CONNECT WITH US  

ಅಡ್ಡಹೊಳೆ-ಬಿ.ಸಿ.ರೋಡ್‌ ಚತುಷ್ಪಥ ಸೆಪ್ಟಂಬರ್‌ನಲ್ಲಿ ಕಾಮಗಾರಿ ಆರಂಭ

ಮಂಗಳೂರು: ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೆಪ್ಟಂಬರ್‌ನಲ್ಲಿ ಆರಂಭಗೊಳ್ಳಲಿದ್ದು, ಸ್ವಾಧೀನ ಪಡಿಸಬೇಕಾಗಿದ್ದ ಒಟ್ಟು 270.65 ಹೆಕ್ಟೇರ್‌ ಭೂಮಿಯ ಪೈಕಿ ಈಗಾಗಲೇ 251.54 ಹೆಕ್ಟೇರ್‌ ಭೂಮಿ ಸ್ವಾಧೀನಗೊಳಿಸಲಾಗಿದೆ.

ಜಿ.ಪಂ. ಸಭಾಂಗಣದಲ್ಲಿ ಸಂಸದ ನಳಿನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ನರೇಗಾ ಹಾಗೂ ವಿವಿಧ ಕೇಂದ್ರ ಅನುದಾನಿತ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಭೂಸ್ವಾಧೀನ ಮತ್ತು
ಸಕ್ಷಮ ಪ್ರಾಧಿಕಾರದ ಅಧಿಕಾರಿ ಮಂಜುನಾಥ್‌ ಈ ಕುರಿತು ತಿಳಿಸಿದರು.

65 ಕಿ.ಮೀ. ಉದ್ದ
65 ಕಿ.ಮೀ. ಉದ್ದದ ಈ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿ ಶೇ. 92.93ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಾಕಿಯಿರುವ 15.02 ಹೆಕ್ಟೇರ್‌ ಭೂಮಿಯ ಸ್ವಾಧೀನ ಶೀಘ್ರವೇ ನಡೆಯಲಿದೆ. ಪಾಣೆಮಂಗಳೂರು, ನರಿಕೊಂಬು ಹಾಗೂ ಕಲ್ಲಡ್ಕ ಬಳಿ ಭೂಸ್ವಾಧೀನ ಕಾಮಗಾರಿ ಬಾಕಿಯಿದೆ. ಈ ಚತುಷ್ಪಥ ಕಾಮಗಾರಿಗೆ ಒಳಪಡುವ ಸರ್ವಿಸ್‌ ರಸ್ತೆ ಗಳೂ ಕಾಂಕ್ರಿಟೀಕರಣಗೊಳ್ಳಲಿವೆ ಎಂದರು.

ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಯೋಜನಾ ಅಧಿಕಾರಿ ವಾದಿರಾಜ ಬಿ. ಕಟ್ಟಿ ಮಾತ ನಾಡಿ, ಪ್ರತಿದಿನ ಅರ್ಧ ಕಿ.ಮೀ. ಕಾಮಗಾರಿ ಗುರಿ ಹೊಂದಲಾಗಿದೆ. ಉಪ್ಪಿನಂಗಡಿಯಿಂದ ಗುಂಡ್ಯದ ವರೆಗೆ ರಸ್ತೆ ಬದಿಯಿರುವ ಸುಮಾರು 7,000 ಮರಗಳನ್ನು ಕಡಿಯಬೇಕಿದ್ದು,ಈಗಾಗಲೇ 4,500 ಮರಗಳನ್ನು ಕಡಿಯಲಾಗಿದೆ. ದಿನವೊಂದಕ್ಕೆ 50 ಮರಕಡಿಯಲಾಗುತ್ತಿದ್ದು, ದಿನದಲ್ಲಿ 6ರಿಂದ 7 ಗಂಟೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂದರು.

ಪಂಪ್‌ವೆಲ್‌ ಮಾರ್ಚ್‌ಗೆ,ತೊಕ್ಕೊಟ್ಟು  ಜನವರಿಗೆ
ಪಂಪ್‌ವೆಲ್‌ ಫ್ಲೆ  „ಓವರ್‌ ಕಾಮ ಗಾರಿ ಜೂನ್‌ ತಿಂಗಳೊಳಗೆ ಪೂರ್ಣ ಗೊಳಿ ಸುವುದಾಗಿ ತಿಳಿಸಿದ್ದರೂ ಕಾಮಗಾರಿ ವಿಳಂಬವಾಗಿ ರುವ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತ ಪಡಿಸಿದರು. ರಾ.ಹೆ. ಪ್ರಾಧಿಕಾರದ ಅಧಿಕಾರಿ ಮಾತನಾಡಿ, ನವಯುಗ್‌ ಏಜೆನ್ಸಿಯ ವರ ಹಣ ಕಾಸಿನ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ. ತೊಕ್ಕೊಟ್ಟು ಮೇಲ್ಸೇತುವೆ ಜನವರಿಗೆ ಪಂಪ್‌ವೆಲ್‌ ಮೇಲ್ಸೇತುವೆ ಮಾರ್ಚ್‌ನೊಳಗೆ ಪೂರ್ಣಗೊಳ್ಳಲಿದೆ ಎಂದರು.

