CONNECT WITH US  

ಸುದ್ದಿ ಕೋಶ: ಆಯುಷ್ಮಾನ್‌ ಭಾರತ ಜಾರಿಗೆ ಸಿದ್ಧತೆ ಬಿರುಸು

ಮುಂದಿನ ತಿಂಗಳ 15ರೊಳಗಾಗಿ ಕೇಂದ್ರ ಸರ್ಕಾರ "ಆಯುಷ್ಮಾನ್‌ ಭಾರತ' ಯೋಜನೆ ಜಾರಿಗೊಳಿಸಲು ಎಲ್ಲಾ ಸಿದ್ಧತೆ ಪೂರ್ತಿಗೊಳಿಸಲು ಮುಂದಾಗಿದೆ. ಇದರ ಜತೆಗೆ ಒಂದು ಕುಟುಂಬದಲ್ಲಿರುವವರ ಎಲ್ಲಾ ಹೆಸರುಗಳನ್ನು ಮುದ್ರಿಸಿರುವ ಕಾರ್ಡ್‌ ಅನ್ನೂ ನೀಡಲಾಗುತ್ತದೆ. ಜತೆಗೆ  ಎಲ್ಲರಿಗೂ ವೈಯಕ್ತಿವಾಗಿ ಬರೆಯಲಾಗಿರುವ ಪತ್ರವನ್ನೂ ನೀಡಲಾಗುತ್ತದೆ. ಅದನ್ನು ವಿತರಿಸಲೂ ಯೋಜನೆ ರೂಪಿಸಲಾಗಿದೆ.

ವಿತರಣೆ ಹೇಗೆ?
ಜಿಲ್ಲೆ, ಗ್ರಾಮ ಮಟ್ಟದಲ್ಲಿ ಸಾರ್ವ ಜನಿಕ ಸಂಪರ್ಕ ಕಾರ್ಯ ಕ್ರಮ ಏರ್ಪಡಿಸಿ ವಿತರಣೆ
ಅದಕ್ಕಾಗಿ "ಆಯುಷ್ಮಾನ್‌ ಪಖ್ವಾರಾ' ಎಂಬ ಕಾರ್ಯಕ್ರಮ ನಡೆಯಲಿದೆ.
ಆಯಾ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳನ್ನು ಗುರುತಿಸಿ ಅಲ್ಲಿಗೆ ಕಾರ್ಡ್‌ಗಳ ರವಾನೆ
ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ಕಾರ್ಡ್‌ಗಳ ವಿತರಣೆ.

ಬರಲಿದೆ ಕಾಲ್‌ ಸೆಂಟರ್‌
24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಾಲ್‌ ಸೆಂಟರ್‌ ಶೀಘ್ರ ಆರಂಭ
ಸದ್ಯ ನವದೆಹಲಿಯಲ್ಲಿ ಇರಲಿದೆ. ನಂತರ ವಲಯ ಮಟ್ಟದಲ್ಲಿ ಆರಂಭಿಸಲು ಕ್ರಮ
ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸಂಬಂಧಿಸಿದ ವಿವರ ಪಡೆದುಕೊಳ್ಳಲು ಅನುಕೂಲ
ಆನ್‌ಲೈನ್‌ ಚಾಟ್‌, ಇ-ಮೇಲ್‌ ಮೂಲಕ ಕೇಳಲಾಗುವ ಪ್ರಶ್ನೆ, ಸಂಶಯ ಪರಿಹಾರ ನೀಡಲೂ ಕ್ರಮ

ಸುರಕ್ಷತೆಗೆ ಕ್ರಮ
ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಎಚ್‌ಎ) ಮಾಹಿತಿ ಪಡೆಯುವ ಸಂಸ್ಥೆ ಡೇಟಾ ಸಂರಕ್ಷಣೆಗೆ ಒತ್ತು.


Trending videos

Back to Top