CONNECT WITH US  

ರಾಜಕಾರಣಿಗಳಿಗಷ್ಟೇ ಕಂಬಳಕ್ಕೆ ಅವಕಾಶ ನೀಡಲು ಚಿಂತನೆ

ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟುಗೆ ಅನುಮತಿ ನೀಡಿದಂತೆ ಕರ್ನಾಟಕದಲ್ಲಿ ಕಂಬಳಕ್ಕೂ ಅವಕಾಶ
ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಈ ಮಧ್ಯೆ ಈ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ
ಚಿಂತನೆ ನಡೆದಿದೆ. ಅದೇನೆಂದರೆ ಕಂಬಳ ಕ್ರೀಡೆಯಲ್ಲಿ ಪರಿಣಿತರಾದವರ ಬದಲು ರಾಜಕಾರಣಿಗಳಿಗಷ್ಟೇ ಕಂಬಳಕ್ಕೆ ಅವಕಾಶ ನೀಡಲಾಗುವುದು.

ಅವರು ಕೋಣಗಳನ್ನು ಓಡಿಸಲು ಬಾರುಕೋಲು ಬಳಸಬಾರದು. ಬದಲಾಗಿ ತಮ್ಮ ಮಾತಿನ ಛಾಟಿಯಿಂದಲೇ
ಕೋಣಗಳನ್ನು ಓಡಿಸಬೇಕು. ಒಬ್ಬರಿಗೊಬ್ಬರು ಪರಸ್ಪರ ಬೈದಾಡಿಕೊಳ್ಳಲು ಮುಕ್ತ ಅವಕಾಶವಿದೆ. ಕಾಂಗ್ರೆಸ್‌,
ಬಿಜೆಪಿ, ಜೆಡಿಎಸ್‌ನಿಂದ ತಲಾ 10 ಮಂದಿಗಷ್ಟೇ ಅವಕಾಶ. ಕಂಬಳಕ್ಕೆ ಮಂಗಳೂರಿನ ಬದಲು ಬೆಂಗಳೂರಿನಲ್ಲೇ
ವ್ಯವಸ್ಥೆ ಮಾಡಲಾಗುವುದು. ಕಂಬಳಕ್ಕೆ ಬೇಕಾದ ಸಿದ್ಧತೆಗಳನ್ನು ರಾಜಕಾರಣಿಗಳೇ ಮಾಡಿಕೊಳ್ಳಬೇಕು.
ತೀರ್ಪುಗಾರರಾಗಿ ಹೈ ಕಮಾಂಡ್‌ನಿಂದ ಒಬ್ಬರನ್ನು ಕರೆಸಲಾಗುವುದು. ಒಂದು ವೇಳೆ ಕಂಬಳ ಯಶಸ್ವಿ
ಯಾದರೆ ಮಾತ್ರ ನೈಜ ಕಂಬಳಕ್ಕೆ ಅನುಮತಿ ನೀಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

Trending videos

Back to Top