಿ ನೂಕುನುಗ್ಗಲು
ಉಂಟಾಗಲಿದೆ ಎಂದು ಹೇಳಲಾಗಿದೆ.

Tags: 

Trending videos

Back to Top