CONNECT WITH US  

ಹಾವುಗಳ ಮಿಲನ ; ವೀರ್ಯ ಸ್ಖಲನ...!!! - Exclusive ವಿಡಿಯೋ

ಹಾವುಗಳ ಮಿಲನ ಮತ್ತು ಬೆಣೆ ಸುತ್ತಿಕೊಳ್ಳುವಿಕೆ ಕುರಿತಾಗಿ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿರುವ ನಂಬಿಕೆ - ಮೌಡ್ಯತೆಗಳ ಕುರಿತಾಗಿ ವಿಡಿಯೋ ಪುರಾವೆ ಸಹಿತ ಇಲ್ಲಿ ವಿವರಿಸಿದ್ದಾರೆ ಖ್ಯಾತ ಉರಗ ತಜ್ಞರಾಗಿರುವ ಗುರುರಾಜ್‌ ಸನಿಲ್‌ ಅವರು. ನೀವು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿದಲ್ಲಿ ಹಾವುಗಳ ಮಿಲನ ಮತ್ತು ಹೊಡೆದಾಟದ ಕುರಿತಾಗಿ ನಿಮಗೆ ಸ್ಪಷ್ಟ ಚಿತ್ರಣ ಸಿಗಲಿದೆ. ನಮ್ಮ ಪರಿಸರದ ಭಾಗವಾಗಿರುವ ಹಾವುಗಳ ಕುರಿತಾಗಿ ಜನಮಾನಸದಲ್ಲಿ ನೆಲೆಯಾಗಿರುವ ಹಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಸದುದ್ದೇಶದಿಂದ ಗುರುರಾಜ್‌ ಅವರೇ ಈ ವಿಡಿಯೋವನ್ನು ಉದಯವಾಣಿಗೆ ಒದಗಿಸಿದ್ದಾರೆ.

ಇಲ್ಲಿರುವುದು ಕೇರೆ ಹಾವುಗಳ ಮಿಲನದ ವಿಡಿಯೋ. ಉಡುಪಿಯ ಅಲೆವೂರು ಬಳಿಯ ಹೆಂಚಿನ ಮನೆಯೊಂದರ ಮಾಡಿನಲ್ಲಿ ಕೇರೆ ಹಾವುಗಳು ಮಿಲನವಾಗುತ್ತಿರುವ ಸಂದರ್ಭದ ವಿಡಿಯೋ ಇದು. ಮನೆಯವರ ಕೋರಿಕೆಯ ಮೇರೆಗೆ ಗುರುರಾಜ್‌ ಅವರು ಸ್ಥಳಕ್ಕಾಗಮಿಸಿ ಮಿಲನಕ್ರಿಯೆಯಲ್ಲಿದ್ದ ಹಾವುಗಳನ್ನು ಅಲ್ಲಿಂದ ಬಿಡಿಸಿ ಅವುಗಳನ್ನು ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ಈ ಹಾವುಗಳು ಮತ್ತೆ ಮಿಲನ ಹೊಂದಲು ಅವಕಾಶ ಮಾಡಿಕೊಟ್ಟರು. ಈ ರೀತಿಯಾಗಿ ಯಾಕೆ ಮಾಡಬೆಕಾಯಿತು ಎಂಬುದಕ್ಕೆ ಗುರುರಾಜ್‌ ಅವರು ಈ ವಿಡಿಯೋದಲ್ಲಿ ವಿವರಣೆಯನ್ನು ನೀಡಿದ್ದಾರೆ.

Video Courtesy: Avinash Kamath
Special Thanks to: Gururaj Sanil and Team

Back to Top