ಜಿ+3 ಮಾದರಿ ವಸತಿ ಸಂಕೀರ್ಣ
ಅರ್ಹರಿಗೆ ವಸತಿ ನಿವೇಶನ ಒದ ಗಿಸಲು ಜಿ+3 ಮಾದರಿಯ ವಸತಿ ಸಂಕೀರ್ಣಕ್ಕಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪದವು ಗ್ರಾಮದ ರಾಜೀವ್‌ ನಗರ ದಲ್ಲಿ 10 ಎಕರೆ, ಸುರತ್ಕಲ್‌ ಇಡ್ಯಾ ದಲ್ಲಿ 3.86 ಹಾಗೂ ಸುರತ್ಕಲ್‌ನಲ್ಲಿ 1.86 ಎಕರೆ ಜಾಗವನ್ನು ಗುರುತಿಸ ಲಾಗಿದೆ. ರಾಜೀವ್‌ ನಗರ ದಲ್ಲಿ 930 ಮನೆಗಳ ನಿರ್ಮಾಣಕ್ಕೆ ಅನು ಮೋದನೆ ದೊರಕಿದ್ದು, ಟೆಂಡರ್‌ ಪ್ರಕ್ರಿಯೆ ಯಲ್ಲಿದೆ. ಸುರತ್ಕಲ್‌ನಲ್ಲಿ 600 ಫ‌ಲಾನು ಭವಿಗಳಿಗೆ ಮನೆ ಸಂಕೀರ್ಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧ ಗೊಂಡಿದೆ. ಸುರತ್ಕಲ್‌ನಲ್ಲಿ 300 ಫ‌ಲಾನು ಭವಿ ಗಳು ಸೇರಿ ಒಟ್ಟು ನಗರದಲ್ಲಿ 2,000 ಮನೆಗಳು ನಿರ್ಮಾಣ ವಾಗ ಲಿವೆ ಎಂದು ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌ ಸಭೆಗೆ ಮಾಹಿತಿ ನೀಡಿದರು. 

21,000 ಕೋಟಿ ರೂ. ಸಾಲ
ಇ ಬ್ಯಾಂಕಿಂಗ್‌ ಯೋಜನೆ ಸಂಬಂಧಿಸಿ, ಜಿಲ್ಲೆಯಲ್ಲಿ ಒಟ್ಟು 59,000 ಕೋಟಿ ರೂ. ಬ್ಯಾಂಕಿಂಗ್‌ ವ್ಯವಹಾರ ವಿದ್ದು, 21,000 ಕೋಟಿ ರೂ.ಗಳನ್ನು ಸಾಲ ಒದಗಿಸಲಾಗಿದೆ. ಮುದ್ರಾ ಶಿಶು ಯೋಜನೆಯಡಿ ಸ್ವ ಉದ್ಯೋಗಕ್ಕಾಗಿ 50,000 ರೂ. ವರೆಗಿನ ಸಾಲ ಯೋಜನೆಯಡಿ 94 ಕೋಟಿ ರೂ., ಮುದ್ರಾ ಕಿಶೋರ್‌ ಯೋಜನೆಯಡಿ 403 ಕೋಟಿ ರೂ., ಮುದ್ರಾ ತರುಣ್‌ ಯೋಜನೆಯಡಿ 206 ಕೋಟಿ ರೂ. ಸೇರಿದಂತೆ ಒಟ್ಟು 50,706 ಫ‌ಲಾನುಭವಿಗಳಿಗೆ 703 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.

ಕೌಶಲಾಭಿವೃದ್ಧಿ  ತರಬೇತಿ: ಸಂಸದರಿಂದ ತರಾಟೆ
ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ತರಬೇತಿ ಒದಗಿಸಲು ಆಯ್ಕೆಯಾಗಿರುವ ಸರಕಾರೇತರ ಸಂಸ್ಥೆಯ (ಎನ್‌ಜಿಒ) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂಸ್ಥೆಯ ಪ್ರತಿನಿಧಿಯನ್ನು ಸಂಸದ ನಳಿನ್‌ಕುಮಾರ್‌ ಕಟೀಲು ತರಾಟೆಗೆ ತೆಗೆದುಕೊಂಡರು. ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ಬರೆಯುವುದಾಗಿ ಸಂಸದರು ಎಚ್ಚರಿಕೆ ನೀಡಿದರು.

ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಅವರು, ತರಬೇತಿ ಪಡೆದ 440 ಮಂದಿಯಲ್ಲಿ 252 ಮಂದಿಗೆ ಮಾತ್ರವೇ ಉದ್ಯೋಗ ದೊರಕಿದ್ದು, ಕೌಶಲಾಭಿವೃದ್ಧಿ ತರಬೇತಿಯ ಬಳಿಕ ಉದ್ಯೋಗ ಕೊಡಿಸುವಲ್ಲಿಯೂ ಸಂಸ್ಥೆ ಹಿಂದೆ ಬಿದ್ದಿದೆ. ವಿವಿಧೆಡೆಯಿರುವ ಉದ್ಯೋಗವಕಾಶಗಳನ್ನು ಗುರುತು ಮಾಡಿಕೊಂಡು ಅವುಗಳಿಗೆ ಪೂರಕವಾದ ತರಬೇತಿ ಒದಗಿಸಿದಲ್ಲಿ ಸಫಲವಾಗುತ್ತದೆ. ಗ್ರಾಮೀಣ ಪ್ರದೇಶದ ಯುವ ಅಭ್ಯರ್ಥಿಗಳಿಗೆ ಸೂಕ್ತವಾದ ರೀತಿಯಲ್ಲಿ ತರಬೇತಿ ನೀಡಿ ಅವರಿಗೆ ಅಗತ್ಯ ಮಾರ್ಗದರ್ಶನ ಒದಗಿಸಬೇಕಾಗಿದೆ ಎಂದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top