CONNECT WITH US  

"ಅಯೋಗ್ಯ'ನಿಗೆ ದನಿಯಾದ ಅಂಥೋನಿ ದಾಸ್‌: ಭರ್ಜರಿ ಸಾಂಗ್‌ ವೀಕ್ಷಿಸಿ

ಸತೀಶ್‌ ನೀನಾಸಂ  ನಾಯಕರಾಗಿ ನಟಿಸಿರುವ "ಅಯೋಗ್ಯ' ಚಿತ್ರದ ಸದ್ದು ಆರಂಭವಾಗಿದೆ. ಈಗಾಗಲೇ ಚಿತ್ರತಂಡ "ಏನಮ್ಮಿ ಏನಮ್ಮಿ' ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದು ಒಂದು ವಿಚಾರವಾದರೆ ತಮಿಳಿನ ಖ್ಯಾತ ಗಾಯಕ ಅಂಥೋನಿ ದಾಸ್‌ "ಅಯೋಗ್ಯ' ಚಿತ್ರದ ಹಾಡೊಂದನ್ನು ಹಾಡಿದ್ದಾರೆ. "ಟಗರು' ಸಿನಿಮಾದ "ಟಗರು ಬಂತು ಟಗರು' ಹಾಡನ್ನು ನೆನೆಸಿಕೊಂಡರೆ ನಿಮಗೆ ಅಂಥೋನಿ ದಾಸ್‌ ಅವರ ಧ್ವನಿ ಕಿವಿಯಲ್ಲಿ ಗುಂಯ್‌ಗಾಡುತ್ತದೆ. ಈಗ ಅಂಥೋನಿ ಮತ್ತೂಂದು ಕನ್ನಡ ಸಿನಿಮಾದಲ್ಲಿ ಹಾಡಿದ್ದಾರೆ. ಅದು "ಅಯೋಗ್ಯ'. ಹೌದು, "ಅಯೋಗ್ಯ'  ಚಿತ್ರದ ಹಾಡೊಂದನ್ನು ಅಂಥೋನಿ ದಾಸ್‌ ಹಾಡಿದ್ದಾರೆ. ಆ ಹಾಡಿಗೆ ಬೇರೆ ತರಹದ ಧ್ವನಿ ಬೇಕಾದ ಕಾರಣ ಚಿತ್ರತಂಡ, ಅಂಥೋನಿ ದಾಸ್‌ ಅವರಿಂದ ಹಾಡಿಸಿದೆ. ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಚಂದ್ರಶೇಖರ್‌ ನಿರ್ಮಿಸಿದ್ದಾರೆ. ಈ ಹಿಂದೆ "ಚಮಕ್‌' ಚಿತ್ರ ಮಾಡಿರುವ ಚಂದ್ರಶೇಖರ್‌ ಈಗ "ಅಯೋಗ್ಯ'ನ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಚಿತ್ರದ ಭರ್ಜರಿ ಸಾಂಗ್‌ ವೀಕ್ಷಿಸಿ.

Back to Top